ಜೀ ಕನ್ನಡದಲ್ಲಿ ವೀಕೆಂಡ್‌ನಲ್ಲಿ ಪ್ರಸಾರ ಆಗೋ 'ಸೂಪರ್ ಕ್ವೀನ್ಸ್' ಕಾರ್ಯಕ್ರಮದಲ್ಲಿ ನಟಿ ರಶ್ಮಿ ಪ್ರಭಾಕರ್ ಎಂಥವರ ಕಣ್ಣಲ್ಲೂ ನೀರು ತರಿಸೋ ಸಂಗತಿಯನ್ನು ಹೇಳಿದ್ದಾರೆ. ಅಮ್ಮ ವೆಂಟಿಲೇಟರಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದರೆ ನಾನಿಲ್ಲಿ ಸೂಪರ್ ಕ್ವೀನ್ಸ್ ಸ್ಟೇಜ್‌ನಲ್ಲಿದ್ದೆ ಅನ್ನೋ ಅವರ ಆ ಹೊತ್ತಿನ ಕಥೆ ಕೇಳಿದ್ರೆ ನಮ್ ಕಣ್ಣಲ್ಲೂ ನೀರು ಬರುತ್ತೆ.
'ಸೂಪರ್ ಕ್ವೀನ್ಸ್' ಅನ್ನೋ ಕಾರ್ಯಕ್ರಮ ಜೀ ಕನ್ನಡದಲ್ಲಿ ವೀಕೆಂಡ್‌ನಲ್ಲಿ ಪ್ರಸಾರವಾಗುತ್ತೆ. ಕಳೆದ ವೀಕೆಂಡ್ ಫುಲ್ ಅಮ್ಮಂದಿರೇ ಸೂಪರ್ ಕ್ವೀನ್ಸ್ ಆಗಿದ್ದರು. ಒಬ್ಬೊಬ್ಬ ತಾಯಿಯ ಕಥೆಯೂ ಒಂದೊಂದು ರೀತಿ ಇತ್ತು. ಆದರೆ ಸಖತ್ ಫನ್ನಿಯಾಗಿ ತನ್ನ ಎಂದಿನ ತುಂಟತನದಲ್ಲೇ ಮಾತನ್ನ ಆರಂಭಿಸಿದ ರಶ್ಮಿ ಪ್ರಭಾಕರ್ ಅಮ್ಮ ರೇವತಿ ಬಗ್ಗೆ ಹೇಳಿದ ಮೊದಲ ಮಾತು - ' ನನ್ನ ಅಮ್ಮಂಗೆ ಡಿಸಿಶನ್ ಮೇಕಿಂಗ್ ಇಲ್ಲ. ಸ್ಕೂಲಲ್ಲಿ ಏನೇ ಸಣ್ಣ ಟೆಸ್ಟ್ ರಿಪೋರ್ಟ್ ಗೆ ಸೈನ್ ಮಾಡು ಅಂದರೂ ಮಾಡ್ತಿರಲಿಲ್ಲ. ತನಗೆ ಗೊತ್ತಾಗಲ್ಲ ಅಂತಿದ್ರು. ಆದರೆ ಇನ್ನೊಂದು ಕಡೆ ಅಪ್ಪಂಗೆ ಹಾಕ್ಕೊಟ್ಟುಬಿಡ್ತಿದ್ರು, ಅಮ್ಮನ ಚಿತಾವಣೆಯಿಂದ ಅಪ್ಪ ಹೊಡಿಯೋದಕ್ಕೆ ಬಂದ್ರೆ, ಅಯ್ಯೋ ಹೊಡೀಬೇಡಿ, ಮಗೂಗೆ ಯಾಕೆ ಹೊಡೀತೀರ' ಅಂತ ಅಮ್ಮಂಗೆ ಕ್ಲಾಸ್ ತಗೊಳ್ತಿದ್ರು. ಕಾನ್ವೆಂಟಲ್ಲಿ ಓದಿದ ಅಮ್ಮ ಮದುವೆ ಆಗಿ ಹಳ್ಳಿಗೆ ಬರ್ತಾರೆ. ಅಲ್ಲೇ ಕನ್ನಡ ಕಲೀತಾರೆ. ಹಳ್ಳಿ ಬದುಕನ್ನು ಒಪ್ಪಿ ಅಪ್ಕೊಳ್ತಾರೆ' ಅಂತ.
