‘ಆದಿ ಲಕ್ಷ್ಮೀ ಪುರಾಣ’ದಿಂದ ಔಟ್…. ಕೊನೆಗೂ ನಿಜ ಕಾರಣ ಬಿಚ್ಚಿಟ್ಟ ಅಮ್ಮು

Published : Mar 13, 2026, 10:25 PM IST
Adi Lakshmi Purana

ಸಾರಾಂಶ

Adilakshmi Purana: ಜೀ ಕನ್ನಡದಲ್ಲಿ ಇತ್ತೀಚೆಗೆ ಶುರುವಾದ ಆದಿಲಕ್ಷ್ಮೀ ಪುರಾಣ ಧಾರಾವಾಹಿಯಿಂದ ಅಮೃತಾ ಪಾತ್ರಧಾರಿ ನಟಿ ರಕ್ಷಿತಾ ಹೊರ ಬಂದಿದ್ದರು. ವೀಕ್ಷಕರು ಇದರಿಂದ ಬೇಸರಗೊಂಡಿದ್ದು, ಇದೀಗ ಕೊನೆಗೂ ನಟಿ ತಾವು ಧಾರಾವಾಹಿಯಿಂದ ಹೊರ ಬಂದಿರುವುದಕ್ಕೆ ಕಾರಣ ತಿಳಿಸಿದ್ದಾರೆ. 

ಆದಿಲಕ್ಷ್ಮೀ ಪುರಾಣ

ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಶುರುವಾದ ಧಾರಾವಾಹಿ ಆದಿಲಕ್ಷ್ಮೀ ಪುರಾಣ. ಈ ಧಾರಾವಾಹಿ ಒಲ್ಲದ ಮದುವೆಗೆ ತಲೆ ಕೊಟ್ಟಂಟಹ ನಾಯಕ ಆದಿ ಮತ್ತು ನಾಯಕಿ ಲಕ್ಷ್ಮೀ ಜೀವನದ ಕಥೆಯಾಗಿದೆ. ನಾಯಕ ಆದಿಯ ಅಕ್ಕ ಅಮೃತಾ ಪಾತ್ರವೂ ಜನಮನ ಗೆದ್ದಿತ್ತು. ಪಾಪದ ಹುಡುಗಿ, ಆದರೆ ವಿದೇಶಕ್ಕೆ ಹೋಗಿ ಕಲಿಯಬೇಕೆಂದಿದ್ದ ಅಮೃತಾ, ಲಕ್ಷ್ಮಿಯ ಅಣ್ಣ ಸಂಜೀವನನ್ನು ಮದುವೆಯಾಗಿ, ಶ್ರೀಮಂತರ ಮನೆಯಿಂದ ಬಡವರ ಮನೆಗೆ ಬಂದು ಕಷ್ಟಗಳನ್ನು ಅನುಭವಿಸುತ್ತಿದ್ದಾಳೆ. ಅಮೃತಾ ಪಾತ್ರದಲ್ಲಿ ಇಲ್ಲಿವರೆಗೆ ಹೊಸ ನಟಿಯಾದ ರಕ್ಷಿತಾ ನಟಿಸಿದ್ದು, ನಟಿ ಮುಗ್ಧ ಮುಖ, ಮುದ್ದಾದ ನಟನೆ ಎಲ್ಲವನ್ನೂ ಜನ ಇಷ್ಟಪಟ್ಟಿದ್ದರು. ಇದೀಗ ನಟಿ ಧಾರಾವಾಹಿಯಿಂದ ಇದ್ದಕ್ಕಿದ್ದಂತೆ ಹೊರ ಬಂದಿದ್ದಾರೆ. ಅವರ ಜಾಗಕ್ಕೆ ನಟಿ ಮಾನ್ಸಿ ಜೋಷಿ ಬಂದಿದ್ದು, ವೀಕ್ಷಕರು ರಕ್ಷಿತಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ನಟಿ ರಕ್ಷಿತಾ ಸ್ವತಃ ತಾವು ಸೀರಿಯಲ್ ಬಿಡಲು ಕಾರಣ ಏನೆಂದು ತಿಳಿಸಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ರಕ್ಷಿತಾ ‘ಈ ದಿನ ಬರುತ್ತದೆ ಅಂತ ಯಾವತ್ತೂ ಅನಿಸಿರಲಿಲ್ಲ… ಆದರೆ ಕೆಲವು ಪರಿಸ್ಥಿತಿಗಳ ಕಾರಣದಿಂದ ಇಂದು ಈ ಮಾತು ಬರೆಯಬೇಕಾದ ಪರಿಸ್ಥಿತಿ ಬಂದಿದೆ. Adilakshmi Purana ಧಾರಾವಾಹಿಯಲ್ಲಿ Ammu ಪಾತ್ರ ಮಾಡೋದು ನನಗೆ ತುಂಬಾ ವಿಶೇಷವಾದ ಪ್ರಯಾಣವಾಗಿತ್ತು. ಈ ಪಾತ್ರದ ಮೂಲಕ ನೀವು ಎಲ್ಲರೂ ನನ್ನ ಮೇಲೆ ತೋರಿಸಿದ ಪ್ರೀತಿ ಮತ್ತು ಬೆಂಬಲ ನನಗೆ ತುಂಬಾ ಅಮೂಲ್ಯ.

