
ಕಿರುತೆರೆ ಲೋಕದ ಜನಪ್ರಿಯ ಸೆಲೆಬ್ರಿಟಿ ಕಪಲ್ ರಘು ಮತ್ತು ಅಮೃತಾ ಮೂರ್ತಿ ಎರಡನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ತಮ್ಮ ಕುಟುಂಬಕ್ಕೆ ಶೀಘ್ರವೇ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.
'ಹೈಟ್‌ಗಿಂತ ಹಾರ್ಟ್ ಮುಖ್ಯ' ಇದು ಮಿ. ಆ್ಯಂಡ್ ಮಿಸಸ್ ರಂಗೇಗೌಡ ಲವ್ ಸ್ಟೋರಿ!
'ಈ ಎರಡನೇ ಆ್ಯನಿವರ್ಸರಿ ಎಂದು ನಾವು ಮೂವರಾಗಿದ್ದೀವಿ,' ಎಂದು ಬರೆದುಕೊಂಡಿದ್ದಾರೆ. ಹಸಿರು ಬಣ್ಣದ ಸೆಲ್ವಾರ್‌ನಲ್ಲಿ ಅಮೃತಾ, ಫ್ಲೋಲರ್ ಶರ್ಟ್‌ನಲ್ಲಿ ರಘು ಮಿಂಚುತ್ತಿದ್ದಾರೆ. ಸಂತೋಷದ ವಿಚಾರ ಕೇಳುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭ ಹಾರೈಸಿದ್ದಾರೆ ಹಾಗೂ ಅಮೃತಾ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸಸ್ ರಾಗೇಗೌಡ ಧಾರಾವಾಹಿ ಮೂಲಕ ಈ ಜೋಡಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದು. ಇಬ್ಬರೂ ಹಲವು ವರ್ಷಗಳ ಕಾಲ ಪ್ರೀತಿಸಿ, ಪೋಷಕರ ಒಪ್ಪಿಗೆ ಪಡೆದು 2019 ಮೇ 13ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ರಘು ಸಿಕ್ಕಾಪಟ್ಟೆ ಉದ್ದ ಇದ್ದಾರೆ. ಅಮೃತಾ ಪುಟ್ಟ ಗೊಂಬೆ ಇದ್ದಂತೆ, ಇವರಿಬ್ಬರ ಹೈಟ್ ಬಗ್ಗೆ ಪ್ರಶ್ನೆ ಬಂದರೆ 'ಹೈಟ್‌ಗಿಂತ ಹಾರ್ಟ್ ಮುಖ್ಯ' ಎನ್ನುತ್ತಿದ್ದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ರಘು ಅಭಿನಯಿಸಿದ್ದಾರೆ. ಕಿರುತೆರೆ ಜೊತೆ ಹಲವು ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.