ರಶ್ಮಿ ಅವರ ಮೊದಲ ಮಾತನ್ನು ಕೇಳಿದವರು ಇವ್ರ ಲೈಫು ಸಖತ್ತಾಗಿದೆಯಲ್ಲ ಅಂದುಕೊಳ್ಳೋ ಹಾಗಿತ್ತು. ಆದರೆ ಆಮೇಲೆ ಅವರಂದ ಮಾತು ಎಂಥವರ ಕಣ್ಣಲ್ಲೂ ನೀರು ತರಿಸೋ ಹಾಗಿತ್ತು. ರಶ್ಮಿ ಪ್ರಭಾಕರ್ ಈ ಸ್ಟೇಜ್‌ಗೆ ಬರೋದಕ್ಕೂ ಮೊದಲು ಅವರ ಮದ್ವೆ ಫೋಟೋಸ್ ವೈರಲ್ ಆಗಿದ್ದವು. ನಿಖಿಲ್ ಜೊತೆ ಸಪ್ತಪದಿ ತುಳಿದ ಇವರಿಗೆ ಎರಡನೇ ಅಮ್ಮನಾಗಿ ಸಿಕ್ಕಿದ್ದು ಅತ್ತೆ ಅಂತೆ. ಅತ್ತೆ ಕೊಟ್ಟ ಸಹಕಾರಕ್ಕೆ ಪ್ರತಿಯಾಗಿ ಅವರನ್ನೂ ಸ್ಟೇಜ್ ಮೇಲೆ ಕರೆಸಿ ಅವರಿಂದ ಚಂದದೊಂದು ಹಾಡು ಹಾಡಿಸಿ ಗಿಫ್ಟ್ ಕೊಟ್ಟು ಇನ್ಮೇಲಿಂದ ಅತ್ತೆಯನ್ನು ಅಮ್ಮ ಅಂತಲೇ ಕರೀತೀನಿ ಅಂತ ವಾಗ್ದಾನ ಮಾಡಿದ್ರು ರಶ್ಮಿ.
ಕೈ ಕಾಲಿಲ್ಲ ಅಂದ್ರೂ ಮನೆಯಲ್ಲಿ ದೊಡ್ಡವರು ಇರಬೇಕು; ತಾಳಿ ಅಡವಿಟ್ಟ ಘಟನೆ ನೆನೆದು ಹೇಮಲತಾ ಭಾವುಕ
ಆದರೆ ಈ ಸೂಪರ್ ಕ್ವೀನ್ಸ್‌ನಲ್ಲಿ ಅವರು ಅಮ್ಮನ ಸ್ಥಿತಿ ಬಗ್ಗೆ ಹೇಳಿದ್ದು ಮಾತ್ರ ಬಹಳ ಎಮೋಶನಲ್ ಕ್ಷಣವಾಗಿತ್ತು. ಮರುದಿನ ಸೂಪರ್ ಕ್ವೀನ್ಸ್ ಕಾರ್ಯಕ್ರಮ. ಅಷ್ಟೊತ್ತಿಗೆ ಅಮ್ಮನಿಗೆ ಉಬ್ಬಸ ಜೋರಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಆಗ ಅಮ್ಮನನ್ನ ವೆಂಟಿಲೇಟರ್‌ಗೆ ಹಾಕ್ತಾರೆ. ಅಮ್ಮ ವೆಂಟಿಲೇಟರ್‌ನಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಾ ಇದ್ರೆ ರಶ್ಮಿ ಪ್ರೋಗ್ರಾಂಗೆ ರೆಡಿ ಆಗ್ತಾ ಇರ್ತಾರೆ. ಕ್ರಮೇಣ ಅಮ್ಮನಿಗೆ ಮೆಮೊರಿ ಲಾಸ್ ಆಗುತ್ತು. ಗಂಡ ಮಕ್ಕಳು ಬಿಟ್ಟರೆ ಮತ್ಯಾರನ್ನೂ ಅವರು ಗುರುತು ಹಿಡಿಯೋದಿಲ್ಲ. ಆಸ್ಪತ್ರೆಯಲ್ಲಿ ಏನೇನೆಲ್ಲ ಮಾತಾಡ್ತಾರೆ. ಯಾರೋ ಬರ್ತಿದ್ದಾರೆ ನೋಡು ಅಂತ ಪದೇ ಪದೇ ಹೇಳ್ತಾರೆ. ಇದನ್ನು ಕಂಡು ಮನೆಯವರಿಗೆ ಜೀವ ಬಾಯಿಗೆ ಬಂದ ಅನುಭವ.
