ಲಿಪ್‌ಸ್ಟಿಕ್‌ ತಿಂದ ಕಥೆ ಹೇಳುತ್ತಲೇ, Gen G ಎಮೋಷನ್ಸ್‌ ಬಗ್ಗೆ ಹೀಗ್ಯಾಕಂದ್ರು ನಟಿ ಸುಧಾರಾಣಿ!

Published : Aug 01, 2026, 01:25 PM IST
Sudharani on Gen Z

ಸಾರಾಂಶ

ಹಿರಿಯ ನಟಿ ಸುಧಾರಾಣಿ ತಮ್ಮ 15ನೇ ವಯಸ್ಸಿನಲ್ಲಿ 'ಪಂಚಮವೇದ' ಸಿನಿಮಾದಲ್ಲಿ ನಟಿಸಿದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚಿತ್ರೀಕರಣದ ಸವಾಲುಗಳು, ಲಿಪ್‌ಸ್ಟಿಕ್‌ ತಿಂದ ತಮಾಷೆಯ ಘಟನೆ ಹಾಗೂ ರುಕ್ಮಿಣಿ ಪಾತ್ರವು ತಮ್ಮನ್ನು ನಟಿಯಾಗಿ ಹೇಗೆ ರೂಪಿಸಿತು ಎಂಬುದನ್ನು ವಿವರಿಸಿದ್ದಾರೆ.

ಬೆಂಗಳೂರು (ಆ.1): ಇಂದಿನ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಜೆನ್-ಝೀ (Gen Z) ಮತ್ತು ಜೆನ್-ಆಲ್ಫಾ (Gen Alpha) ತಲೆಮಾರುಗಳ ವೇಗದ ಬಗ್ಗೆಯೇ ಮಾತು. ಅತ್ಯಾಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಮೊಬೈಲ್ ಯುಗದಲ್ಲಿ ಬೆಳೆಯುತ್ತಿರುವ ಈ ಇಂದಿನ ಪೀಳಿಗೆಯನ್ನು ನೋಡಿದಾಗ, ಹಿರಿಯ ನಟಿ ಸುಧಾರಾಣಿ ಅವರು ತಮ್ಮ 15ನೇ ವಯಸ್ಸಿನ ಕೌಮಾರ್ಯ ಹಾಗೂ ಚಿತ್ರರಂಗದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋದಲ್ಲಿ ಮಾತನಾಡಿದ ಅವರು, ತಾವು 15ರ ಹರೆಯದಲ್ಲಿದ್ದಾಗ ನಟಿಸಿದ ‘ಪಂಚವೇದ’ ಸಿನಿಮಾದ ಅಪರೂಪದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

"ನಾವು ಚಿಕ್ಕವರಿದ್ದಾಗ ಕಥೆ ಕೇಳಲು ಅಮ್ಮ-ಅಣ್ಣ ಜೊತೆಗಿರುತ್ತಿದ್ದರು. ನಿರ್ದೇಶಕರು ಹೇಳಿಕೊಟ್ಟಂತೆ ನಟಿಸುತ್ತಿದ್ದೆವು. ಆದರೆ, ಪಿ.ಎಚ್. ವಿಶ್ವನಾಥ್ ನಿರ್ದೇಶನದ 'ಪಂಚವೇದ' ಚಿತ್ರ ನನ್ನೊಳಗೆ ದೊಡ್ಡ ಬದಲಾವಣೆ ತಂದಿತು. ಆ ಚಿತ್ರದ 'ರುಕ್ಮಿಣಿ' ಪಾತ್ರ ನನ್ನನ್ನು ನಟಿಯಾಗಿ ಬೆಳೆಸಿತು," ಎಂದು ಸುಧಾರಾಣಿ ನೆನಪಿಸಿಕೊಂಡರು. ಈ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿಯೂ ಒಲಿದುಬಂದಿತ್ತು.

ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕರ ಕಟ್ಟುನಿಟ್ಟಿನ ಶಿಸ್ತು, ಕುಂದಾಪುರದ ಬಿಸಿಲಿನಲ್ಲಿ ಶೂಟಿಂಗ್ ವೇಳೆ ನಿದ್ದೆ ಮಾಡಿದ್ದ ಹಾಸ್ಯಾಸ್ಪದ ಪ್ರಸಂಗ ಹಾಗೂ ಲಿಪ್‌ಸ್ಟಿಕ್ ತಿಂದ ಘಟನೆಗಳನ್ನು ಅವರು ತಮಾಷೆಯಾಗಿ ಸ್ಮರಿಸಿದ್ದಾರೆ. 'ಪಂಚಮವೇದ ಸಿನಿಮಾ ಮಾಡುವಾಗ ನನಗೆ 15 ವರ್ಷ. ಸ್ಕೂಲ್‌ಗೆ ಯಾವ ರೀತಿ ಹೋಗ್ತಾ ಇದ್ನೋ, ಅದೇ ರೀತಿಯಲ್ಲಿ ಶೂಟಿಂಗ್‌ ಸೆಟ್‌ಗೂ ಹೋಗ್ತಾ ಇದ್ದೆ. ಆದರೆ. ಈ ಸಿನಿಮಾ ಮಾಡುವಾಗಲೇ ನನಗೆ ಗೊತ್ತಿಲ್ಲದಯೇ ನನ್ನಲ್ಲಿ ಬದಲಾವಣೆಗಳು ಆಗುತ್ತಿದ್ದೆ. ರುಕ್ಮಿಣಿ ಪಾತ್ರ ಮಾಡುವಾಗ ಅದನ್ನು ಎಂಜಾಯ್‌ ಮಾಡೋಕೆ ಶುರು ಮಾಡಿದೆ. ನಿರ್ದೇಶಕರು ಹೇಳಿದ್ದಷ್ಟೆ ಮೊದಲು ಮಾಡುತ್ತಿದ್ದೆ. ಬಳಿಕ ಆ ಪಾತ್ರಕ್ಕೆ ನನ್ನ ಎಫರ್ಟ್‌ ಕೂಡ ಹಾಕಲು ಆರಂಭಿಸಿದೆ' ಎಂದಿದ್ದಾರೆ.

ಇನ್ನು ಪಂಚಮವೇದ ಸಿನಿಮಾವನ್ನು ಆಗಿನ ಕಾಲದ ದೊಡ್ಡ ನಟಿಯೊಬ್ಬರು ಮಾಡಬೇಕಿತ್ತು. ಅದಾಗಲೇ ಅವರು 30-40 ಸಿನಿಮಾಗಳಲ್ಲಿ ನಟಿಸಿದ್ದರು. ಇದನ್ನು ಸ್ವತಃ ನಿರ್ದೇಶಕ ವಿಶ್ವನಾಥ್‌ ಅವರೇ ಪದೇ ಪದೇ ಹೇಳುತ್ತಿದ್ದರು. ಅವರು ಹೀಗೆ ಹೇಳುವಾಗಲೆಲ್ಲಾ ನನಗೆ ಮುಗುಜರವಾಗುತ್ತಿತ್ತು ಎಂದಿದ್ದಾರೆ. ಇದನ್ನ ಅಮ್ಮನ ಬಳಿ ಹೇಳಿಕೊಳ್ಳುತ್ತಿದ್ದೆ. ಆಗ ನನ್ನ ಅಮ್ಮ, ನೋಡಮ್ಮ ಇದರಲ್ಲಿ ನೀನು ಹೇಗೆ ಆಕ್ಟಿಂಗ್‌ ಮಾಡಬೇಕು ಅಂದ್ರೆ, ಡೈರೆಕ್ಟರ್‌ಗೆ ಈ ಪಾತ್ರಕ್ಕೆ ಈಕೆಯನ್ನು ಹಾಕಿಕೊಂಡಿದ್ದೇ ಸರಿ ಅನಿಸಬೇಕು. ಆ ರೀತಿಯಲ್ಲಿ ನಟನೆ ಇರಬೇಕು ಎಂದಿದ್ದರು. ಬಹುಶಃ ಅಮ್ಮ ಹೇಳಿದ ಈ ಮಾತೇ ನನಗೆ ಸ್ಫೂರ್ತಿಯಾಯಿತು ಎಂದು ಸುಧಾರಾಣಿ ಹೇಳಿದ್ದಾರೆ.

