
ಕನ್ನಡ ಕಿರುತೆರೆಯಲ್ಲಿ ಮಿಂಚಿರುವ ನಟಿ ರಚಿತಾ ಮಹಾಲಕ್ಷ್ಮಿ ತಮಿಳು ಕಿರುತೆರೆ ಮತ್ತು ಸಿನಿಮಾರಂಗದಿಂದ ಒಳ್ಳೆ ಆಫರ್ ಬಂತು ಎಂದು ಅಲ್ಲಿಗೆ ಹಾರಿದ್ದರು. 2013ರಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಯಲ್ಲಿ ಪಿರಿವೊಮ್ ಸಂದಿಪ್ಪೊಮ್ ಧಾರಾವಾಹಿಯಲ್ಲಿ ರಚಿತಾ ಮತ್ತು ನಟ ದಿನೇಶ್ ಗೋಪಾಲಸ್ವಾಮಿ ಅಭಿನಯಿಸುತ್ತಿದ್ದರು. ಈ ಸಮಯದಲ್ಲಿ ಇವರಿಬ್ಬರ ನಡುವ ಪ್ರೀತಿ ಹುಟ್ಟಿತ್ತು, ಪೋಷಕರ ಒಪ್ಪಿಗೆ ಪಡೆದುಕೊಂಡು ಅದ್ಧೂರಿಯಾಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸೆಲೆಬ್ರಿಟಿ ಕಪಲ್ ಆಗಿದ್ದ ಕಾರಣ ಮದುವೆಯಾದ ನಂತರವೂ ಇಬ್ಬರು 'ನಾಚಿಯಾರ್‌ಪುರಮ್' ಎಂದು ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಹೀಗಾಗಿ ವೀಕ್ಷಕರು ಬಲು ಬೇಗ ನೆಕ್ಟ್ ಆದ್ದರು.
ಸದ್ಯ ಬಿಗ್ ಬಾಸ್ ತಮಿಳು ಸೀಸನ್ 6ರಲ್ಲಿ ರಚಿತಾ ಮಹಾಲಕ್ಷ್ಮಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೆ 60 ದಿನಗಳು ಮುಗಿದಿದ್ದು ಫಿನಾಲೆ ದಿನಕ್ಕೆ ಕೇವಲ 40 ದಿನಗಳು ಉಳಿಸಿದೆ. ಜೀವನ ಕಟ್ಟಿಕೊಳ್ಳಬೇಕು ಎಂದು ರಚಿತಾ ಅತ್ತ ಸೀರಿಯಸ್ ಆಗಿ ಗೇಮ್ ಆಡುತ್ತಿದ್ದಾರೆ ಆದರೆ ಹೊರಗಡೆ ಅವರ ಪರ್ಸನಲ್ ವಿಚಾರ ವೈರಲ್ ಆಗುತ್ತಿದೆ. ಮದುವೆ ಮುರಿದು ಬಿದ್ದಿದೆ, ಅಫೇರ್ ಇದೆ ಎಂದು ಹರಿದಾಡುತ್ತಿದೆ ಆದರೆ ಈ ಬಗ್ಗೆ ರಚಿತಾ ಕ್ಲಾರಿಟಿ ಕೊಟ್ಟಿಲ್ಲ ಆದರೆ ದಿನೇಶ್ ಮಾತ್ರ ಸಣ್ಣದಾಗಿ ಸುಳಿವು ಕೊಟ್ಟಿದ್ದಾರೆ. ಅಲ್ಲದೆ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕು ಎಂದು ರಚಿತಾ ತೀರ್ಮಾನ ಮಾಡಿದ್ದಾರಂತೆ.
ಬಾಡಿಗೆ ಕಟ್ಟಲು ಹೋದಾಗ ಮಂಚಕ್ಕೆ ಕರೆದ ಓನರ್; ನೀರೆರಚಿ ಪರಾರಿ ಆದ ನಟಿ ತೇಜಸ್ವಿನಿ
ಹೌದು! ಕಮಲ್ ಹಾಸನ್ ನಿರೂಪಣೆ ಮಾಡುವ ಬಿಗ್ ಬಾಸ್‌ನಲ್ಲಿ ರಚಿತಾ ತನಗೆ 35 ವಯಸ್ಸಾದಾಗ ಹೆಣ್ಣು ಮಗುವೊಂದನ್ನು ದತ್ತು ಪಡೆಯಬೇಕೆಂಬ ಆಸೆ ಇದೆ ಆದರೆ ಹಣಕಾಸಿನ ವಿಚಾರದಲ್ಲಿ ಫಿಟ್ ಆಗಬೇಕು. ಮಗು ದತ್ತು ಪಡೆಯಲು ಇನ್ನೂ ಮೂರು ವರ್ಷಗಳು ಕಾಯಬೇಕು ಎಂದು ಹೇಳಿಕೊಂಡಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕೋವಿಡ್ ಸಮಯದಲ್ಲಿ ರಚಿತಾ ಮತ್ತು ದಿನೇಶ್ ವೈಮನಸ್ಸಿನಿಂದ ದೂರವಾದ್ದರು ಎನ್ನಲಾಗಿದೆ. ಆದರೆ ವಿಚ್ಛೇಧನ ಪ್ರಾಸೆಸ್‌ಗೆ ಮುಂದುವರೆಯದ ಕಾರಣ ಮತ್ತೆ ಒಟ್ಟಿಗೆ ಆಗಬಹುದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ರಚಿತಾ ಪರ್ಸನಲ್ ಲೈಫ್ ಮತ್ತು ಕೆಲಸ ಎರಡನ್ನೂ ಮಿಕ್ಸ್ ಮಾಡಲಾಗುತ್ತಿದೆ. ತಾವು ನಟಿಸುತ್ತಿರುವ ಧಾರಾವಾಹಿಯೊಂದರಲ್ಲಿ ಪತಿಯನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಬೆಳೆಸುವ ಮಹಿಳೆಯ ಪಾತ್ರದ ಬಗ್ಗೆ ರಚಿತಾ ಹೇಳಿದ್ದರು ಎಂದು ತಮಿಳು ಮಾಧ್ಯಮವೊಂದು ವರದಿ ಮಾಡಿತ್ತು. ಒಟ್ಟಿನಲ್ಲಿ ರಚಿತಾ ಮಹಾಲಕ್ಷ್ಮಿ ಬಿಗ್ ಬಾಸ್‌ಯಿಂದ ಹೊರ ಬಂದ ಮೇಲೆ ಎಲ್ಲವೂ ಕ್ಲಾರಿಟಿ ಸಿಗುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.