ಸೂಪರ್ ಕ್ವೀನ್ ಕಾರ್ಯಕ್ರಮಕ್ಕೆ ಲಾಸ್ಟ್ ವೀಕ್ ಐದನೇ ವಾರ. ನಾಲ್ಕು ವಾರಗಳೂ ರಶ್ಮಿ ಅವರ ಅಮ್ಮ ಆಸ್ಪತ್ರೆಯಲ್ಲೇ ಇರ್ತಾರೆ. ಐದನೇ ವಾರ ಅಮ್ಮಂದಿರ ವಾರ. ವೀಲ್ ಚೇರ್‌ನಲ್ಲೇ ಸ್ಟೇಜ್ ಗೆ ಬರೋ ರಶ್ಮಿ ಅಮ್ಮ ರೇವತಿ ಸ್ಟೇಜ್ (Stage) ಮೇಲೆ ಕುರಿ ಪ್ರತಾಪ್ ಅವರಿಗೆ ಟಂಗ್ ಟ್ವಿಸ್ಟರ್ ಇಂಗ್ಲೀಷ್ ಸೆಂಟೆನ್ಸ್ ಹೇಳಿ ಕೊಡ್ತಾರೆ. ನಗು ನಗುತ್ತಾ ತಾನಿಷ್ಟು ದಿನ ಆಸ್ಪತ್ರೆಯಲ್ಲಿ ಇದ್ದಿದ್ದೇ ಸುಳ್ಳು ಅನ್ನೋ ರೀತಿ ವರ್ತಿಸುತ್ತಾರೆ.
ಮೈ ಮೇಲೆ ಕುದಿಯುವ ನೀರು ಬಿದ್ದರೂ ಹೇಳಿಕೊಂಡಿರಲಿಲ್ಲ; ತಾಯಿ ನೆನೆದು ಭಾವುಕರಾದ ಗೀತಾ
ಇವರನ್ನು ನೋಡ್ತಾ ನೋಡ್ತಾ ಜಡ್ಜ್ ಸೀಟ್‌ನಲ್ಲಿ ಕೂತಿರೋ ವಿಜಯ ರಾಘವೇಂದ್ರ ಅವರು ತಮ್ಮ ಅನುಭವ ಹೇಳ್ತಾರೆ. ಅವರು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋ ನಲ್ಲಿರುವವಾಗಲೇ ಅವರಿಗೆ ಆಸ್ಪತ್ರೆ Hospital)ಯಿಂದ ಕಾಲ್ ಬಂದಿತ್ತಂತೆ, ನಿಮ್ಮ ಅಮ್ಮ ಕ್ರಿಟಿಕಲ್ ಕಂಡೀಶನ್‌ನಲ್ಲಿ(Condition) ಇದ್ದಾರೆ. ಅಂತ ಇವರು, ತಮ್ಮ ಶ್ರೀ ಮುರಳಿ ಎಲ್ಲ ಆಸ್ಪತ್ರೆಗೆ ಓಡಿ ಬರ್ತಾರೆ. ಅಮ್ಮನನ್ನ ನೋಡಿ ಬಹಳ ಸಂಕಟ ಪಡ್ತಾರೆ. ಅದೃಷ್ಟವಶಾತ್ ಅವರ ಅಮ್ಮ ಸಾವಿನ ದವಡೆಯಿಂದ ಪಾರಾಗಿ ಬರ್ತಾರೆ. ಅಮ್ಮನ ಬಗ್ಗೆ ಹೀಗೆ ಹೇಳ್ತಾ, 'ಈ ಅಮ್ಮಂದಿರದೆಲ್ಲ ಮೊಂಡು ಜೀವ. ಅವರು ಸಾವಿನ ಜೊತೆಗೇ ನಾನಾ ನೀನಾ ಅಂತ ಫೈಟ್ ಮಾಡಿ ಸಾವಿಗೆ ಢಿಚ್ಚಿ ಕೊಟ್ಟು ಬರ್ತಾರೆ. ಅದು ಅವರ ಕುಟುಂಬ ಪ್ರೀತಿ (Love), ಕಮಿಟ್‌ಮೆಂಟ್' ಅಂತ ಅರ್ಥಪೂರ್ಣ ಮಾತು ಹೇಳ್ತಾರೆ ವಿಜಯ ರಾಘವೇಂದ್ರ.
ಸಾವನ್ನೆ ಗೆದ್ದು ಬಂದ ತನ್ನಮ್ಮನಿಗೆ ರಶ್ಮಿ ಸ್ಟೇಜ್‌ನಲ್ಲಿ ಪ್ರೀತಿಯಿಂದ ಬಳೆ ತೊಡಿಸಿದ್ದು ಬಹಳ ಎಮೋಶನಲ್ ಕ್ಷಣವಾಗಿತ್ತು.