ಲಿಪ್‌ಸ್ಟಿಕ್‌ನ ಚಾಕೋಲೆಟ್‌ ರೀತಿ ತಿಂದಿದ್ದೆ

ಪಂಚಮವೇದ ಸಿನಿಮಾಗೆ ನನ್ನ ಮೇಕಪ್‌ಮ್ಯಾನ್‌ ಶಿವ ಅಂತಾ ಇದ್ರು. ಅವರು ಮದ್ರಾಸ್‌ನವರು. ಕುಂದಾಪುರದಲ್ಲಿ ಶೂಟಿಂಗ್‌ಗೆ ಹೋಗಿದ್ದ ಕಾರಣ. ಮೇಕಪ್‌ ಐಟಮ್‌ಗಳನ್ನು ಸ್ವಲ್ಪ ಹೆಚ್ಚಿಗೆ ತಂದುಕೊಂಡಿದ್ದರು. ಆಗ ಲ್ಯಾಕ್ಮೆ 85 ನಂಬರ್‌ ಲಿಪ್‌ಸ್ಟಿಕ್‌ಅನ್ನು ಈ ಸಿನಿಮಾಗಾಗಿ ಬಳಸಲಾಗಿತ್ತು. ನನ್ನ ಸ್ಕಿನ್‌ ಟೋನ್‌ಗೆ ಸೂಟ್‌ ಆಗುತ್ತೆ ಅಂತಾ, ಅದೇ ಶೇಡ್‌ಅನ್ನು ತರಿಸಿಕೊಂಡಿದ್ದರು. ಆಗ ಪ್ರತಿ ಬಾರಿ ಅವರದ್ದೊಂದು ಕಂಪ್ಲೇಟ್‌. ಪುಷ್ಪಾ ಅಂತಿದ್ದ ಹೇರ್‌ಡ್ರೆಸರ್‌ ಜೊತೆ ತಮಿಳಿನಲ್ಲಿ ಮಾತನಾಡ್ತಾ,'ಅಕ್ಕ ನೋಡಕ್ಕ.. ಹೊಸ ಲಿಪ್‌ಸ್ಟಿಕ್‌ ನಿನ್ನೆ ಓಪನ್‌ ಮಾಡಿದ್ದೆ. ಏನು ಅಂತಾ ಗೊತ್ತಿಲ್ಲ. ಈಗಾಗಲೇ ಅರ್ಧ ಖಾಲಿ ಆಗಿದೆ. 4-5 ಟ್ಯೂಬ್‌ ತಂದಿದ್ದೇನೆ. ಇನ್ನೂ ಸಿನಿಮಾ ಇದೆ. ಇದು ಅಷ್ಟು ದಿನ ಬರಬೇಕಲ್ಲ. ಅಸಿಸ್ಟೆಂಟ್‌ ಏನಾದ್ರೂ ಇದನ್ನ ಬೀಳಿಸಿದ್ದಾನೋ? ಏನೋ ಗೊತ್ತಿಲ್ಲ' ಎನ್ನುತ್ತಿದ್ದರು. ಹೀಗಿದ್ದಾಗ ಒಂದು ದಿನ ಟಚ್‌ಅಪ್‌ ಮಾಡ್ತಾ ಇರೋವಾಗಲೇ ನಾನು ಲಿಪ್‌ಸ್ಟಿಕ್‌ನ ಚಾಕೋಲೆಟ್‌ ರೀತಿ ತಿಂದುಬಿಟ್ಟಿದ್ದೆ. ಇದನ್ನು ಪುಷ್ಪಾ ನೋಡಿಬಿಟ್ಟಿದ್ದರು. ಅಯ್ಯೋ.. ಇದನ್ನ ನೀನಾ ಮಾಡ್ತಿರೋದು ಅಂತಾ ಹಿಡಿದುಬಿಟ್ಟಿದ್ದರು.

