ಬಿಗ್‌ಬಾಸ್‌ಗೆ ರಹದಾರಿ, ಇದೇ ತಿಂಗಳಲ್ಲಿ ಅಂತ್ಯ ಕಾಣಲಿದೆ ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ, ಪ್ರೇಮಕಾವ್ಯ ಸೀರಿಯಲ್‌

Published : Aug 01, 2026, 12:31 PM IST
Colors Kannada Serials to End In August

ಸಾರಾಂಶ

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಗಳಾದ 'ಭಾರ್ಗವಿ ಎಲ್‌ಎಲ್‌ಬಿ' ಮತ್ತು 'ಪ್ರೇಮಕಾವ್ಯ' ತಮ್ಮ ಪ್ರಸಾರವನ್ನು ನಿಲ್ಲಿಸುತ್ತಿವೆ. ಬಿಗ್ ಬಾಸ್ ಹೊಸ ಸೀಸನ್‌ಗೆ ದಾರಿ ಮಾಡಿಕೊಡುವ ಸಲುವಾಗಿ, ಈ ಎರಡೂ ಧಾರಾವಾಹಿಗಳು ಆಗಸ್ಟ್ ಎರಡನೇ ವಾರದಲ್ಲಿ ಪ್ರಸಾರ ನಿಲ್ಲಿಸಲಿವೆ.

ಬೆಂಗಳೂರು (ಆ.1): ಕನ್ನಡ ಕಿರುತೆರೆಯಲ್ಲಿ ಒಂದೆಡೆ ಬಿಗ್ ಬಾಸ್ ರಿಯಾಲಿಟಿ ಶೋನ ಹೊಸ ಸೀಸನ್ ಕೌಂಟ್‌ಡೌನ್ ಶುರುವಾಗಿದ್ದರೆ, ಇನ್ನೊಂದೆಡೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿಗಳ ಪ್ರಿಯರಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಸಾಗುತ್ತಿದ್ದ ಎರಡು ಪ್ರಮುಖ ಧಾರಾವಾಹಿಗಳು ಒಂದೇ ಬಾರಿಗೆ ತಮ್ಮ ಸುದೀರ್ಘ ಪಯಣಕ್ಕೆ 'ಶುಭಂ' ಹಾಡಲು ಸಜ್ಜಾಗಿವೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಭಾರ್ಗವಿ ಎಲ್‌ಎಲ್‌ಬಿ' ಹಾಗೂ 'ಪ್ರೇಮಕಾವ್ಯ' ಶೀಘ್ರದಲ್ಲೇ ಮುಕ್ತಾಯಗೊಳ್ಳುತ್ತಿದ್ದು, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್‌ಗಳು ಸಖತ್ ವೈರಲ್ ಆಗುತ್ತಿವೆ.

ಅಂತಿಮ ಘಟ್ಟಕ್ಕೆ ತಲುಪಿದ 'ಭಾರ್ಗವಿ ಎಲ್‌ಎಲ್‌ಬಿ'

ಕಾನೂನು ಸಮರ ಹಾಗೂ ಕುಟುಂಬದ ಭಾವನಾತ್ಮಕ ಎಳೆಗಳನ್ನಿಟ್ಟುಕೊಂಡು ತೆಲುಗಿನ 'ಗೀತಾ ಎಲ್‌ಎಲ್‌ಬಿ' ರಿಮೇಕ್ ಆಗಿ ಮೂಡಿಬಂದಿದ್ದ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿ ಅಂತ್ಯ ಕಾಣುತ್ತಿದೆ. ಸ್ವಪ್ನ ಕೃಷ್ಣ ಅವರ ಕಲ್ಪನೆಯಲ್ಲಿ ರೂಪಗೊಂಡಿದ್ದ ಈ ಸೀರಿಯಲ್‌ನಲ್ಲಿ ರಾಧಾ ಭಗವತಿ, ಮನೋಜ್ ಕುಮಾರ್, ಕೀರ್ತಿ ಭಾನು, ಅರುಣಾ ಬಾಲರಾಜ್ ಹಾಗೂ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. ನ್ಯಾಯ ಮತ್ತು ಕುಟುಂಬದ ನಡುವಿನ ರೋಚಕ ಕಥಾಹಂದರ ಹೊಂದಿದ್ದ ಈ ಸೀರಿಯಲ್ ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ.