ನನಗೆ ಈಗ ತುಂಬಾ ಸಂದೇಶಗಳು ಬರುತ್ತಿವೆ – ನೀವು Ammu ಪಾತ್ರವನ್ನು ಎಷ್ಟು ಇಷ್ಟಪಡ್ತೀರಾ ಅಂತ❤️. ನಿಜ ಹೇಳಬೇಕಂದರೆ, ಆ comments & messages ಓದಿದಾಗ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ನಾನು ಈ ಧಾರಾವಾಹಿಯನ್ನು ಇನ್ನೂ ಬಹಳ ಕಾಲ ಮಾಡ್ತೀನಿ ಅಂತ ಭಾವಿಸಿದ್ದೆ… ಆದರೆ ಕೆಲವು ಪರಿಸ್ಥಿತಿಗಳ ಕಾರಣದಿಂದ ನಾನು ಈ ಧಾರಾವಾಹಿಗೆ ವಿದಾಯ ಹೇಳಬೇಕಾಗಿದೆ. ಈ ಸುಂದರ ಪ್ರಯಾಣಕ್ಕೆ ಕಾರಣವಾದ ನಮ್ಮ ಸಂಪೂರ್ಣ ತಂಡ ಮತ್ತು ಎಲ್ಲಾ ತಾಂತ್ರಿಕ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ವಿಶೇಷವಾಗಿ @zee kannada ವಾಹಿನಿಗೆ , Sudheendra sir and Santosh Koti sir ಅವರಿಗೆ ನನಗೆ ಈ ಅದ್ಭುತ ಅವಕಾಶ ನೀಡಿ, ನಿಮ್ಮ ಮುಂದೆ ನಟಿ ಆಗಿ ಕಾಣಿಸಿಕೊಳ್ಳುವ ಅವಕಾಶ ಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು.

 

 

 

ನನ್ನನ್ನು ಇಷ್ಟು ಪ್ರೀತಿಯಿಂದ ಬೆಂಬಲಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಬೆಂಬಲವೇ ನನಗೆ ಯಾವಾಗಲೂ ದೊಡ್ಡ ಶಕ್ತಿ. ಇದು ಅಂತ್ಯ ಅಲ್ಲ… ಇದು ಒಂದು ಹೊಸ ಆರಂಭ. ಮುಂದಿನ ನನ್ನ ಪ್ರಾಜೆಕ್ಟ್‌ಗಳಲ್ಲಿಯೂ ನೀವು ಇದೇ ರೀತಿ ನನ್ನನ್ನು ಪ್ರೀತಿಸಿ, ಬೆಂಬಲಿಸುತ್ತೀರಾ ಎಂದು ನಾನು ಆಶಿಸುತ್ತೇನೆ. Ammu ಪಾತ್ರ ಯಾವಾಗಲೂ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿರುತ್ತದೆ… ಮತ್ತು ನೀವು ಎಲ್ಲರೂ ಕೂಡ. ಎಲ್ಲರಿಗೂ ನನ್ನ ತುಂಬು ಪ್ರೀತಿ.

Signing off - Ammu ಎಂದು ನಟಿ ರಕ್ಷಿತಾ ಬರೆದುಕೊಂಡಿದ್ದಾರೆ. ಆ ಮೂಲಕ ಎಲ್ಲಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗರ್ಭಿಣಿಯಾದ್ಮೇಲೆ ಪತಿಯ ಮೊದಲ ಮದುವೆ ವಿಷ್ಯ ಗೊತ್ತಾಯ್ತು: ರೌಡಿ ಗಂಡನನ್ನು ಬದಲಾಯಿಸಿರೋ ರೇಷ್ಮಾ ಆಂಟಿ ಕರಾಳ ಬದುಕು
ನಾಯಿಗಳ ಹೆಸ್ರೇ ಗೊತ್ತಿಲ್ಲದ ’ಸಿ’ ಆತ: ಒದ್ದು ಓಡಿಸಿ ಟ್ರೀಟ್​ಮೆಂಟ್​ ಕೊಡ್ಬೇಕು: Bigg Boss ವಿನಯ್‌ ಗೌಡ ಕಿಡಿ