
ಬೆಂಗಳೂರು (ಅಕ್ಟೋಬರ್ 7) : ಭಾರ್ತಿ ಏರ್‍ಟೆಲ್ ತನ್ನ ಪೋಸ್ಟ್‌ಪೇಯ್ಡ್ ಪ್ಲಾನ್ (Airtel Postpaid Plans) ಬೆಲೆಯಲ್ಲಿ ಏರಿಕೆ ಮಾಡಿದೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಪೋಸ್ಟ್‌ಪೇಯ್ಡ್‌ನ ಯೋಜನೆಯ ಬೆಲೆಯನ್ನು ₹50 ರಷ್ಟು ಏರಿಕೆ ಮಾಡಿದೆ. ಬೆಲೆ ಏರಿಕೆ ಜೊತೆಗೆ ವರ್ಷಕ್ಕೆ ಒಂದು ಅಂತಾರಾಷ್ಟ್ರಿಯ ರೋಮಿಂಗ್ ಟೂರ್ ನೀಡುವ ಬಗ್ಗೆ ಭರವಸೆ ನೀಡಿದೆ. ಆದರೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗ್ರಾಹಕರು ಕಂಪನಿ ಮೇಲೆ ಅಸಮಾಧಾನಗೊಂಡಿದ್ದಾರೆ.
ಪ್ಲಾನ್ ಯಾವಾಗಿಂದ ಜಾರಿ ಆಗಲಿದೆ ಎಂದು ನೋಡೋದಾರೆ.. ನಾಳೆಯಿಂದಲೇ (ಅಕ್ಟೋಬರ್ 8) ರಿಚಾರ್ಜ್ ಬೆಲೆ ಏರಿಕೆ ತಟ್ಟಲಿದೆ. ಜೊತೆಗೆ ಕಂಪನಿ ನೀಡಿರುವ ಮಾಹಿತಿ ಪ್ರಕಾರ, ರಿಚಾರ್ಜ್ ಬೆಲೆಯನ್ನು ಏರ್ ಟೆಲ್ ಹೆಚ್ಚಿಸಿರಬಹುದು. ಆದರೆ ಅದು ಗಮಾರ್ನ ಸೇವೆಯನ್ನು ನೀಡುತ್ತಿದೆ ಅನ್ನೋದು ಕೂಡ ಅಷ್ಟೇ ಸತ್ಯ. ಒಂದು ವೇಳೆ ನಮ್ಮ ಗ್ರಾಹಕರು ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ ಒಂದು ಉಚಿತರ ರೋಮಿಂಗ್ ಪ್ರವಾಸ ನೀಡಲಿದೆ ಎಂದಿದೆ. ಅಲ್ಲದೇ ಹೊಸ ಪ್ಲಾನ್ ಪ್ರಕಾರ.. ಉಚಿತ ರೂಮಿಂಗ್ ಸೇವೆಗೆ ₹2000 ಹೆಚ್ಚುವರಿಯಾಗಿ ಪೋಸ್ಟ್‌ಪೇಯ್ಡ್ ಪ್ಲಾನ್ ಪ್ರಾರಂಭಿಸುವುದಾಗಿ ತಿಳಿಸಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದು ಹೇಳಿದೆ.
ಕಂಪನಿ ತನ್ನ ಪ್ರಕಟಣೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ.. ಅಕ್ಟೋಬರ್ 8 ರಿಂದ ಪೋಸ್ಟ್‌ಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಲಭ್ಯ ಆಗಲಿದೆ. ಗ್ರಾಹಕರಿಗೆ ವರ್ಷಕ್ಕೆ ಒಂದು ವಿದೇಶಿ ಪ್ರವಾಸದಲ್ಲಿ ಉಚಿತ ರೋಮಿಂಗ್ ಇರಲಿದೆ. ಜೊತೆಗೆ ಅವರಿಗೆ ಹಿಂದಿನ ಎಲ್ಲಾ ಪ್ರಯೋಜನಗಳು ಕೂಡ ಉಳಿದುಕೊಳ್ಳಲಿದೆ. ಇನ್ನೂ ರೂಮಿಂಗ್ ಪ್ಯಾಕ್‌ನಲ್ಲಿ 5ಜಿಬಿ ಡೇಟಾ, 60 ನಿಮಿಷಗಳ ಉಚಿತ ಕರೆ, 25 ಔಟ್ ಗೋಯಿಂಗ್ ಕರೆಗಳನ್ನ ನೀಡಲಿದೆ. ಇನ್ನು ಈ ಯೋಜನೆಯು ಐದು ದಿನಗಳವರೆಗೆ ಮಾತ್ರ ಮಾನ್ಯವಿರುತ್ತದೆ. ಒಂದು ಇನ್‌ಕಮಿಂಗ್ ಎಸ್‌ಎಂಎಸ್ ಹಾಗೂ 25 ಔಟ್ ಕಮಿಂಗ್ ಮೆಸೇಜ್‌ಗೆ ಅವಕಾಶ ನೀಡುತ್ತದೆ.
