ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್‌ ಮಾಡಿದ್ಯಾರು? ಉದ್ದೇಶವೇನು..

By Santosh Naik  |  First Published May 8, 2024, 6:16 PM IST


Actress Jyothi Rai Leaked Video Viral in Social Media ನಟಿ ಜ್ಯೋತಿ ರೈ ಅವರದ್ದು ಎನ್ನಲಾಗಿರುವ ಖಾಸಗಿ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಇದರ ನಡುವೆ ಈ ಫೋಟೋಗಳನ್ನು ಲೀಕ್‌ ಮಾಡಿದ್ದು ಯಾರು ಅನ್ನೋ ಪ್ರಶ್ನೆ ಎದುರಾಗಿದೆ.


ಬೆಂಗಳೂರು (ಮೇ.8): ತಮ್ಮ 40ರ ಆಸುಪಾಸಿನಲ್ಲಿದ್ದರೂ, ಎಳೆ ಹುಡುಗಿಯರಿಗೂ ಕಡಿಮೆ ಇಲ್ಲದಂತೆ ಮೈಮಾಟ ತೋರಿಸುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿದ್ದ ಕಿರುತೆರೆ ನಟಿ ಜ್ಯೋತಿ ರೈ ಈಗ ಕೆಟ್ಟ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ತೆರೆಯ ಮೇಲೆ ಸೀರೆಯುಟ್ಟು ಸೀರಿಯಲ್‌ಗಳಲ್ಲಿ ನಟಿಸಿದರೂ, ಸೋಶಿಯಲ್‌ ಮೀಡಿಯಾದಲ್ಲಿ ಚಡ್ಡಿ-ಮಿಡ್ಡಿ ತೊಟ್ಟು ಫೋಸ್‌ ನೀಡುತ್ತಿದ್ದ ಜ್ಯೋತಿ ರೈ ಇದರಿಂದಲೇ ದೊಡ್ಡ ಮಟ್ಟದ ಫಾಲೋವರ್ಸ್‌ಗಳನ್ನು ಪಡೆದುಕೊಂಡಿದ್ದರು. ಇದರ ಬೆನ್ನಲ್ಲಿಯೇ ಇತ್ತೀಚೆಗೆ ಅವರ ಖಾಸಗಿ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಂಚಾರ ಮಾಡಲು ಆರಂಭಿಸಿವೆ. ಇನ್ನು ಅವರ ಈ ಫೋಟೋಗಳು ಪಕ್ಕದ ಆಂಧ್ರದಲ್ಲೂ ಸಖತ್‌ ಸದ್ದು ಮಾಡಿವೆ. ತೆಲುಗುವಿನಲ್ಲಿ ಗುಪ್ಪೆದ್ದಂತಾ ಮನಸು ಸೀರಿಯಲ್‌ ಮೂಲಕ ಅವರು ಮನೆಮಾತಾಗಿದ್ದಾರೆ. ಇದರಲ್ಲಿ ನಾಯಕ ರಿಷಿ ಅವರ ತಾಯಿ ಜಗತಿ ಪಾತ್ರದಲ್ಲಿ ಜ್ಯೋತಿ ರೈ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಸೀರಿಯಲ್‌ನಲ್ಲಿ ಜಗತಿ ಪಾತ್ರವನ್ನು ಮುಕ್ತಾಯ ಮಾಡಲಾಗಿದೆ. ಇದರ ಬೆನ್ನಲ್ಲುಯೇ ಕೆಲವರು ಜ್ಯೋತಿಯ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ, ಅವರ ಅಶ್ಲೀಲ ವೀಡಿಯೊಗಳು ಲೀಕ್ ಆಗಿವೆ ಮತ್ತು ಅವುಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗುವುದು ಎಂದು ಹೇಳಿದ್ದಾರೆ.

