ರಿಯಲ್‌ ಮದ್ವೆಯಂತೆ ನಡೆಯುತ್ತಿದೆ ಸೀತಾ-ರಾಮ ಕಲ್ಯಾಣ: ಇಂಚಿಂಚು ಮಾಹಿತಿ ನೀಡಿದ ನಟಿ ವೈಷ್ಣವಿ

By Suchethana D  |  First Published Jul 6, 2024, 5:50 PM IST

ಸೀತಾರಾಮ ಸೀರಿಯಲ್‌ನಲ್ಲಿ ರಿಯಲ್ ಮದುವೆಯಂತೆಯೇ ಮದುವೆ ಕಾರ್ಯ ನಡೆಯುತ್ತಿದೆ. ಇದರ ಸಂಪೂರ್ಣ ತಯಾರಿ ಹೇಗೆ ಮಾಡಲಾಗಿದೆ ಎಂಬ ಬಗ್ಗೆ ನಟಿ ವೈಷ್ಣವಿ ಗೌಡ ವಿವರಿಸಿದ್ದಾರೆ. 
 


ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ ಸೀತಾ ಮತ್ತು ರಾಮ್​ ಮದುವೆ ಸಂಭ್ರಮ ಜೋರಾಗಿ ನಡೆದಿದೆ.  ಸೀರಿಯಲ್​ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್​ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ. ಆದರೆ ಕೆಲವೇ ದಿನಗಳಲ್ಲಿ ಸೀತಾರಾಮರ ಕಲ್ಯಾಣದ ಶೂಟಿಂಗ್‌ ಮುಗಿದಿದ್ದು, ಅದಕ್ಕೆ ಹೇಗೆಲ್ಲಾ ತಯಾರಿ ಮಾಡಿದ್ದರು ಎನ್ನುವುದನ್ನು ಸೀತಾ ಪಾತ್ರಧಾರಿ ನಟಿ ವೈಷ್ಣವಿ ಗೌಡ ಇಂಚಿಂಚು ಮಾಹಿತಿ ನೀಡಿದ್ದಾರೆ.

ಮದುವೆಯ ಇನ್ವಿಟೇಷನ್‌ನಿಂದ ಹಿಡಿದು ಎಲ್ಲವನ್ನೂ ರಿಯಲ್‌ ಮದ್ವೆಯಂತೆಯೇ ರೆಡಿ ಮಾಡಲಾಗಿದೆ. ಆರು ದಿನಗಳು ಈ ಮದುವೆ ನಡೆಯಲಿದೆ ಎಂದು ನಟಿ ಹೇಳಿದ್ದಾರೆ. ಇದಕ್ಕಾಗಿಯೇ ಶೂಟಿಂಗ್‌ ಮನೆಯನ್ನು ತೆಗೆದುಕೊಳ್ಳಲಾಗಿದ್ದು, ಅದಕ್ಕೆ ಅದ್ಧೂರಿಯಾಗಿ ಸಿಂಗಾರ ಮಾಡಲಾಗಿದೆ. ರಿಯಲ್‌ ಮದುವೆ ಮನೆಯ ಓಡಾಟದಂತೆಯೇ ನೆಂಟರಿಷ್ಟರು ಓಡಾಟ ನಡೆಸುತ್ತಿದ್ದಾರೆ. ಭರ್ಜರಿ ಅಲಂಕಾರ ಮಾಡಲಾಗಿದೆ. ಹೂವಿನ ಅಲಂಕಾರದ ಜೊತೆಜೊತೆಗೆ ವಿದ್ಯುದ್ದೀಪಗಳಿಂದ ಮನೆ ಕಂಗೊಳಿಸುತ್ತಿದೆ. ಮದುವೆಯ ಸಂಪೂರ್ಣ ಶೂಟಿಂಗ್‌ ಇದಾಗಲೇ ಮುಗಿದಿದೆ. ಆದರೆ ಅದರ ಪ್ರಸಾರ ಆಗಬೇಕಿದೆಯಷ್ಟೇ. ಸದ್ಯ ಕೆಲವೊಂದು ಶಾಸ್ತ್ರಗಳ ಕಂತುಗಳನ್ನು ತೋರಿಸಲಾಗಿದ್ದು, ಇನ್ನು ಮುಖ್ಯ ಘಟ್ಟಗಳು ಬಾಕಿ ಇವೆ.

Tap to resize

Latest Videos

ಮದ್ವೆ ಆಗೋತನ್ಕ ತಡ್ಕೊಳ್ರಪ್ಪಾ... ಇಲ್ಲೇ ಎಲ್ಲಾ ಮುಗಿಸಬೇಡ್ರಪ್ಪಾ ... ಸೀತಾರಾಮರ ಕಾಲೆಳಿತಿರೋ ಫ್ಯಾನ್ಸ್​