ಆ ಫ್ಲೇವರ್‌ ಲಿಪ್‌ಸ್ಟಿಕ್‌ ನನಗೆ ಇಷ್ಟವಾಗಿ ಬಿಟ್ಟಿತ್ತು. ಒಂದೊಂದು ಲಿಪ್‌ಸ್ಟಿಕ್‌ನ ಚಾಕೋಲೆಟ್‌ ರೀತಿ ತಿಂದುಬಿಡ್ತಿದ್ದೆ. ಅದಾದ ಬಳಿಕ ಲಿಪ್‌ಸ್ಟಿಕ್‌ ಕೈಗೆ ಬಂದ್ರೆ ಪುಷ್ಪ ಎದುರಿಗೇ ನಿಂತು 'ಪೋಟ್ಕೋಮ್ಮ..ಪೋಟ್ಕೋ' ಎನ್ನುತ್ತಿದ್ದರು. ಎಲ್ಲಿ ಕಚ್ಚಿ ತಿಂದುಬಿಡ್ತಾಳೋ ಅಂತಾ ಎದುರಿಗೆ ಆಕೆ ನಿಲ್ತಾ ಇದ್ದರು ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.

"ನಮ್ಮ ಅಜ್ಜ-ಅಜ್ಜಿಯಂದಿರ ಕಾಲದಲ್ಲಿ ರೇಡಿಯೋ ಇತ್ತು, ಅಪ್ಪ-ಅಮ್ಮನ ಕಾಲಕ್ಕೆ ಟಿವಿ ಬಂತು, ನಮ್ಮ ಕಾಲದಲ್ಲಿ ಕಂಪ್ಯೂಟರ್-ಸಿಡಿಗಳು ಬಂದವು. ಈಗಿನ ಜೆನ್-ಝೀ ಮತ್ತು ಆಲ್ಫಾ ಪೀಳಿಗೆಗೆ 5G ಹಾಗೂ AI ಜಗತ್ತು ಸಿಕ್ಕಿದೆ. ಬದಲಾವಣೆ ಜಗತ್ತಿನ ನಿಯಮ, ನಾವು ಅದಕ್ಕೆ ಹೊಂದಿಕೊಳ್ಳಬೇಕು. ಆದರೆ Generation ಏನೇ ಇರಲಿ, ಜನರ ಮನಸ್ಸಿನ ಭಾವನೆಗಳು (Emotions) ಮಾತ್ರ ಯಾವತ್ತೂ ಬದಲಾಗಬಾರದು, ಬದಲಾಗಲು ಸಾಧ್ಯವೂ ಇಲ್ಲ ಎಂದು ಸುಧಾರಾಣಿ ಮಾತನಾಡಿದ್ದಾರೆ. ಯಶಸ್ಸಿನ ಹಾದಿಯಲ್ಲಿ ಸಾವಿರಾರು ನೆಗೆಟಿವಿಟಿ ಹಾಗೂ ಅಡೆತಡೆಗಳು ಎದುರಾಗಬಹುದು. ಆದರೆ, ಧನಾತ್ಮಕ ಚಿಂತನೆ ಮತ್ತು ನಿರಂತರ ಶ್ರಮದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂಬ ಮಹತ್ವದ ಸಂದೇಶವನ್ನು ಅವರು ಈ ಮೂಲಕ ಇಂದಿನ ಪೀಳಿಗೆಗೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್‌ಗೆ ರಹದಾರಿ, ಇದೇ ತಿಂಗಳಲ್ಲಿ ಅಂತ್ಯ ಕಾಣಲಿದೆ ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ, ಪ್ರೇಮಕಾವ್ಯ ಸೀರಿಯಲ್‌
ಮೂರನೇ ವ್ಯಕ್ತಿ ಹೇಳಿದ್ದು ಯಾಕೆ ಕೇಳ್ತೀರಿ? ಮತ್ತೆ ಟಾಂಟ್ ಕೊಟ್ಟ ರಕ್ಷಿತಾ ಶೆಟ್ಟಿ.. ಇಲ್ಲಿ ಕಾಲೆಳೆದಿದ್ದು ಯಾರು ಯಾರಿಗೆ?