Arjun Kapoor ಜತೆಗಿನ ಪ್ರೀ ಹನಿಮೂನ್​ ಅನುಭವ ಹಂಚಿಕೊಂಡ ನಟಿ ಮಲೈಕಾ!

Published : Mar 19, 2023, 03:43 PM IST
Arjun Kapoor ಜತೆಗಿನ ಪ್ರೀ ಹನಿಮೂನ್​ ಅನುಭವ ಹಂಚಿಕೊಂಡ ನಟಿ ಮಲೈಕಾ!

ಸಾರಾಂಶ

ಕೆಲವು ವರ್ಷಗಳಿಂದ ಅರ್ಜುನ್​ ಕಪೂರ್​ ಜೊತೆ ಡೇಟಿಂಗ್​ನಲ್ಲಿರುವ ನಟಿ ಮಲೈಕಾ ಅರೋರಾ, ಪ್ರೀ ಹನಿಮೂನ್​ ಅನುಭವವನ್ನು ಹಂಚಿಕೊಂಡಿದ್ದಾರೆ.  ಅವರು ಹೇಳಿದ್ದೇನು?  

ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಫೇರ್ ಎಲ್ಲರಿಗೂ ತಿಳಿದದ್ದೇ. ಮಲೈಕಾಗೆ 49 ವರ್ಷ ವಯಸ್ಸಾಗಿದ್ದರೆ, ಅರ್ಜುನ್​ ಅವರಿಗಿಂದ 12 ವರ್ಷ ಚಿಕ್ಕವರು. ವಯಸ್ಸು 49 ಆದರೂ ಫಿಟ್​ನೆಸ್​ (Fitness) ಕಾಪಾಡಿಕೊಂಡಿರುವ ನಟಿ ಮಲೈಕಾ ಕೆಲ ವರ್ಷಗಳಿಂದ ದೇಹ ಪ್ರದರ್ಶನವಿಲ್ಲದ ಬಟ್ಟೆಗಳನ್ನು ಧರಿಸಿದ್ದೇ ಇಲ್ಲ ಎನ್ನಬಹುದೇನೋ. ರಿಯಾಲಿಟಿ ಷೋಗಳಿಗೆ ಜಡ್ಜ್​ ಆಗಿ ಬರುವುದರಿಂದ ಹಿಡಿದು ಹೊರಗಡೆ ಎಲ್ಲಿಯೇ ಹೋಗುವುದಿದ್ದರೂ ಅರ್ದಂಬರ್ಧ ಡ್ರೆಸ್​ ಧರಿಸುತ್ತಾರೆ. ಇತರ ಯುವ ನಟಿಯರ ಜೊತೆ ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಮಾಡುತ್ತಾ ತಿರುಗಾಡುವುದು ಇವರಿಗೆ ತುಂಬಾ ಇಷ್ಟ. ಇದಕ್ಕಾಗಿ ಸಾಕಷ್ಟು ಬಾರಿ ಟ್ರೋಲ್​ಗೆ ಒಳಗಾಗಿದ್ದರೂ, ಅದರಿಂದಲೇ ಇನ್ನಷ್ಟು ಫೇಮಸ್​ ಆಗುತ್ತಿರುವವರು ನಟಿ ಮಲೈಕಾ. ಅರ್ಬಾಜ್​ ಖಾನ್​ ಅವರಿಗೆ ಡಿವೋರ್ಸ್​ ಕೊಟ್ಟು ಅರ್ಜುನ್​ ಕಪೂರ್​ ಜೊತೆ ಬಹಳ ವರ್ಷಗಳಿಂದ ಡೇಟಿಂಗ್​ನಲ್ಲಿದ್ದಾರೆ ಮಲೈಕಾ (Malaika Arora).

ಇದರ ಹೊರತಾಗಿಯೂ ಮಲೈಕಾ ಮತ್ತು ಅರ್ಬಾಜ್ ತಮ್ಮ ಮಗ ಅರ್ಹಾನ್‌ಗಾಗಿ ಸ್ನೇಹವನ್ನು ಉಳಿಸಿಕೊಂಡಿದ್ದಾರೆ. ಇಬ್ಬರೂ ಆಗಾಗ್ಗೆ ತಮ್ಮ ಮಗನನ್ನು ವಿಮಾನ ನಿಲ್ದಾಣದಲ್ಲಿ ಬಿಡಲು ಬರುತ್ತಾರೆ. ಈ ಸಮಯದಲ್ಲಿ, ಮಲೈಕಾ ಮತ್ತು ಅರ್ಬಾಜ್ ನಡುವೆ ಸುಂದರವಾದ ಬಾಂಧವ್ಯ ಕಂಡುಬರುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಮುತ್ತಿಕ್ಕಿ ಬೀಳ್ಕೊಡುವ ವಿಡಿಯೋಗಳೂ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ.  

