
ಕಿರುತೆರೆಯ ಫೇಮಸ್ ನಟ-ನಿರ್ದೇಶಕ ಸಿಹಿಕಹಿ ಚಂದ್ರು (Sihi kahi Chandru)ಅವರು ಸಂದರ್ಶನವೊಂದರಲ್ಲಿ ನಿದ್ದೆ ಬಗ್ಗೆ ಮಾತನಾಡಿದ್ದಾರೆ. ನಿದ್ದೆ ಬಗ್ಗೆ ಅಂದರೆ, ಅವರ ನಿದ್ದೆ ಬಗ್ಗೆ. ಸಂದರ್ಶಕರು ಕೇಳಿದ 'ಎಲ್ಲಾ ಸಕ್ಸಸ್‌ಫುಲ್ ಜನರು 4 ಗಂಟೆ ಅಷ್ಟೇ ನಿದ್ದೆ ಮಾಡ್ತಾರೆ ಅಂತ ಹೇಳ್ತಾರೆ. ಆದ್ರೆ ನೀವು 3 ಗಂಟೆ ಅಷ್ಟೇ.. ಏನಿದರ ಗುಟ್ಟು' ಎಂಬ ಪ್ರಶ್ನೆಗೆ ಚಂದ್ರು ಉತ್ತರ ನೀಡಿದ್ದಾರೆ. ಹಾಗಿದ್ದರೆ, ಅಷ್ಟು ಕಡಿಮೆ ನಿದ್ದೆ ಮಾಡಿಯೂ ಸಖತ್ ಆಕ್ಟಿವ್ ಆಗಿರುವ ಚಂದ್ರು ಸೀಕ್ರೆಟ್ ಏನು? ಅವರು ನೀಡಿರುವ ಉತ್ತರವೇನು?
'ನಾನು ಎಸ್‌ಎಎಸ್‌ಎಲ್‌ಸಿ ಪರೀಕ್ಷೆಗೆ ಕಟ್ಟಿದಾಗ ಯಾರೋ ಏನೋ ಅಂದ್ಬಿಟ್ರು.. ನೀವೆಲ್ಲಾ ಸೋಂಬೇರಿಗಳು, ಸರಿಯಾಗಿ ಓದಲ್ಲ ಅಂತ.. ನಾನು ಚಿಕ್ಕವ್ನಿದ್ದಾಗ ತುಂಬಾ ತರ್ಲೆ ಆಗಿದ್ದೆ. ಅವ್ರು ಮಾತು ಸರಿಯಲ್ಲ ಅಂತ ನಾನು ಪ್ರೂವ್ ಮಾಡ್ಬೇಕಿತ್ತು. ಈ ಥರ ಚೇರಿಗೆ ಚೈನ್ ಹಾಕಿ, ಬೀಗ ಹಾಕ್ಬಿಟ್ಟು, ಬೀಗದ ಕೈ ಎಸದ್ಬಿಟ್ಟು ಓದೋಕೆ ಕೂತ್ಕೊಂಡೆ.. 72 ತಾಸು ಓದಿದೀನಿ.. ಮಧ್ಯೆ ನಮ್ಮಮ್ಮನ ಕರೆದ್ಬಿಟ್ಟು ಬೀಗ ತೆಗಿ, ನಾನು ಟಾಯ್ಲೆಟ್‌ಗೆ ಹೋಗ್ಬೇಕು ಅಂತ ಹೇಳಿ ಹೋಗಿ ಬಂದಿದೀನಿ. ಅದು ಬಿಟ್ಟರೆ ಅಷ್ಟೂ ಹೊತ್ತೂ ಓದ್ತಾ ಕೂತಿದೀನಿ, ಮಧ್ಯೆ ನಿದ್ದೆ ಮಾಡಿಲ್ಲ.
ಸಾಯಿ ಪಲ್ಲವಿ ರೋಲ್ ಮಾಡೆಲ್ ಹುಡುಗನ ಸೀಕ್ರೆಟ್ ರಿವೀಲ್; ಅಬ್ಬಬ್ಬಾ, ಅಂಥವ್ನು ಸಿಗ್ತಾನಾ?
