Bigg Boss Tamil: ಕಮಲ್ ಹಾಸನ್ ಸ್ಥಾನಕ್ಕೆ ನಿರೂಪಕಿಯಾಗಿ ನಟಿ ರಮ್ಯಾ ಕೃಷ್ಣ ಎಂಟ್ರಿ!

Suvarna News   | Asianet News
Published : Nov 27, 2021, 04:36 PM IST
Bigg Boss Tamil: ಕಮಲ್ ಹಾಸನ್ ಸ್ಥಾನಕ್ಕೆ ನಿರೂಪಕಿಯಾಗಿ ನಟಿ ರಮ್ಯಾ ಕೃಷ್ಣ ಎಂಟ್ರಿ!

ಸಾರಾಂಶ

ಮೊದಲ ಬಾರಿಗೆ ತಮಿಳು ರಿಯಾಲಿಟಿ ಶೋ ನಿರೂಪಕಿಯಾಗಿ ಎಂಟ್ರಿ ಕೊಡಲಿದ್ದಾರೆ ನಟಿ ರಮ್ಯಾ ಕೃಷ್ಣ. ಕಮಲ್ ಆರೋಗ್ಯದಲ್ಲಿ ಚೇತರಿಕೆ...

ಕಿರುತೆರೆ ವಾಹಿನಿಗಳ ಜನಪ್ರಿಯ ರಿಯಾಲಿಟಿ ಶೋ ಅಂದರೆ ಬಿಗ್ ಬಾಸ್ (Bigg Boss). ಹಿಂದಿಯಲ್ಲಿ (Hindi BB) 15 ಸೀಸನ್, ಕನ್ನಡದಲ್ಲಿ (Kannada BB) 8 ಸೀಸನ್, ತೆಲಗಿನಲ್ಲಿ (Telugu BB) 5 ಸೀಸನ್, ತಮಿಳಿನಲ್ಲಿ (Tamil BB) 5 ಸೀಸನ್ ಹಾಗೂ ಮಲಯಾಳಂನಲ್ಲಿ (Malayalam BB) 3 ಸೀಸನ್. ಹೀಗೆ 100 ದಿನಗಳ ಕಾಲ ಬಿಬಿ ಮನೆಯೊಳಗೆ  ಕಾಲಿಟ್ಟ ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರು ನಾನ್‌ ಸ್ಟಾಪ್ ಮನೋರಂಜನೆ ನೀಡಿ ಲಕ್ಷಗಟ್ಟಲೆ ಹಣ ಮತ್ತು ವಿನ್ನರ್ ಟ್ರೋಫಿ ಪಡೆದುಕೊಂಡಿದ್ದಾರೆ. 

 ಆರಂಭದಿಂದಲೂ ವಾಹಿನಿ ಸ್ಟಾರ್ ನಟರ ಜೊತೆ ನಿರೂಪಣೆಗೆ ಒಪ್ಪಂದ ಮಾಡಿಕೊಂಡಿರುತ್ತದೆ, ತುರ್ತು ಕೆಲಸ ಅಥವಾ ಆರೋಗ್ಯದಲ್ಲಿ ಸಮಸ್ಯೆ ಇದ್ದರೆ ಮಾತ್ರ ನಿರೂಪಕರು ತಾತ್ಕಾಲಿಕವಾಗಿ ಬದಲಾಗುತ್ತಾರೆ. 

ತಮಿಳು ಬಿಗ್ ಬಾಸ್ ಸೀಸನ್ 5ರ ನಿರೂಪಕ ನಟ ಕಮಲ್ ಹಾಸನ್ (Kamal Hassan) ಅವರಿಗೆ ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ (Covid19 positive) ಇರುವುದಾಗಿ ತಿಳಿದು ಬಂದ್ದಿತ್ತು. ಹೀಗಾಗಿ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಯಾವ ಕೆಲಸಗಳನ್ನು ಮಾಡುವುದಿಲ್ಲ ಎಂದು ತಿಳಿಸಿದ್ದರು. ಆದರೆ ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮ ನಡೆಯಬೇಕು. ಹಾಗೇಯೆ ಒಬ್ಬ ಸ್ಪರ್ಧಿಯನ್ನು ಮನೆಯಿಂದ ಹೊರಗಡೆ ಕರೆಯಬೇಕು, ಹೀಗಾಗಿ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗಲು ತಾತ್ಕಾಲಿಕವಾಗಿ ನಟಿ ರಮ್ಯಾ ಕೃಷ್ಣ (Ramya Krishna) ಆಗಮಿಸಲಿದ್ದಾರೆ. ಕಮಲ್ ಹಾಸನ್ ಅವರ ಸ್ಥಾನವನ್ನು ಕೆಲವು ದಿನಗಳ ಮಟ್ಟಿಗೆ ರಮ್ಯಾ ತುಂಬಲಿದ್ದಾರಂತೆ. 

