
ಬಿಗ್ ಬಾಸ್, ಗಿಲ್ಲಿ ಸುದ್ದಿ ಮುಗಿಯುತ್ತಿದ್ದಂತೆ ಜನ ಮುಗಿ ಬಿದ್ದಿದ್ದು ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ (dali dhananjay) ಮೇಲೆ. ಅವರು ನಾನ್ ವೆಜ್ ತಿಂದ ವಿಡಿಯೋ ವೈರಲ್ ಆಗ್ತಿದ್ದಂತೆ ಇದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಜನರು ಜಾತಿ, ಆಹಾರದ ಬಗ್ಗೆ ಬಿಸಿಬಿಸಿ ಚರ್ಚೆ ಶುರು ಮಾಡಿದ್ದಾರೆ. ಅದೇನೇ ಇರಲಿ, ಈಗ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್ (Chandan) ಹಾಗೂ ಚಿನ್ನು ಅಲಿಯಾಸ್ ಕವಿತಾ ಗೌಡ (Kavita Gowda) ಮಗ ವೆಜ್ಜಾ ಅಥವಾ ನಾನ್ ವೆಜ್ಜಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
ಲಕ್ಷ್ಮಿ ಬಾರಮ್ಮ ಸೀರಿಯಲ್ ರೀಲ್ ಜೋಡಿ ರಿಯಲ್ ಜೋಡಿಯಾಗಿ ಎಷ್ಟೋ ವರ್ಷ ಕಳೆದಿದೆ. ಕವಿತಾ ಗೌಡ ಹಾಗೂ ಚಂದನ್ ಸದ್ಯ ಹೊಟೇಲ್ ಬ್ಯುಸಿನೆಸ್ ನಲ್ಲಿ ಬ್ಯುಸಿ ಇದ್ದಾರೆ. ಪಾಪಣ್ಣಸ್ ಬಿರಿಯಾನಿ ಹೆಸರಿನ ಹೊಸ ರೆಸ್ಟೋರೆಂಟ್ ಓಪನ್ ಮಾಡಿದ್ದಾರೆ. ಇದ್ರಲ್ಲಿ ಸಿಸಿಎಲ್ ಆಫರ್ ಕೂಡ ಸಿಗ್ತಿದೆ. ಕವಿತಾ ಹಾಗೂ ಚಂದನ್ ಶುರು ಮಾಡಿರುವ ಪಾಪಣ್ಣಸ್ ಬಿರಿಯಾನಿಯಲ್ಲಿ ವೆಜ್ ಕೂಡ ಸಿಗ್ತಿದೆ. ನಾನ್ ವೆಜ್ ಗಿಂತ ವೆಜ್ ಪುಲಾವ್ ರುಚಿಯಾಗಿದೆ, ಇಲ್ಲಿ ವೆಜ್ ಮತ್ತು ನಾನ್ ವೆಜ್ ಮಿಕ್ಸ್ ಆಗೋದಿಲ್ಲ ಅಂತ ಕವಿತಾ ವೆಜ್ ಪ್ರೇಮಿಗಳನ್ನೂ ತಮ್ಮ ಹೊಟೇಲ್ ಗೆ ಆಹ್ವಾನಿಸಿದ್ದಾರೆ.
ಸೀರಿಯಲ್ ನಟಿ ಕಾವ್ಯಾ ಗೌಡ ಗಂಡನ ಮೇಲೆ ಚಾಕು ಇರಿತ ಆಗಿರೋದು ನಿಜಾನಾ? ತನಿಖೆ ಆರಂಭಿಸಿದ ಪೊಲೀಸ್
ಕವಿತಾ ಗೌಡ ನಾನ್ ವೆಜ್ ತಿನ್ನೋದಿಲ್ಲ. ಆದ್ರೆ ಚಂದನ್ ಗೆ ನಾನ್ ವೆಜ್ ಇಷ್ಟ. ವೆಜ್ ಅಮ್ಮ ನಾನ್ ವೆಜ್ ಅಪ್ಪನ ಮಧ್ಯೆ ಮಗ ಅದ್ವಿಕ್ ಗೆ ಏನು ಇಷ್ಟ ಎನ್ನುವ ಪ್ರಶ್ನೆ ಬಂದಾಗ ಕವಿತಾ, ಮಗ ವೆಜ್ ಎಂದಿದ್ದಾರೆ. ಮಗ ಅದ್ವಿಕ್ ಇನ್ನೂ ಚಿಕ್ಕವನು. ಹಾಗಾಗಿ ಅವನಿಗೆ ವೆಜ್ ತಿನ್ನಿಸುತ್ತಿದ್ದೇವೆ ಅಂತ ಚಂದನ್ ಹೇಳಿದ್ದಾರೆ. ಮುಂದೆ ಕೂಡ ಅದ್ವಿಕ್ ವೆಜ್ ಇಷ್ಟಪಡುವಂತೆ ಕಾಣುತ್ತೆ. ಆದ್ರೆ ಅವನ ಇಷ್ಟ. ಅವನಿಗೆ ವೆಜ್ ಇಷ್ಟವಾದ್ರೆ ವೆಜ್ ತಿನ್ನಲಿ, ನಾನ್ ವೆಜ್ ಇಷ್ಟವಾದ್ರೆ ನಾನ್ ವೆಜ್ ತಿನ್ಲಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಅಂತ ಕವಿತಾ ಗೌಡ ಸ್ಪಷ್ಟನೆ ನೀಡಿದ್ದಾರೆ.