ಇವೆಲ್ಲವುಗಳ ಬಗ್ಗೆ ವೈಷ್ಣವಿ ಮಾಹಿತಿ ನೀಡಿದ್ದಾರೆ. ಈ ಮದುವೆ ಮುಗಿದ ಮೇಲೆ ಈ ಶೂಟಿಂಗ್‌ ಮನೆ ಬಿಟ್ಟು ಬೇರೆ ಕಡೆ ಹೋಗುತ್ತಿದ್ದು, ಅದಕ್ಕಾಗಿ ಬೇಸರ ಆಗುತ್ತಿದೆ ಎಂದು ಸಿಹಿ ಹೇಳಿದ್ದಾಳೆ. ಕೆಲ ದಿನಗಳ ಹಿಂದಷ್ಟೇ   ವೈಷ್ಣವಿ ಅವರು, ಸೀತಾರಾಮ ಸೀರಿಯಲ್​ನ ಸೀತೆಯ ಮನೆಯ ಬಗ್ಗೆ ತೋರಿಸಿದ್ದರು. ಇನ್ನು ನಾಯಕಿ ಸೀತಾ  ಮದ್ವೆಯಾಗಿ ರಾಮ್​  ಮನೆ ಸೇರುತ್ತಿದ್ದಾಳೆ. ಇದೇ ಕಾರಣಕ್ಕೆ ಸೀತಾಳಿಗೆ ಅವಳ ಅಮ್ಮನ ಮನೆಯಲ್ಲಿ ಇದೀಗ ಕೊನೆಯ ದಿನ. ಇದೇ ಕಾರಣಕ್ಕೆ, ಸೀತಾಳ ಮನೆ ಹೇಗಿದೆ? ಇಷ್ಟು ವರ್ಷ ಅವಳು ಇದ್ದ ಮನೆ ಹೇಗಿತ್ತು ಎಂಬ ಬಗ್ಗೆ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಮಾಹಿತಿ ನೀಡಿದ್ದರು.  ಇನ್ನು ಸೀತಾ ರಾಮ್​ ಮನೆ ಸೇರುತ್ತಿದ್ದಾಳೆ. ಆದ್ದರಿಂದ ಸೀತಾಳ ಮನೆಯಲ್ಲಿ ಇಂದು ಕೊನೆಯ ದಿನ ಶೂಟಿಂಗ್​. ಇನ್ಮುಂದೆ ಇಲ್ಲಿ ಶೂಟಿಂಗ್​ ಇರುವುದಿಲ್ಲ ಎನ್ನುತ್ತಲೇ ವೈಷ್ಣವಿ ಅವರು, ಸೀತಾಳ ಮನೆಯ ಸಂಪೂರ್ಣ ಪರಿಚಯ ಮಾಡಿಸಿದ್ದರು. 

ಅಷ್ಟಕ್ಕೂ, ಪ್ರತಿಯೊಬ್ಬ ನಟ-ನಟಿಯರು ಅವರ ಮನೆಗಿಂತಲೂ ಹೆಚ್ಚಾಗಿ ಶೂಟಿಂಗ್​ ಸ್ಪಾಟ್​ನಲ್ಲಿಯೇ ಇರುತ್ತಾರೆ. ಸಿನಿಮಾಗಳಲ್ಲಿ ಈ ಸ್ಪಾಟ್​ ವಿಭಿನ್ನ ಪ್ರದೇಶಗಳಲ್ಲಿ ನಡೆದರೆ, ಸಾಮಾನ್ಯವಾಗಿ ಸೀರಿಯಲ್​ಗಳಲ್ಲಿ ಒಂದೇ ಕಡೆ ಸೆಟ್​ ಮಾಡಿ ಅಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಯುತ್ತದೆ. ಇದೇ ಕಾರಣಕ್ಕೆ ಸಂಪೂರ್ಣ ವಾತಾವರಣವನ್ನೇ ಬದಲಾಯಿಸಲಾಗುತ್ತದೆ. ಒಂದು ಸೀರಿಯಲ್​ ಐದಾರು ವರ್ಷಗಳು ನಡೆಯುವ ಕಾರಣ, ಇಲ್ಲಿ ಸೆಟ್​ ಅತ್ಯಂತ ಪ್ರಾಮುಖ್ಯತೆ ವಹಿಸುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ  ಶೂಟಿಂಗ್​ ಮನೆಗಳನ್ನು ಕಟ್ಟಿ ಅದನ್ನು ಬಾಡಿಗೆಗೆ ಕೊಡುವುದು ಇದೆ. ಇನ್ನು ಕೆಲವು ಸೀರಿಯಲ್​ಗಳಲ್ಲಿ ತಮಗೆ ಬೇಕಾದಂತೆ ಹಳ್ಳಿಯ ವಾತಾವರಣ ನಿರ್ಮಾಣ ಮಾಡಿಕೊಂಡೋ ಅಥವಾ ಓಣಿ, ವಠಾರದ ರೀತಿಯಲ್ಲಿ ನೈಜ ಚಿತ್ರಣ ಬರುವಂತೆ ಶೂಟಿಂಗ್​  ಮನೆಗಳನ್ನು ನಿರ್ಮಿಸಿಕೊಂಡಿರುತ್ತಾರೆ.

ವಾರದ ಏಳು ದಿನ ಯಾವುದು ಎಂದ್ರೆ ಹೀಗೆ ಹೇಳೋದಾ ಅಮೃತಧಾರೆ ಮಲ್ಲಿ! ಮಕ್ಕಳು ಕೇಳಿಸಿಕೊಂಡ್ರೆ ಅಷ್ಟೆ...

click me!