Amruthadhare serial: ಅಮೃತಧಾರೆಯ ಕನ್ನಿಂಗ್ ವಿಲನ್ ಶಕುಂತಲಾ ಮದುವೆ ಟೈಮಲ್ಲಿ ಎಷ್ಟು ಕ್ಯೂಟಾಗಿದ್ರು ನೋಡಿ!

By Bhavani Bhat  |  First Published Aug 13, 2024, 11:30 AM IST

ಅಮೃತಧಾರೆ ಸೀರಿಯಲ್‌ನಲ್ಲಿ ಸದಾ ಹಿಂದಿಂದ ಪಿನ್ ಇಡೋ ವಿಲನ್ ಶಕುಂತಲಾ ಅಂದ್ರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಇರಿಟೇಶನ್. ಆದರೆ ಕನ್ನಡ ಈ ಪ್ರಸಿದ್ಧ ನಟಿ ವನಿತಾ ವಾಸು ಮದುವೆ ಟೈಮಲ್ಲಿ ಎಷ್ಟು ಕ್ಯೂಟಾಗಿದ್ರು ಗೊತ್ತಾ?


ವನಿತಾ ವಾಸು!
ಹೀಗಂದ ಕೂಡ್ಲೇ ಸದ್ಯಕ್ಕೆ ಮನಸ್ಸಿಗೆ ಬರೋದು ಸದಾ ಯಾರಿಗೆ ಬತ್ತಿ ಇಡಲಿ ಅಂತ ಯೋಚ್ನೆ ಮಾಡ್ತಾ ಇರೊ 'ಅಮೃತಧಾರೆ' ಸೀರಿಯಲ್‌ನ ಕನ್ನಿಂಗ್ ವಿಲನ್ ಶಕುಂತಲಾ. ಡ್ರಾಮಾ ಮಾಡ್ತಾನೆ ಎಲ್ಲವನ್ನೂ ತನ್ನ ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸುವ ಶಕುಂತಳಾ ಪಾತ್ರದಲ್ಲಿ ವನಿತಾವಾಸು ಅದ್ಭುತ ಅಭಿನಯ ನೀಡಿದ್ದಾರೆ. ಈ ಸೀರಿಯಲ್‌ನಲ್ಲಿ ಅವರ ಅಭಿನಯ, ಡೈಲಾಗ್ ಡೆಲಿವರಿ ಫೇಮಸ್. ಉಳಿದ ವಿಲನ್‌ಗಳ ಥರ ಕೂಗಾಡದೇ ಅರಚಾಡದೇ ಕೂಲ್‌ನೆಸ್‌ನಿಂದಲೇ ಎಲ್ಲವನ್ನೂ ಹ್ಯಾಂಡಲ್ ಮಾಡೋ ಈ ಪಾತ್ರವನ್ನ ವನಿತಾ ಚೆನ್ನಾಗಿ ನಟಿಸುತ್ತಿದ್ದಾರೆ. ಇದರಲ್ಲಿ ಇವರ ನಟನೆ ಜೊತೆಗೆ ಇವರ ಸೀರೆ, ಕಾಸ್ಟ್ಯೂಮ್‌ಗಳೂ ಗಮನ ಸೆಳೆಯುತ್ತವೆ. ರಿಚ್ ಸೀರೆ, ಒಡವೆಯನ್ನು ನೋಡಿ ವೀಕ್ಷಕರು ಒಳಗೊಳಗೇ ಮೆಚ್ಚಿಕೊಂಡರೂ ಆ ಪಾತ್ರದ ಮೇಲಿನ ಸಿಟ್ಟಿನಿಂದ ವ್ಯಂಗ್ಯ ಮಾಡೋದೂ ಇದೆ. ಇರಲಿ ಅವರ ಈ ಡ್ರೆಸ್ ಸೆನ್ಸ್‌ ಹಿಂದಿರೋದು ಮಾಡೆಲಿಂಗ್ ಮೈಂಡ್. ಹೌದು, ವನಿತಾ ನಟಿ ಆಗೋದಕ್ಕೂ ಮೊದಲು ಮಾಡೆಲ್ ಆಗಿದ್ದವರು. ಮಾಡೆಲಿಂಗ್‌ನಲ್ಲೇ ಮುಂದೆ ಹೋಗುವ ಕನಸು ಕಾಣುತ್ತಿದ್ದವರು. ಆದರೆ ಆಕಸ್ಮಿಕವಾಗಿ ಸಿನಿಮಾರಂಗ ಪ್ರವೇಶಿಸಿದವರು ಆಮೇಲೆ ಇಲ್ಲೇ ಸೆಟಲ್ ಆದ್ರು. ಕನ್ನಡಿಗರಿಗೆ ಇಷ್ಟದ ನಟಿ ಆದರು. ಇನ್ನೊಂದು ವಿಚಾರ ಅಂದರೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವನಿತಾ ವಾಸು ಮೂಲತಃ ಮಲಯಾಳಿ.

