
ಮುಂಬೈ (ಜೂ.17): ನಟಿ ಸಂಚಿತಾ ಉಗಾಲೆ ಸಣ್ಣ ವಯಸ್ಸಲ್ಲೇ ಲೋಕಕ್ಕೆ ಶಾಶ್ವತವಾಗಿ ವಿದಾಯ ಹೇಳಿದ್ದಾರೆ. ಸಂಚಿತಾ ಖಿನ್ನತೆಯಿಂದ (ಡಿಪ್ರೆಷನ್) ಬಳಲುತ್ತಿದ್ದರು. ಈ ನಿಟ್ಟಿನಲ್ಲಿ ವೈದ್ಯರೊಬ್ಬರ ಬಳಿ ಅವರಿಗೆ ಚಿಕಿತ್ಸೆ ಕೂಡ ನಡೆಯುತ್ತಿತ್ತು.ಆಕೆಯ ಸಾವಿನ ನಂತರ ಹಲವು ರೀತಿಯ ಆರೋಪಗಳು ಕೇಳಿಬರುತ್ತಿವೆ. ಚಿತ್ರರಂಗದ (ಇಂಡಸ್ಟ್ರಿ) ಒತ್ತಡದಿಂದಾಗಿಯೇ ಆಕೆ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ ಎಂದು ಸಂಚಿತಾಳ ಸ್ನೇಹಿತರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ಕೆಲವರ ಪ್ರಕಾರ, ಆಕೆಗೆ ಕೆಲಸ ಸಿಗುತ್ತಿರಲಿಲ್ಲ ಎನ್ನುವ ಆರೋಪಗಳು ಇದ್ದವು. ಈ ನಡುವೆ ಸಂಚಿತಾಳ ಕೆಲವು ಚಾಟ್‌ಗಳು ಮುನ್ನೆಲೆಗೆ ಬಂದಿವೆ. ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸಂಚಿತಾ ತನ್ನ ಮನೆಯ ಒಂದು ಕೋಣೆಯಲ್ಲಿ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ತದನಂತರ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ನಟಿ ಮೃತಪಟ್ಟಿರುವುದಾಗಿ ಘೋಷಿಸಿದರು.
ಪೊಲೀಸರು ಸಂಚಿತಾ ಉಗಾಲೆ ಅವರ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖಾಧಿಕಾರಿಗಳು ಈ ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆಯ ಕುಟುಂಬಸ್ಥರು ಸಾವಿನ ಕಾರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ನಟಿಯ ತಂದೆಯ ಆರೋಪದ ಪ್ರಕಾರ, ಆಕೆಯ ಮೇಲೆ ತೀವ್ರ ಮಾನಸಿಕ ಒತ್ತಡವಿತ್ತು.
"ಸಾವಿಗೂ ಮುನ್ನಆಕೆಗೆ ನಿರಂತರವಾಗಿ ಕಿರುಕುಳ ನೀಡಲಾಗಿತ್ತು. ಇಂಡಸ್ಟ್ರಿಯ ಕೆಲವು ಜನರ ಒತ್ತಡ ಆಕೆಯ ಮೇಲಿತ್ತು. ಆಕೆ ಮನೆಯಲ್ಲಿ ಸದಾ ಸಮಸ್ಯೆಯಲ್ಲಿ ಇದ್ದ ಹಾಗೆಯೇ ಇರುತ್ತಿದ್ದಳು. ಮೇಲ್ನೋಟಕ್ಕೆ ಎಲ್ಲವೂ ಸರಿಯಿದ್ದಂತೆ ಕಾಣಿಸುತ್ತಿತ್ತು, ಆದರೆ ಆಕೆ ಒಳಗಿನಿಂದ ಸಂಪೂರ್ಣವಾಗಿ ನೊಂದಿದ್ದಳು. ಇಂಡಸ್ಟ್ರಿಯ ಒತ್ತಡದಿಂದಾಗಿಯೇ ನನ್ನ ಮಗಳು ಹೀಗೆ ಮಾಡಿಕೊಂಡಿದ್ದಾಳೆ' ಎಂದು ತಂದೆ ಆರೋಪಿಸಿದ್ದಾರೆ.
