ಬಿಗ್​ಬಾಸ್​ ಫ್ಯಾನ್ಸ್​ಗೆ ಮತ್ತೊಂದು ಆಘಾತ: ಸುದೀಪ್​ ಬಳಿಕ ಮನೆಯಿಂದ ಖುದ್ದು ಬಿಗ್​ಬಾಸೇ ಹೊರಕ್ಕೆ! ಏನಾಗ್ತಿದೆ ಇಲ್ಲಿ?

By Suchethana D  |  First Published Oct 14, 2024, 1:41 PM IST

ಇದೇ ತಮ್ಮ ಕೊನೆಯ ಬಿಗ್​ಬಾಸ್​ ಎಂದು ನಿನ್ನೆಯಷ್ಟೇ ಸುದೀಪ್​ ಅವರು ಹೇಳಿದ ಬೆನ್ನಲ್ಲೇ ಇದೀಗ ಖುದ್ದು ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬರುವುದಾಗಿ ಘೋಷಿಸಿದೆ. ಏನಿದು?
 


ಒಂದೆಡೆ ಬಿಗ್​ಬಾಸ್​  ನಡೆಸಿಕೊಡುತ್ತಿರುವ ಸುದೀಪ್ ಅವರು ಬಿಗ್​ಬಾಸ್​ ನಿರೂಪಣೆ ಇದೇ ಕೊನೆ ಎಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಇದೀಗ ಸ್ಪರ್ಧಿಗಳಿಗೆ ಇನ್ನೊಂದು ಶಾಕ್​ ಎದುರಾಗಿದೆ. ಅದೇನೆಂದರೆ ಇದೀಗ ಬಿಗ್​ಬಾಸೇ ಖುದ್ದಾಗಿ ಬಿಗ್​ಬಾಸ್​​ ಮನೆಯಿಂದ ಹೊರಕ್ಕೆ ಬರುವುದಾಗಿ ಅನೌನ್ಸ್​ ಮಾಡಲಾಗಿದೆ. ಬಿಗ್​ಬಾಸ್​ ಮನೆಯ ಫೋನ್​ ರಿಂಗ್​ ಆಗುತ್ತಿದ್ದಂತೆಯೇ ಸ್ಪರ್ಧಿಯೊಬ್ಬರು ಫೋನ್​ ರಿಸೀವ್​ ಮಾಡಿದಾಗ, ಅತ್ತ ಕಡೆಯಿಂದ ಬಂದ ಬಿಗ್​ಬಾಸ್​ ದನಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 

ಅಷ್ಟಕ್ಕೂ ಫೋನ್​ನಲ್ಲಿ ಬಿಗ್​ಬಾಸ್​ ದನಿ ಹೇಳಿದ್ದು ಏನೆಂದರೆ, ನಿಮ್ಮೆಲ್ಲರ ವರ್ತನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಉಡಾಫೆ, ಅಪ್ರಾಮಾಣಿಕತೆಯ ನಡೆ ಇತ್ಯಾದಿಗಳಿಂದ ಬೇಸತ್ತು ಈ ಕ್ಷಣದಿಂದ ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ. ​ಈ ಕ್ಷಣದಿಂದ ಬಿಗ್​ಬಾಸ್ ನಿಮ್ಮೊಂದಿಗೆ ಇರಲ್ಲ ಎಂಬ ದನಿ ಬಂದಿದೆ. ಇದನ್ನು ಕೇಳಿ ಸ್ಪರ್ಧಿಗಳು ಶಾಕ್​ ಆಗಿದ್ದಾರೆ. 