ಏರ್‍ಟೆಲ್‌ನ ಅತೀ ಕಡಿಮೆ ಪೋಸ್ಟ್‌ಪೇಯ್ಡ್ ರಿಚಾರ್ಜ್ ಬೆಲೆ ಅಂದ್ರೆ 499 ರೂಪಾಯಿ. ₹ 499 ನಿಂದ ಪ್ಲಾನ್ ಪ್ರಾರಂಭವಾಗಲಿದೆ. ಇದರಲ್ಲಿ ಅನಿಯಮಿತ ಡೇಟಾ ಮತ್ತು ಕರೆಗಳನ್ನು ನೀಡುತ್ತದೆ. ಜೊತೆಗೆ ಸ್ಪ್ಯಾಮ್‌ನಿಂದ ರಕ್ಷಣೆ ಪಡೆಯಲು ವಿಶಿಷ್ಟ ಫೀಚರ್ಸ್ ಸಿಗಲಿದೆ. Xstream Play Premium ಮತ್ತು Google One ನಂತಹ ಪ್ರಯೋಜನ ಸಹ ಒಳಗೊಂಡಿದೆ.
ಕುಟುಂಬ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ.. ₹749 ಯೋಜನೆಯು ಎರಡು ಸಿಮ್‌ಗಳೊಂದಿಗೆ ಬರುತ್ತದೆ. ₹1,049 ಯೋಜನೆಯು ಮೂರು ಸಿಮ್‌ಗಳನ್ನು ಒಳಗೊಂಡಿದೆ. ₹1,249 ಮತ್ತು ₹1,449 ಯೋಜನೆಗಳು ನಾಲ್ಕು ಸಿಮ್‌ಗಳನ್ನು ಒಳಗೊಂಡಿರುತ್ತದೆ. 1799 ಪ್ಲಾನ್‌ನಲ್ಲಿ ಐದು ಸಿಮ್‌ಗಳನ್ನ ಒಳಗೊಂಡಿರುತ್ತದೆ. ಜೊತೆಗೆ ಅಮೇಜಾನ್ ಪ್ರೈಮ್, ಜಿಯೋ ಹಾಟ್‌ಸ್ಟಾರ್ ಆಪಲ್ ಮ್ಯೂಸಿಕ್ ಸೇರಿದಂತೆ ಅನೇಕ ಪ್ರಯೋಜನಗಳನ್ನ ನೀಡಲಿದೆ.
ಏರ್‍ಟೆಲ್‌ನ ಹೊಸ ಪೋಸ್ಟ್‌ಪೇಯ್ಡ್ ಪ್ಲಾನ್, ಹೊಸ ಗ್ರಾಹಕರಿಗೆ ಮಾತ್ರ ಸೀಮಿತವಾಗಿಲ್ಲ. ಈಗಾಗಲೇ ಪೋಸ್ಟ್‌ಪೇಯ್ಡ್ ಬಳಸುತ್ತಿರುವ ಬಳಕೆದಾರರು ಕೂಡ ಇದರ ಲಾಭವನ್ನು ಪಡೆಯಬಹುದು. ಹತ್ತಿರದ ಏರ್‍ಟೆಲ್ ಆಫೀಸ್‌ಗೆ ಹೋಗಿ ತಮ್ಮ ಪ್ಲಾನ್ ಅನ್ನು ಅಪ್‌ಗ್ರೇಡ್ ಮಾಡಬಹುದು. ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಒಂದು ತಿಂಗಳ ಒಳಗೆ ಏರ್‍ಟೆಲ್‌ನ ಹಳೆಯ ಗ್ರಾಹಕರು ತಮ್ಮ ಪ್ಲಾನ್ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.