ಸಂಚಿತಾ ಉಗಾಲೆ ಮತ್ತು ಆಕೆಯ ಸೈಕಾಲಜಿಸ್ಟ್ (ಮನಶ್ಶಾಸ್ತ್ರಜ್ಞ) ನಡುವೆ ನಡೆದಿರುವ ವಾಟ್ಸಾಪ್ ಚಾಟ್‌ಗಳು ಕೂಡ ಈಗ ಮುನ್ನಲೆಗೆ ಬಂದಿವೆ. ಈ ಚಾಟ್‌ಗಳನ್ನು ನೋಡಿದರೆ, ಸಂಚಿತಾ ತನ್ನ ಭವಿಷ್ಯದ ಬಗ್ಗೆ ಚಿಂತೆಯಲ್ಲಿದ್ದಳು ಮತ್ತು ಭಯದ ನೆರಳಿನಲ್ಲಿದ್ದಳು ಎಂಬುದು ಕಂಡುಬರುತ್ತದೆ. ಇದಲ್ಲದೆ, ಶೂಟಿಂಗ್ ಸಮಯದಲ್ಲಿ ಆಕೆಗೆ ಡೈಲಾಗ್‌ಗಳನ್ನು (ಸಂಭಾಷಣೆ) ನೆನಪಿಟ್ಟುಕೊಳ್ಳಲು ಸಹ ತೊಂದರೆಯಾಗುತ್ತಿತ್ತು. ಚಾಟ್‌ಗಳ ಪ್ರಕಾರ, ಸಂಚಿತಾ ಅತಿಯಾದ ಒತ್ತಡದಲ್ಲದ್ದಳು ಮತ್ತು ಆಕೆಗೆ ಮೊದಲಿನಂತೆ ನಟನೆ ಮಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂಬುದು ತಿಳಿದುಬರುತ್ತಿದೆ. ಈ ಬಗ್ಗೆ ಆಕೆ ವೈದ್ಯರೊಂದಿಗೂ ಸಂವಾದ ನಡೆಸಿದ್ದಳು. ಚಿಕಿತ್ಸೆಯ ನಂತರವೂ ಆಕೆಗೆ ತನ್ನಲ್ಲಿ ಯಾವುದೇ ಬದಲಾವಣೆಗಳು ಕಾಣಿಸುತ್ತಿರಲಿಲ್ಲ. ವೈದ್ಯರು ಆಕೆಗೆ ಧೈರ್ಯದಿಂದ ಇರುವಂತೆ ಸಲಹೆ ನೀಡಿದ್ದರು.
ನಟಿ ಸಂಚಿತಾ ನಿಧನದ ನಂತರ ಮೇಘಾ ಶರ್ಮಾ ಭಾರೀ ಹೇಳಿಕೆ ನೀಡಿದ್ದಾರೆ. 'ಸಂಚಿತಾ ಜನವರಿ ತಿಂಗಳಿನಿಂದಲೇ ಡಿಪ್ರೆಷನ್ ಎದುರಿಸುತ್ತಿದ್ದಳು ಮತ್ತು ಇಂಡಸ್ಟ್ರಿಯ ಒತ್ತಡ ಆಕೆಯ ಈ ಸಮಸ್ಯೆಗೆ ಕಾರಣವಾಗಿರಲಿಲ್ಲ. ಆಕೆಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದವು' ಎಂದು ಹೇಳಿದ್ದಾರೆ.
ಸಂಚಿತಾಳ ಮೇಲೆ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಒತ್ತಡವಿರಲಿಲ್ಲ ಎಂದು ಮೇಘಾ ತಿಳಿಸಿದ್ದಾರೆ. "ಈ ವದಂತಿಗಳಿಗೆ ಯಾವುದೇ ಆಧಾರವಿಲ್ಲ. ಕೆಲಸ ಆಕೆಗೆ ಎಂದಿಗೂ ಸಮಸ್ಯೆಯಾಗಿರಲಿಲ್ಲ, ಹಾಗೆಯೇ ಆಕೆಗೆ ಈ ಇಂಡಸ್ಟ್ರಿಯಿಂದ ಯಾವುದೇ ರೀತಿಯ ಒತ್ತಡ ಅಥವಾ ಕಿರುಕುಳ ಎದುರಾಗಿರಲಿಲ್ಲ. ಅಂತಹದ್ದೇನೂ ಸಂಭವಿಸಿಲ್ಲ," ಎಂದು ನಟಿ ಹೇಳಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.