Tap to resize

Latest Videos

undefined

ಬಿಗ್​ಬಾಸ್​ಗೆ ಸುದೀಪ್​ ಗುಡ್​ಬೈ ಹೇಳಲು ಇದೇ ಕಾರಣವಾಯ್ತಾ? ಚರ್ಚೆಗೆ ಗ್ರಾಸವಾಗ್ತಿದೆ ಮಾಜಿ ಸ್ಪರ್ಧಿಯ ಟ್ವೀಟ್​

ಅಷ್ಟಕ್ಕೂ ನಿನ್ನೆಯಷ್ಟೇ,  ಬಿಗ್​ಬಾಸ್​ಗೆ ಸುದೀಪ್​ ಅವರು ಗುಡ್​ಬೈ ಹೇಳುವ ಮೂಲಕ ಅಸಂಖ್ಯ ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. 10 ಸೀಸನ್​ ಪೂರೈಸಿ 11ನೇ ಸೀಸನ್​ ಶುರುವಾಗಿ ಕೆಲವೇ ದಿನಗಳಲ್ಲಿ ಸುದೀಪ್​ ಅವರು ಈ ದಿಢೀರ್​ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದೀಗ ಖುದ್ದು ಬಿಗ್​ಬಾಸ್​ ಈ ಹೇಳಿಕೆ ನೀಡಿರುವ ಕಾರಣ ಮತ್ತೊಮ್ಮೆ ಆಘಾತ ಎದುರಾಗಿದೆ. #BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿಯ ಬಗ್ಗೆ ಟಿವಿಆರ್ (ಸಂಖ್ಯೆ)ಯಲ್ಲಿ ಕಾಣುತ್ತಿದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು.  ನಾನು ಈಗ ಏನು ಬೇರೆ ಕಡೆಗೆ ನನ್ನ ನಡೆಯನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ​​ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು  ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ  ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಲವ್ ಮತ್ತು ಹಗ್‌ ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು  ಎಂದು ಟ್ವೀಟ್‌ ನಲ್ಲಿ ಸುದೀಪ್​ ಬರೆದುಕೊಂಡಿದ್ದಾರೆ.


ಹೀಗೆ ಬಿಗ್​ಬಾಸ್​ಗೆ ಗುಡ್​ಬೈ ಹೇಳುವ ಹೇಳಿಕೆ ನೀಡಿ ಸುದೀಪ್​ ಅವರು ರಾತ್ರೋರಾತ್ರಿ ಶಾಕ್​ ನೀಡಿರುವ ನಡುವೆಯೇ, ಬಿಗ್​ಬಾಸ್​ 9ರ ಸ್ಪರ್ಧಿಯಾಗಿದ್ದ ಕನ್ನಡ ಹೋರಾಟಗಾರ ರೂಪೇಶ್​ ರಾಜಣ್ಣ ಅವರು ಮಾಡಿರುವ ಟ್ವೀಟ್​ ಇದೀಗ ಹಲ್​ಚಲ್​ ಸೃಷ್ಟಿಸುತ್ತಿದೆ. ಅಷ್ಟಕ್ಕೂ ರೂಪೇಶ್​ ರಾಜಣ್ಣ ಅವರು ತಮ್ಮ ಟ್ವೀಟ್​ನಲ್ಲಿ ಕುತೂಹಲ, ವಿಚಿತ್ರ ಹಾಗೂ ನಿಗೂಢ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಅವರು ಬರೆದದ್ದು ಏನೆಂದರೆ, ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ. ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ ಎಂದು ಬರೆದು ಚಕ್ರವರ್ತಿ ಚಂದ್ರಚೂಡ್ ಅವರನ್ನು ಟ್ಯಾಗ್ ಮಾಡಿದ್ದಾರೆ ರೂಪೇಶ್​ ರಾಜಣ್ಣ. 

ಬಿಗ್​ಬಾಸ್​ಗೆ ಭರ್ಜರಿ ಟಿವಿಆರ್​: ಸುದೀಪ್​ ಮತ್ತು ತಂಡದಿಂದ ಹೀಗೊಂದು ಪಾರ್ಟಿ- ವಿಡಿಯೋ ವೈರಲ್​

 

click me!