'ಪ್ರೇಮಕಾವ್ಯ' ಕಥೆಗೂ ಸಿಗಲಿದೆ ಶುಭಂ!

ಅಕ್ಕ-ತಂಗಿಯರ ಅಪಾರ ಬಾಂಧವ್ಯ, ಪ್ರೀತಿ ಮತ್ತು ಸಂಸಾರದ ಏರಿಳಿತಗಳ ಕಥಾಹಂದರ ಹೊಂದಿದ್ದ 'ಪ್ರೇಮಕಾವ್ಯ' ಧಾರಾವಾಹಿ ಕೂಡ ತನ್ನ ಪ್ರಸಾರವನ್ನು ಕಾಯಂ ಆಗಿ ಸ್ಥಗಿತಗೊಳಿಸುತ್ತಿದೆ. ಪ್ರಿಯಾ ಜೆ. ಆಚಾರ್, ವೈಷ್ಣವಿ, ರಘು ಹಾಗೂ ವಿಕಾಸ್ ಮುಂತಾದ ಪ್ರತಿಭಾವಂತ ಕಲಾವಿದರ ನಟನೆಯಿಂದ ಕೌಟುಂಬಿಕ ವೀಕ್ಷಕರ ಮನಗೆದ್ದಿದ್ದ ಈ ಧಾರಾವಾಹಿ, ತನ್ನ ಭಾವನಾತ್ಮಕ ಕ್ಲೈಮ್ಯಾಕ್ಸ್ ಸಂಚಿಕೆಗಳೊಂದಿಗೆ ವೀಕ್ಷಕರಿಗೆ ವಿದಾಯ ಹೇಳಲಿದೆ.

ಆಗಸ್ಟ್ ಎರಡನೇ ವಾರದಲ್ಲಿ ಕ್ಲೈಮ್ಯಾಕ್ಸ್ ಧಮಾಕಾ!

ಮೂಲಗಳ ಪ್ರಕಾರ, ಈ ಎರಡೂ ಧಾರಾವಾಹಿಗಳ ಅಂತಿಮ ಸಂಚಿಕೆಗಳು ಆಗಸ್ಟ್ ಎರಡನೇ ವಾರದಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ. ಬಿಗ್ ಬಾಸ್ ಹೊಸ ಸೀಸನ್‌ಗಾಗಿ ವಾಹಿನಿ ದೊಡ್ಡ ಮಟ್ಟದ ತಯಾರಿ ನಡೆಸುತ್ತಿದ್ದು, ಹೊಸ ಶೋ ಹಾಗೂ ಹೊಸ ಸೀರಿಯಲ್‌ಗಳಿಗೆ ಜಾಗ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ನೆಚ್ಚಿನ ಧಾರಾವಾಹಿಗಳು ಮುಗಿಯುತ್ತಿರುವುದಕ್ಕೆ ಅಭಿಮಾನಿಗಳು ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೂರನೇ ವ್ಯಕ್ತಿ ಹೇಳಿದ್ದು ಯಾಕೆ ಕೇಳ್ತೀರಿ? ಮತ್ತೆ ಟಾಂಟ್ ಕೊಟ್ಟ ರಕ್ಷಿತಾ ಶೆಟ್ಟಿ.. ಇಲ್ಲಿ ಕಾಲೆಳೆದಿದ್ದು ಯಾರು ಯಾರಿಗೆ?
ಯುಟ್ಯೂಬಲ್ಲಿ ದುಡಿದಾಯ್ತು, ಉದ್ಯಮ ಮಾಡಾಯ್ತು: 25ನೇ ವಯಸ್ಸಿಗೆ ತಾಯಿಯಾಗ್ತಿರೋ ಕನ್ನಡ ಯುಟ್ಯೂಬರ್ ಮಧು ಗೌಡ