
ದಿನದಿಂದ ದಿನಕ್ಕೆ ಕನ್ನಡದ ಯೂಟ್ಯೂಬರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಅವರಲ್ಲಿ ಅತಿ ಹೆಚ್ಚಿನ ವ್ಯೂಸ್, ಲೈಕ್ ಮತ್ತು ಕಾಮೆಂಟ್ ಪಡೆಯುವವರಲ್ಲಿ ಸ್ಯಾಮ್ ಸಮೀರ್ ಕೂಡ ಒಬ್ಬರು. ಗರ್ಲ್ ಫ್ರೆಂಡ್ ಜೊತೆ ಬ್ರೇಕಪ್ ವಿಚಾರಕ್ಕೆ ಸುದ್ದಿಯಲ್ಲಿದ್ದ ಸ್ಯಾಮ್ ಸಮೀರ್ ಈಗ ಒಂದೊಂದೆ ದುಬಾರಿ ವಸ್ತುಗಳನ್ನು ಖರೀದಿಸುತ್ತಿರುವುದಕ್ಕೆ ಸುದ್ದಿಯಾಗುತ್ತಿದ್ದಾರೆ. ಏನಾದರೂ ಒಂದು ಚಾಲೆಂಜ್ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಹೆಸರು ಮಾಡುತ್ತಿರುವ ಈ ಯೂಟ್ಯೂಬ್‌ಗೆ ಇರುವ ಫ್ಯಾನ್ಸ್ ಯಾವ ಸ್ಟಾರ್ ನಟರಿಗೂ ಇಲ್ಲ.
ಕೆಲವು ದಿನಗಳ ಹಿಂದೆ ಮಹೇಂದ್ರ XUV ಕಾರು ಖರೀದಿಸಿದ ಸಮೀರ್ ಈಗ ತಾಯಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ಪೋಸ್ ಹಾಳಾಗಿದೆ ವರ್ಕ್ ಆಗುತ್ತಿಲ್ಲ ಎಂದು ತಾಯಿ ಹೇಳುತ್ತಲೇ ಇದ್ದರು. ಸರಿ ಮಾಡಿಸುವುದಾಗಿ ಹೇಳಿದ ಸಮೀರ್ ರಿಪೇರಿ ಮಾಡಿಸದೇ ಹೊಸ ಫೋನ್ ತಂದಿದ್ದಾರೆ. ಹಳೆ ಫೋನ್‌ನನ್ನು ತಾಯಿ ಕೈಯಿಗೆ ಇಟ್ಟು ಸರಿ ಮಾಡಲು ಆಗುವುದಿಲ್ಲ ನಾಳೆ ಮತ್ತೊಂದು ಕಡೆ ವಿಚಾರಿಸುತ್ತೀನಿ ಎಂದು ಹೇಳಿ ಜಿಮ್‌ಗೆ ಹೊರಡುತ್ತಾರೆ. ಪ್ರತಿ ನಿತ್ಯ ಧನುಶ್ರೀ ವರ್ಕೌಟ್ ಮಾಡುವ ವಿಡಿಯೋ ಹಾಕ್ತಾಳೆ ಅಲ್ವಾ ಅದೇ ಜಿಮ್ ಇದು ಕೂಡ. ಸರಿ ಜಿಮ್‌ನಿಂದ ಹೊರ ಬಂದ ಮೇಲೆ ಸಮೀರ್ ಏನ್ ಮಾಡಿದರು ಹೇಳಿ?
ದುಬಾರಿ ಕಾರು ಖರೀದಿಸಿದ ಯುಟ್ಯೂಬರ್ ಸ್ಯಾಮ್ ಸಮೀರ್; ದುಡ್ಡು ಮಾಡಿದ್ರೆ ಹೀಗ್ ಮಾಡ್ಬೇಕು ಎಂದ ನೆಟ್ಟಿಗರು
ಜಿಮ್ ಮುಗಿಸಿ ಮನೆ ಬಂದ ಮೇಲೆ ಇರೋ ಬರೋ ಕಾಲಿ ಡಬ್ಬಗಳನ್ನು ತಾಯಿ ಕೈಯಲ್ಲಿ ಓಪನ್ ಮಾಡಿಸಿದ್ದರು. ಏನೂ ಇಲ್ಲ ಏನೂ ಇಲ್ಲ ಎನ್ನುತ್ತಿದ್ದವರ ಕೈಗೆ ಐ ಪೋನ್ 14 ಸಿಗುತ್ತದೆ. ನೋಡಿ ಶಾಕ್ ಆದವರು ಖುಷಿಯಲ್ಲಿ ಕೂತಲೇ ಕುಣಿಯುತ್ತಾರೆ. ನಿಜಕ್ಕೂ ಇದು ಐ ಫೋನ್‌ನಾ ನಿಜವಾದ ಐ ಫೋನ್‌ನಾ ನನಗೆ ಕೊಡಿಸಿರುವ ಐ ಫೋನ್‌ನಾ ಎಂದು ಪದೇ ಪದೇ ಕೇಳುತ್ತಾರೆ. ವಿಡಿಯೋ ಮುಂದೆನೇ ಡಬ್ಬ ತೆಗೆದು ಸಂಭ್ರಮಿಸುತ್ತಾರೆ ಸಮೀರ್ ತಾಯಿ. ನಮ್ಮ ತಂದೆ ತಾಯಿ ಇರುವಾಗಲೇ ಅವರಿಗೆ ನಾವು ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಬೇಕು ಅವರನ್ನು ಖುಷಿಯಾಗಿ ನೋಡಿಕೊಳ್ಳಬೇಕು ಸಾಲ ಮಾಡಿ ಆದರೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ರಮೇಶ್ ಅರವಿಂದ್ ಅವರ ಹಳೆ ವಿಡಿಯೋ ನೋಡಿದೆ ಹೀಗಾಗಿ ನನ್ನ ಪ್ರಾಮುಖ್ಯತೆ ಏನಿದ್ದರೂ ನನ್ನ ತಾಯಿನೇ ಎಂದಿದ್ದಾರೆ ಸ್ಯಾಮ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.