ಆವಾಗ ಶುರುವಾದ ಕ್ರೇಜ್ ಅದು, ನಂಗೆ ನಿದ್ದೆ ಸೆಕೆಂಡರಿ ಯಾವತ್ತೂ, ನನ್ನ ಪ್ರಕಾರ ನೀವು ನಾಲ್ಕು ಗಂಟೆಗಿಂತ ಹೆಚ್ಚು ನಿದ್ದೆ ಮಾಡೋದು ಅಂದ್ರೆ ಟೈಮ್ ವೇಸ್ಟ್ ಮಾಡ್ತಾ ಇದೀವಿ ಅಂತ..'ಎಂದಿದ್ದಾರೆ ಸಿಹಿಕಿಹಿ ಚಂದ್ರು. ಅಂದರೆ, ಸಿಹಿಕಹಿ ಚಂದ್ರು ಅವರು 4 ಗಂಟೆಗಿಂತ ಹೆಚ್ಚು ನಿದ್ದೆ ಮಾಡಲ್ಲ, ಆದರೂ ದಿನವಿಡಿ ಕ್ರಿಯಾಶೀಲವಾಗಿಯೇ ಇರ್ತಾರೆ. ಆದರೆ ಅವರು ಹೇಳಿರುವ ಈ ಮಾತಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಬಂದಿವೆ. ಕಲವರಂತೂ, 'ಅವರು ಡಾಕ್ಟರ್ಸ್ ಹಾಗೂ ಸೈಂಟಿಸ್ಟ್ ಅಭಿಪ್ರಾಯಗಳಿಗೆ ಸಂಪೂರ್ಣ ವಿರುದ್ಧವಾಗಿ ಹೇಳಿದ್ದಾರೆ' ಎಂದಿದ್ದಾರೆ.
99 ರೂಪಾಯಿಗೆ ಪ್ರಣೀತಾ-ರಿಷಿ ರೋಮ್ಯಾನ್ಸ್ ನೋಡಬಹುದು; ಶುಭ್ರ ಅಯ್ಯಪ್ಪಗೆ ಅಲ್ಲೇನು ಕೆಲಸ?
ಕಾಮೆಂಟ್ ಮಾಡಿದವರಲ್ಲಿ ಹಲವರು 'ನಿದ್ದೆ ಅವರವರ ವೈಯಕ್ತಿಕ ಅಗತ್ಯ ಮತ್ತು ಅವರವರ ಆರೋಗ್ಯ-ಅನಾರೋಗ್ಯದ ಮೇಲೆ ಅವಲಂಬಿತ. ಇನ್ನೊಬ್ಬರು ಇಷ್ಟೇ ಹೊತ್ತು ನಿದ್ದೆ ಮಾಡಬೇಕು ಎಂದು ಯಾರೊಬ್ಬರೂ ಹೇಳಲು ಅಸಾಧ್ಯ. ಆದರೆ, ತಾವೆಷ್ಟು ಹೊತ್ತು ನಿದ್ದೆ ಮಾಡುತ್ತೇವೆ ಎಂಬುದನ್ನು ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸಿಹಿಕಹಿ ಚಂದ್ರು ಅವರು ತಮ್ಮ ನಿದ್ದೆಯ ವೇಳೆಯನ್ನು ನಿರ್ಧರಿಸಿಕೊಂಡಿದ್ದಾರೆ, ಅದು ಫೈನ್. ಆದರೆ, ನಾಲ್ಕು ಗಂಟೆಗಿಂತ ಹೆಚ್ಚು ನಿದ್ದೆ ಮಾಡುವುದು ಟೈಂ ವೇಸ್ಟ್ ಎನ್ನುವುದು ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರವರ ನಿದ್ದೆ ಅವರವರಿಗೆ..' ಎಂದಿದ್ದಾರೆ.
ಸ್ನೇಹ, ಸಂಬಂಧಗಳ ಬಗ್ಗೆ ಪೂಜಾ ಹೆಗಡೆ ಪಾಠ, ಅಷ್ಟೊಂದು ಅನುಭವ ಇದ್ಯಾ ಅಂತಿದಾರೆ ನೆಟ್ಟಿಗರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.