ಇರಲಿ, ಸದ್ಯಕ್ಕೆ ಈ ನಟಿಯ ಮದುವೆಯ ಆಲ್ಬಂ ಸಖತ್ ವೈರಲ್ ಆಗ್ತಿದೆ. ಈಗಲೂ ಬಹಳ ಲಕ್ಷಣವಾಗಿ ಸುಂದರವಾಗಿರುವ ಈ ನಟಿ ಮದುವೆಯ ಸಂದರ್ಭದಲ್ಲಂತೂ ಸಖತ್ ಕ್ಯೂಟಾಗಿದ್ರು. ಅವರ ಮದುವೆ ಆಲ್ಬಂಗಳಲ್ಲಿ ವನಿತಾ ಲುಕ್‌ ಅನ್ನು ಅವರಿಗೆ ಬೈಯ್ಯುವವರೂ ಮೆಚ್ಚಿಕೊಂಡಿದ್ದಾರೆ. ಇವರು ಮದುವೆ ಆಗೋ ಹೊತ್ತಿಗೆ ಅಂದರೆ 80-90ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದ ನಟಿ. ಶಂಕರ್ ನಾಗ್, ಅನಂತ್ ನಾಗ್, ವಿಷ್ಣುವರ್ಧನ್, ಅಂಬರೀಶ್‌ ಜೊತೆ ತೆರೆಹಂಚಿಕೊಂಡಿರುವ ನಟಿ ವನಿತಾ ವಾಸು.

Tap to resize

Latest Videos

ಲಕ್ಷ್ಮೀ ನಿವಾಸ ಸೀರಿಯಲ್: ಈ ಪಾತ್ರದ ಮಾತನ್ನು ಮನಸಾರೆ ಮೆಚ್ಚಿದ ಕನ್ನಡತಿ ಅಮ್ಮಮ್ಮ!

ಇವರು 90ರ ದಶಕದ ಆರಂಭದಲ್ಲಿ ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ನಿತಿನ್ ನಿಸಾಲ್ ಎಂಬುವರನ್ನ ನಟಿ ವನಿತಾ ವಾಸು ಪ್ರೀತಿಸಿ ಮದುವೆಯಾದರು. ನಟಿ ವನಿತಾ ವಾಸು - ನಿತಿನ್ ನಿಸಾಲ್ ಮದುವೆ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ಜರುಗಿತ್ತು. ಕುಟುಂಬಸ್ಥರು, ಆತ್ಮೀಯರು ಹಾಗೂ ಚಿತ್ರರಂಗದ ತಾರೆಯರು ಮದುವೆಗೆ ಸಾಕ್ಷಿಯಾಗಿದ್ದರು.