ಮಾಜಿ ಪತಿಯ ಜೊತೆ ಮಧುರ ಸ್ನೇಹವನ್ನು ಇಟ್ಟುಕೊಂಡು, ನಟ ಅರ್ಜುನ್​ ಕಪೂರ್​ (Arjun Kapoor) ಜೊತೆ ಬಹಳ ವರ್ಷಗಳಿಂದ ಡೇಟಿಂಗ್​ನಲ್ಲಿರುವ ನಟಿ ಮಲೈಕಾ ತಮ್ಮಿಬ್ಬರ ಸಂಬಂಧದ ಕುರಿತು  ಈಗ  ಮುಕ್ತವಾಗಿ ಮಾತನಾಡಿದ್ದಾರೆ. ನಾವು ಮದುವೆಯಾಗದಿದ್ದರೇನು,  ಪ್ರೀ ಹನಿಮೂನ್ ಹಂತವನ್ನು ಅನಭವಿಸುತ್ತಿದ್ದೇವೆ ಎಂದಿದ್ದಾರೆ.  19 ವರ್ಷಗಳ ದಾಂಪತ್ಯದ ನಂತರ 2017ರಲ್ಲಿ ಅರ್ಬಾಜ್​ ಖಾನ್​ಗೆ  (Arbaz Khan) ವಿಚ್ಛೇದನ ನೀಡಿದ ಬಳಿಕ 12 ವರ್ಷ ಚಿಕ್ಕವರಾಗಿರುವ ಅರ್ಜುನ್​ ಕಪೂರ್​ ಜೊತೆ ಸಂಬಂಧ ಹೊಂದಿರುವ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬೋಲ್ಡ್​ ಆಗಿ ಉತ್ತರಿಸಿದ್ದಾರೆ ಮಲೈಕಾ, ಅರ್ಜುನ್​ ಕಪೂರ್​ ಜೊತೆ ಮದುವೆ ಆಗುವುದಿಲ್ಲವೆ ಎಂದು ಕೇಳಿದಾಗ, ಮದುವೆ ಯಾಕೆ? ಪ್ರೀ ಹನಿಮೂನ್​ ಆನಂದ ಅನುಭವಿಸುತ್ತಿದ್ದೇವೆ.  ಮದುವೆ ಎನ್ನುವುದು ಇಬ್ಬರ ನಡುವೆ ಚರ್ಚೆಯಾಗುವ ವಿಷಯ. ನಮಗೆ ಅನಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ, ಆದರೆ ಸದ್ಯಕ್ಕೆ ಯಾವುದೇ ಯೋಜನೆಗಳಿಲ್ಲ ಎಂದಿದ್ದಾರೆ. 

ಇದೊಳ್ಳೆ ಕಥೆಯಾಯ್ತಲ್ಲ...! ಫುಲ್​ ಡ್ರೆಸ್​ ಹಾಕಿದ್ರೂ ಮಲೈಕಾಳನ್ನು ಬಿಡದ ನೆಟ್ಟಿಗರು!

ಈ ಕ್ಷಣದಲ್ಲಿ, ನಾವು ಜೀವನವನ್ನು ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀ ಹನಿಮೂನ್ ಹಂತವನ್ನು ನಾವು ತುಂಬಾ ಆನಂದಿಸುತ್ತಿದ್ದೇವೆ.  ತುಂಬಾ ಚಿಕ್ಕವನ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಜನ ಹೇಳುತ್ತಾರೆ. ಡೇಟಿಂಗ್​ ಮಾಡುವುದರಲ್ಲಿ ತಪ್ಪೇನಿದೆ?  ಇದು ಅದ್ಭುತ ಅನುಭವ.  ವಿಚ್ಛೇದನದ (Divorce) ನಂತರ ಪ್ರೀತಿ ಸಿಗುವುದು ಬೇರೆ ವಿಷಯ.  ಕಿರಿಯ ವ್ಯಕ್ತಿಯಲ್ಲಿ ಪ್ರೀತಿಯನ್ನು ಕಂಡುಕೊಂಡ ನಂತರ, ನಾನು ಎಲ್ಲವನ್ನೂ ಹಳೆಯದ್ದನ್ನೆಲ್ಲಾ ಮರೆತಿದ್ದೇನೆ.  ಪ್ರೀತಿಗೆ ವಯಸ್ಸಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ ಎಂದಿದ್ದಾರೆ. 

 ನೀವು ಪ್ರೀತಿಯಲ್ಲಿ ಬಿದ್ದರೆ, ನೀವು ಪ್ರೀತಿಯಲ್ಲಿ ಬೀಳುತ್ತೀರಿ ಅಷ್ಟೇ. ಅವನು ಚಿಕ್ಕವನು ಅಥವಾ ದೊಡ್ಡವನು ಎಂಬುದು ಮುಖ್ಯವಲ್ಲ, ನನ್ನನ್ನು ಅರ್ಥಮಾಡಿಕೊಳ್ಳುವ ಸಂಗಾತಿಯನ್ನು ನಾನು ಕಂಡುಕೊಂಡಿದ್ದೇನೆ. ಅವನು ಚಿಕ್ಕವನು, ಆದರೆ ಅದು ನನ್ನನ್ನೂ ಯುವಕನನ್ನಾಗಿ ಮಾಡುತ್ತದೆ. ನಾನು ಪ್ರಪಂಚದ ಮೇಲಿರುವಂತೆ ಭಾವಿಸುತ್ತೇನೆ. ಅವನ ಜೊತೆ ಸಕತ್​ ಎಂಜಾಯ್​ (Enjoy) ಮಾಡುತ್ತಿದ್ದೇನೆ. ಮದುವೆ, ಗಿದುವೆಯೆಲ್ಲಾ ಸದ್ಯ ಇಲ್ಲ. ಬಹು ಆನಂದವನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಅವುಗಳ ಬಗ್ಗೆ ಯೋಚಿಸುವುದಿಲ್ಲ. ಮುಂದೆ ಬೇಕಿದ್ದರೆ ನೋಡೋಣ. ಆಗ ನಿಮಗೂ ವಿಷಯ ತಿಳಿಸುತ್ತೇವೆ ಎಂದಿದ್ದಾರೆ. 

Malaika Arora: ಮಾಜಿ ಪತಿಯನ್ನು ತಬ್ಬಿಕೊಂಡು ಸುದ್ದಿಯಾಗ್ತಿದ್ದಾರೆ ನಟಿ ಮಲೈಕಾ ಅರೋರಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