
'ಪಟಿಯಾಲ ಬೇಬ್ಸ್' ನಟ ಅನಿರುದ್ಧ ದಾವೇ ಒಂದು ತಿಂಗಳಿನಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಹಂಚಿಕೊಂಡು, ತಮ್ಮ ಹಿತೈಷಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
34 ವರ್ಷದ ಅನಿರುದ್ಧ ಶ್ವಾಸಕೋಶ ಸಂಬಂಧಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು, ಗುಣಮುಖರಾಗುತ್ತಿರುವ ಕಾರಣ ವೈದ್ಯರು ಫೋನ್ ಬಳಸುವುದಕ್ಕೆ ಹಾಗೂ ಸಿನಿಮಾ ನೋಡಲು ಅನುಮತಿ ನೀಡಿದ್ದಾರೆ. ಅನಿರುದ್ಧ ಚೇತರಿಸಿಕೊಂಡು ಓಡಾಡುವುದಕ್ಕೆ ಶುರು ಮಾಡಿದ್ದಾರೆ ಎನ್ನಲಾಗಿದೆ.
ದುಡಿಮೆ ಇಲ್ಲ, ಫೇಸ್‌ಬುಕ್ ಲೈವ್‌ನಲ್ಲಿ ನಟನ ಆತ್ಯಹತ್ಯೆ ಸುಳಿವು; ಪ್ರಾಣ ಉಳಿಸಿದ ಪೊಲೀಸ್!
'36ನೇ ದಿನದ ಯುದ್ಧ ಇದಾಗಿದ್ದು, ಇನ್ನೂ ಆಕ್ಸಿಜನ್ ಬಳಸುತ್ತಿರುವೆ. ನನ್ನ ಶ್ವಾಸಕೋಶ ಸಾಕಷ್ಟು ಚೇತರಿಸಿಕೊಂಡಿರುವುದಾಗಿ ವೈದ್ಯರು ಹೇಳುತ್ತಿದ್ದಾರೆ. ಹೆಚ್ಚಾಗಿ ಮಾತನಾಡಬೇಡ. ಆದರೆ ನಿಮ್ಮ ಪ್ರೀತಿ ಪಾತ್ರರ ಸಂಪರ್ಕದಲ್ಲಿ ಇರಬಹುದೆಂದು ಸೂಚಿಸಿದ್ದಾರೆ. ಹೊಸ ಜೀವನ ಎಂದೆನಿಸುತ್ತಿದೆ. ಪುಟ್ಟ ಮಗು ಓಡಾಡುವುದಕ್ಕೆ ಶುರು ಮಾಡಿದ ಹಾಗಿದೆ. ತುಂಬಾ ದಿನಗಳ ನಂತರ ಸೆಲ್ಫೀ ತೆಗೆದುಕೊಂಡೆ. ನಿಮ್ಮ ಪ್ರೀತಿಗೆ ಚಿರಋಣಿ,' ಎಂದು ಅನಿರುದ್ಧ ಬರೆದು ಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಅನಿರುದ್ಧ ಪತ್ನಿ ಶುಭಿ ಹುಟ್ಟುಹಬ್ಬವಿದ್ದು, ಮನ ಮುಟ್ಟುವಂತೆ ಭಾವನಾತ್ಮಕವಾಗಿ ಅನಿರುದ್ಧ ಅವರು ಪತ್ರ ಬರೆದಿದ್ದರು. 'ಐಸಿಯುನಲ್ಲಿ ನನ್ನನ್ನು ಕಾಯುತ್ತಾ ನಿನ್ನ ದಿನಗಳನ್ನು ಕಳೆಯುತ್ತಿರುವೆ. ಎಂದೂ ಈ ದಿನಗಳನ್ನು ನಾನು ಮರೆಯವುದಿಲ್ಲ. ಪ್ರೀತಿ ಮತ್ತು ನಮ್ಮ ಬಾಂಡಿಂಗ್ ಹಾಗೆಯೇ ಇರುತ್ತದೆ. ಜುಲೈ 21ರಂದು ನನ್ನ ಹುಟ್ಟುಹಬ್ಬ ಅಂದೇ ನಿಮ್ಮ ಹುಟ್ಟುಹಬ್ಬ ಆಚರಿಸುವೆ,' ಎಂದು ಬರೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.