
1. ಬಿಗ್‌ಬಾಸ್ ಮನೆಯೊಳಗೆ ಹೋದಾಗ ಎಲ್ಲವೂ ನಾರ್ಮಲ್ ಆಗಿತ್ತು. ಶೋನಿಂದ ಹೊರಗೆ ಬಂದ ಮೇಲೆ ಕೊರೋನಾ ತಂದಿರುವ ನೋವುಗಳನ್ನು ನೋಡಿದೆ. ಅಲ್ಲಿಂದ ಬಂದ ಮೇಲೆ ಸ್ಪರ್ಧಿಗಳನ್ನ, ಮನರಂಜನೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಅಪ್ಪ-ಅಮ್ಮ, ನನ್ನ ಹುಡುಗನನ್ನು ನೋಡಿ ಖುಷಿ ಆಯಿತು.
2. ನಾನು ತುಂಬಾ ಸೋಮಾರಿ. ಯಾಕೆಂದರೆ ಮನೆಯಲ್ಲಿ ನಾನು ಯಾವ ಕೆಲಸವನ್ನೂ ಮಾಡುತ್ತಿರಲ್ಲ. ಬಿಗ್‌ಬಾಸ್ ಮನೆಯಲ್ಲೂ ಅದೇ ಮುಂದುವರಿಯಿತು. ಎಲ್ಲಾ ಕೆಲಸಗಳಲ್ಲೂ ತಪ್ಪಿಸಿಕೊಳ್ಳುತ್ತಿದ್ದೆ.
ಮಗು ಮನಸ್ಸಿನ ಶುಭಾ ಪೂಂಜಾ; ಫುಲ್ ಮನೋರಂಜನೆ, ಫಿನಾಲೇ ಮುಟ್ಟಲೇಬೇಕು!
3. ನಾನು ಏನೇ ಮಾಡಿದರೂ ಮನೆಯಲ್ಲಿರುವ ಇತರೆ ಸದಸ್ಯರು ತಡೆದುಕೊಳ್ಳುತ್ತಿದ್ದರು. ಅದು ಅವರ ಗ್ರೇಟ್‌ನೆಸ್. ನಾನು ಮನೆ ಒಳಗೆ ಹೋಗಿದ್ದು ಎಲ್ಲರನ್ನು ಮನರಂಜಿಸಬೇಕು, ನಾನು ನಾನಾಗಿರಬೇಕು ಎನ್ನುವ ಉದ್ದೇಶದಿಂದ. ಅದು ಈಡೇರಿದೆ.
4. ಬಿಗ್‌ಬಾಸ್ ಮನೆಗೆ ಹೋಗಿ ಎಲ್ಲರು ತೂಕ ಇಳಿಸಿಕೊಂಡಿದ್ದಾರೆ. ನಾನು ಒಬ್ಬಳೆ ಗುಂಡು ಗುಂಡಾಗಿದ್ದೇನೆ. ಆದರೂ ನಮ್ಮ ಹುಡುಗ ಹೇಳುತ್ತಿದ್ದಾನೆ, ನಾನು ಸಣ್ಣ ಆಗಿದ್ದೇನೆ ಅಂತ.
5. ಈಗ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದ್ದೇನೆ. ಈಗ ನಮ್ಮ ಜವಾಬ್ದಾರಿ ಏನು ಎಂಬುದು ಗೊತ್ತಿದೆ. ನಾನು ಕೊರೋನಾ ವಾರಿಯರ್ ಆಗಿ ಕೆಲಸ ಮಾಡುತ್ತೇನೆ. ಎಲ್ಲ ಸ್ಪರ್ಧಿಗಳು ಸೇರಿ ಈ ಕೆಲಸ ಮಾಡುತ್ತೇವೆ. ಇದು ನಮ್ಮ ಕರ್ತವ್ಯ ಕೂಡ.
6. ವೈಷ್ಣವಿ, ದಿವ್ಯಾ ಉರುಡುಗ, ಮಂಜು ಹಾಗೂ ರಾಜೀವ್ ನನ್ನ ಅಚ್ಚುಮೆಚ್ಚಿನ ಸ್ಪರ್ಧಿಗಳು.
ಬ್ಯಾಂಕಲ್ಲಿ ಒಂದು ರೂಪಾಯಿ ಇರಲಿಲ್ಲ, ಚೌಡೇಶ್ವರಿ ದೇವಿ ಕಾಪಾಡಿದಳು: ಶುಭಾ ಪೂಂಜಾ
7. ಬಿಗ್‌ಬಾಸ್ ಜರ್ನಿ ಮುಗಿಯುತ್ತದೆ ಅಂದಾಗ ತುಂಬಾ ಬೇಸರ ಆಗಿತ್ತು. ಆದರೆ, ನಾವು ಸ್ವಾರ್ಥಿಗಳಾಗಬಾರದು. ಈ ಶೋನಲ್ಲಿ ತುಂಬಾ ಜನ ಕೆಲಸ ಮಾಡುತ್ತಿದ್ದಾರೆ. ಅವರ ಆರೋಗ್ಯವೂ ಮುಖ್ಯ. ಹೀಗಾಗಿ ತುಂಬಾ ಯೋಚನೆ ಮಾಡಿಯೇ ಈ ಶೋ ಅನ್ನು ವಾಹಿನಿ ನಿಲ್ಲಿಸಿದೆ.
8. ಕೊರೋನಾ ಮುಗಿದ ಮೇಲೆ ಮದುವೆ ಮಾಡಿಕೊಳ್ಳುವ ಪ್ಲಾನ್ ಇದೆ. ಯಾಕೆಂದರೆ ಈಗ ಮದುವೆ ಸಂಭ್ರಮ ಮಾಡಿಕೊಳ್ಳುವ ಸಮಯ ಅಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.