ವನಿತಾ ವಾಸು - ನಿತಿನ್ ನಿಸಾಲ್ ಮದುವೆ ಸಾಂಪ್ರದಾಯಿಕವಾಗಿ, ಶಾಸ್ತ್ರೋಕ್ತವಾಗಿ ನೆರವೇರಿತ್ತು. ಮದುವೆಗೆ ನೀಲಿ ಸೀರೆಯುಟ್ಟು ವಧು ವನಿತಾ ವಾಸು ದೇವತೆಯಂತೆ ಕಂಗೊಳಿಸುತ್ತಿದ್ದರು. ವನಿತಾ ವಾಸು ಮದುವೆಗೆ ಸುರೇಶ್ ಹೆಬ್ಳೀಕರ್ ದಂಪತಿ ಸಾಕ್ಷಿಯಾಗಿದ್ದರು.

ಈ ದಂಪತಿಗೆ ಅಂದರೆ ವನಿತಾ ವಾಸು - ನಿತಿನ್ ನಿಸಾಲ್ ದಂಪತಿಗೆ ಇರುವುದು ಒಬ್ಬನೇ ಮಗ ಹೆಸರು ಕಶಿಶ್ ನಿಸಾಲ್. ಸಖತ್ ಕ್ಯೂಟ್ ಆಗಿರುವ ಇವರ ಪುತ್ರ ಏನು ಕೆಲಸ ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಜೊತೆಗೆ ಇವರ ಪತಿಯ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ.

ಕಿಚ್ಚ ಸುದೀಪ್ ಸಾರಥ್ಯದಲ್ಲಿ Biggboss 11 ಬರ್ತಿದೆ, ಯಾವೆಲ್ಲ ಸೀರಿಯಲ್‌ಗಳಿಗೆ ಹೊಗೆ?

ಆದರೆ ಆಗಾಗ ವಿನಿತಾ ವಾಸು ತನಗೆ ತನ್ನ ಮಗನೇ ಸರ್ವಸ್ವ ಅಂತಿರುತ್ತಾರೆ. ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಇವರು ಆಗ್ಗಾಗೆ ತಮ್ಮ ಕುಟುಂಬದ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ.

'ಏನೂ ಪ್ಲಾನ್‌ ಮಾಡದೆಯೇ ಈ ಕ್ಷೇತ್ರಕ್ಕೆ ಬಂದ ನಾನು, ಇಲ್ಲಿಯವರೆಗೂ ಒಳ್ಳೆಯ ಹಾದಿಯಲ್ಲಿದ್ದೇನೆ. ಕನ್ನಡ ಮನರಂಜನಾ ಕ್ಷೇತ್ರದಲ್ಲಿ 38 ವರ್ಷಗಳನ್ನು ಪೂರೈಸಿರುವುದಕ್ಕೆ ಬಹಳ ಹೆಮ್ಮೆ, ಖುಷಿ ಮತ್ತು ಆತ್ಮತೃಪ್ತಿಯಿದೆ. ‘ಆಗಂತುಕ’ ಚಿತ್ರದಿಂದ ನನ್ನ ಸಿನಿ ಜರ್ನಿ ಶುರುವಾಯಿತು. ಕಾಡಿನ ಬೆಂಕಿ, ತರ್ಕ ಸೇರಿದಂತೆ ಸಾಕಷ್ಟು ಉತ್ತಮ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸುಧಾರಾಣಿ, ತಾರಾ, ಶ್ರುತಿ, ಆಶಾರಾಣಿ ಸೇರಿದಂತೆ ಆಗ ನನಗೆ ಎಂಟರಿಂದ 10 ನಟಿಯರು ಸ್ಪರ್ಧಿಗಳಿದ್ದರು. ಸಿನಿಮಾ ಅವಕಾಶ ಬಂದರೆ ಸಾಕು ಒಪ್ಪಿಕೊಂಡು ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸುತ್ತಿದ್ದೆ, ಸಾಕಷ್ಟು ಶ್ರಮವಹಿಸುತ್ತಿದ್ದೆ' ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ, ಕಿರುತೆರೆ ಜರ್ನಿ ಬಗ್ಗೆ ವನಿತಾ ವಾಸು ಹೇಳಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Namma KFI (@namma_kfi)

 

click me!