ತೆಲುಗು ಬಿಗ್ ಬಾಸ್ ನಿರೂಪಕ ನಟ ನಾಗಾರ್ಜುನ್ (Nagarjun) ಅವರು 3ನೇ ಸೀಸನ್‌ ಸಮಯಲ್ಲಿ ವಿದೇಶ ಪ್ರಯಾಣ ಮಾಡುವಾಗ ನಟಿ ರಮ್ಯಾ ಕೃಷ್ಣ ಅವರು ತಾತ್ಕಾಲಿಕ ನಿರೂಪಕಿಯಾಗಿ ನಡೆಸಿಕೊಟ್ಟಿದ್ದರು ಹೀಗಾಗಿ ಚಿತ್ರೀಕರಣ, ಸ್ಕ್ರಿಪ್ಟ್ ಮತ್ತು ಸ್ಪರ್ಧಿಗಳ ಜೊತೆ ಸ್ಪಾನ್ಟೇನಿಯಸ್ (spontaneous chat) ಆಗಿ ಮಾತನಾಡುವ ರೀತಿ ಅವರಿಗೆ ತಿಳಿದಿದೆ. ಕಿರುತೆರೆ ವೀಕ್ಷಕರಿಗೆ ರಮ್ಯಾ ಕೃಷ್ಣ ಕೊಂಚ ಹತ್ತಿರವಾಗಿರುವ ಕಾರಣ ವಾಹಿನಿ ಅವರಿಗೆ ಕೆಲಸ ಸುಲಭವಾಗುತ್ತದೆ.

ಕಮಲ್‌ ಹಾಸನ್‌ಗೆ ಕೊರೊನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು

ವಿದೇಶದಲ್ಲಿ ಕಮಲ್ ಹಾಸನ್ ರವರು ಖಾದಿ ಬ್ರ್ಯಾಂಡ್ ಆದ 'House of Khadher' ಲಾಂಚ್ ಮಾಡಿ ಭಾರತಕ್ಕೆ ಆಗಮಿಸುವಾಗ ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದು, ಪಾಸಿಟಿವ್ ಎಂದು ತಿಳಿದು ಬಂದಿತ್ತು. ತಕ್ಷಣವೇ ಚೆನ್ನೈನ ಶ್ರೀರಾಮಚಂದ್ರ ಮೆಡಿಕಲ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ವೈದ್ಯ ಸುಹಾಸ್ ಅವರು ಕಮಲ್ ಆರೋಗ್ಯದ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ ಅಪ್ಡೇಟ್ ನೀಡುತ್ತಿರುತ್ತಾರೆ. 'His condition continues to remain stable' ಎಂದು ಇತ್ತೀಚಿಗೆ ರಿಲೀಸ್ ಮಾಡಿದ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಕ್ಷಿತಾ- ಧ್ರುವಂತ್​ ಫೋಟೋ ಶೇರ್​ ಮಾಡಿದ Bigg Boss ವೀಕ್ಷಕರಿಗೆ ಕೇಳಿದೆ ಈ ಪ್ರಶ್ನೆ: ನಿಮ್ಮ ಉತ್ತರವೇನು?
Amruthadhaare ಭಾರಿ ಟ್ವಿಸ್ಟ್​: ಕೇಡಿ ಜೈದೇವ್​ಗೇ ಚಳ್ಳೆಹಣ್ಣು ತಿನ್ನಿಸಿ ಭರ್ಜರಿ ಹೊಸ ಎಂಟ್ರಿ ಕೊಟ್ಟವ ಯಾರೀತ?