ನಾನ್ ವೆಜ್ ತಿನ್ನೋರಿಗೆ ಬೇಡ ಅನ್ಬಾರದು. ನಾವು ತಿನ್ನಲ್ಲಆದ್ರೆ ಅವರು ತಿನ್ಬಹುದು ಅಂತ ನಗ್ತಾನೆ ಕವಿತಾ, ವೆಜ್ ನಾನ್ ವೆಜ್ ಗಲಾಟೆಯ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ವೆಜ್ ಆದ್ರೆ ಕುರಿ, ಕೋಳಿ ಉಳಿಯುತ್ತೆ. ಹಾಗಂತ ನಾನು ವೆಜ್ ಸರಿ, ನಾನ್ ವೆಜ್ ತಪ್ಪು ಅಂತ ಹೇಳ್ತಿಲ್ಲ. ಅವನಿಗೆ ಇಷ್ಟವಾಗಿದ್ದನ್ನು ತಿನ್ಲಿ ಅಂತ ಚಂದನ್ ಕೂಡ ಆಯ್ಕೆಯನ್ನು ಮಗನಿಗೆ ಬಿಟ್ಟಿದ್ದಾರೆ.
Bigg Bossಗೆ ಹೋಗಲು ಗಿಲ್ಲಿ ನಟ ಮಾಡಿದ ಖರ್ಚು ಎಷ್ಟು? ಗಿಲ್ಲಿಯ ಮಾತಿಗೆ ಅಭಿಮಾನಿಗಳು ಶಾಕ್
ಕವಿತಾ ಗೌಡ ಹಾಗೂ ಚಂದನ್ ಸೆಪ್ಟೆಂಬರ್ 18 ರಂದು ಮುದ್ದು ಮಗುವಿಗೆ ಪಾಲಕರಾಗಿದ್ದಾರೆ. ಮಗನಿಗೆ ಅದ್ವಿಕ್ ಅಂತ ನಾಮಕರಣ ಮಾಡಿದ್ದಾರೆ. ಮಗನ ಮೊದಲ ವರ್ಷದ ಹುಟ್ಟುಹಬ್ಬವನ್ನು ರೆಸಾರ್ಟ್ ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಮಗನ ಆರೈಕೆಗಾಗಿ ಸದ್ಯ ಕವಿತಾ ಯಾವುದೇ ಸೀರಿಯಲ್, ಸಿನಿಮಾಕ್ಕೆ ಸಹಿ ಹಾಕಿಲ್ಲ. ಕೆಲಸಕ್ಕೆ ಬ್ರೇಕ್ ತೆಗೆದುಕೊಂಡಿದ್ದಾರೆ. ಚಂದನ್, ಚಂದನವನದಲ್ಲಿ ಬ್ಯುಸಿ ಇದ್ದಾರೆ. ಅವರ ನಿರ್ದೇಶದನ್ಲಲಿ ಫ್ಲರ್ಟ್ ಸಿನಿಮಾ ತೆರೆಗೆ ಬರ್ತಿದೆ. ಇದಲ್ದೆ ಸದ್ಯ ನಡೆಯುತ್ತಿರುವ ಸಿಸಿಎಲ್ ನಲ್ಲಿ ಚಂದನ್ ಬ್ಯುಸಿ. ಸಿನಿಮಾ ಹಾಗೂ ಕ್ರಿಕೆಟ್ ಜೊತೆ ಚಂದನ್ ಹಾಗೂ ಕವಿತಾ ಹೊಟೇಲ್ ಬ್ರ್ಯಾಂಚ್ ವಿಸ್ತರಿಸ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.