twitter.com/EDIT_BY_ABHI ಎನ್ನುವ ಟ್ವಿಟರ್‌ ಖಾತೆಯಲ್ಲಿ ‘Now jyothi rai videos are leaked #PrajwalRevanna #jyothirai’ (ಇದೀಗ ಜ್ಯೋತಿ ರೈ ವಿಡಿಯೊಗಳು ಲೀಕ್ ಆಗಿವೆ) ಎಂದು ಪೋಸ್ಟ್‌ ಮಾಡಲಾಗಿದೆ. ಇದೇ ಟ್ವಿಟರ್‌ ಖಾತೆಯಲ್ಲಿ ಜ್ಯೋತಿ ಅವರು ಸೀರೆ ಧರಿಸಿರುವ ಚಿತ್ರದೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿರುವ ಅಥವಾ ತಮ್ಮಲ್ಲಿರುವ ಖಾಸಗಿ ಫೋಟೋಗಳ ಪೈಕಿ ಒಂದನ್ನು ಅಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಪೋಸ್ಟ್‌ ಮಾಡಿರುವ ವ್ಯಕ್ತಿಯ ಉದ್ದೇಶ ಏನು ಎನ್ನುವುದು ಈವರೆಗೂ ಅರ್ಥವಾಗಿಲ್ಲ. ‘ಬೇಗ ಸಬ್‌ಸ್ಕ್ರೈಬ್ ಮಾಡಿ, ನನ್ನ ಯುಟ್ಯೂಬ್ ಚಾನೆಲ್‌ಗೆ 1000 ಸಬ್‌ಸ್ಕ್ರೈಬರ್ಸ್ ಆದ ತಕ್ಷಣ ವಿಡಿಯೊ ಅಪ್‌ಲೋಡ್ ಮಾಡುತ್ತೇನೆ’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈತನ ಉದ್ದೇಶ ಆತನ ಯೂಟ್ಯೂಬ್‌ ಪೇಜ್‌ಗೆ 1 ಸಾವಿರ ಸಬ್‌ಸ್ಕ್ರೈಬರ್ಸ್ ಪಡೆಯುವುದೋ ಅಥವಾ ಆತನಲ್ಲಿ ನಿಜವಾಗಿಯೂ ಜ್ಯೋತಿ ರೈ ಅವರ ವಿಡಿಯೋ ಇದೆಯೇ ಎನ್ನುವುದು ಪ್ರಶ್ನೆಯಾಗಿದೆ. ಪೋಸ್ಟ್‌ ಮಾಡಿರುವ ವ್ಯಕ್ತಿ ತನ್ನ ಬಳಿ ಎರಡು ಫುಲ್‌ ವಿಡಿಯೋಗಳಿದ್ದು, ತಲಾ 5 ನಿಮಿಷದ ವಿಡಿಯೋ ಅದಾಗಿದೆ ಎಂದು ಹೇಳಿದ್ದಾರೆ. ಹಾಗಂತ ಈ ವ್ಯಕ್ತಿ ಇದನ್ನು ಪೋಸ್ಟ್‌ ಮಾಡಿ ಒಂದು ದಿನವಾಗಿದ್ದರೂ ಆತನ ಯೂಟ್ಯೂಬ್‌ಗೆ ಸಬ್‌ಸ್ಕ್ರೈಬರ್ಸ್ 500 ಕೂಡ ದಾಟಿಲ್ಲ. ಹಾಗಾಗಿ ಇದು ಡೀಪ್‌ಫೇಕ್‌ ಫೋಟೋಗಳು ಕೂಡ ಆಗಿರಬಹುದು ಎನ್ನುವ ಮಾತುಗಳು ಬರುತ್ತಿವೆ.

ಕನ್ನಡ ಕಿರುತೆರೆ ಸ್ಟಾರ್ ನಟಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

Tap to resize

Latest Videos

undefined

ಕೆಲ ತಿಂಗಳ ಹಿಂದೆ ನಿರ್ದೇಶಕ ಸುಕುಮಾರ್‌ ಜೊತೆಗಿನ ಅಫೇರ್‌ ಬಗ್ಗೆ ತಿಳಿಸಿದ್ದರು. ಅಲ್ಲದೆ, ಅವರ ಜೊತೆಗಿನ ಹಾಟ್‌ ರೋಮಾಂಟಿಕ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಖಾಸಗಿ ಫೊಟೋಗಳಲ್ಲಿ ಗ್ಲಾಸ್‌ ಹಿಡಿದು, ಕ್ಲೋಸ್‌ ಹಗ್‌ ಮಾಡಿ, ಹಾಟ್‌ ಕಿಸ್ ಮಾಡಿರುವ ಪೋಟೋಗಳು ಹಾಗೂ ವಿಡಿಯೋಗಳು ವೈರಲ್‌ ಆಗುತ್ತಿವೆ. ಇನ್ನೊಂದು ವಿಡಿಯೋದಲ್ಲಿ ಸೆಕ್ಸ್‌ ವಿಡಿಯೋವನ್ನೇ ಹಂಚಲಾಗಿದೆ. ಆದರೆ ಇದನ್ನು ಅವರು ಉದ್ದೇಶಪೂರ್ವಕವಾಗಿ ತೆಗೆದುಕೊಂಡಿದ್ದಾ? ಅಥವಾ ಗೊತ್ತಿಲ್ಲದೆ ತೆಗೆದಿದ್ದಾ ಎನ್ನುವುದು ತಿಳಿದುಬಂದಿಲ್ಲ.

ಸಂಗೀತ ಕ್ಷೇತ್ರಕ್ಕೆ ವಿದಾಯ ಹೇಳಿದ 1.25 ಲಕ್ಷ ಕೋಟಿ ಸಿರಿವಂತನ ಪುತ್ರಿ!

ಇನ್ನು ಈ ವಿಡಿಯೋ ಬಗ್ಗೆ ಜ್ಯೋತಿ ರೈ ಸೋಶಿಯಲ್‌ ಮೀಡಿಯಾದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಸೈಬರ್‌ ಕ್ರೈಮ್‌ಗೆ ಮಾತ್ರ ಈ ವಿಚಾರವಾಗಿ ದೂರು ನೀಡಿದ್ದಾರೆ. ಕೆಲವು ಭಿನ್ನ ವ್ಯಕ್ತಿಗಳು ನನಗೆ ಕಿರುಕುಳ ನೀಡುವ, ಮಾನನಷ್ಟ ಮಾಡುವ ಉದ್ದೇಶದಲ್ಲಿ ಈ ರೀತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ  ನಂಬರ್‌ಗೆ ಕೆಲ ಮೆಸೇಜ್‌ಗಳು ಕೂಡ ಬಂದಿದ್ದವು. ಇಷ್ಟು ಮಾತ್ರವಲ್ಲದೆ, ಈಗ ಅದೇ ವ್ಯಕ್ತಿಗಳು ನನ್ನನ್ನು ನಗ್ನವಾಗಿ ಚಿತ್ರಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನ ಇನ್ಸ್‌ಟಾಗ್ರಾಮ್‌ ಸ್ಟೋರಿ ಇಮೇಜಸ್‌ ಹಾಗೂ ವೆಬ್‌ಸಿರೀಸ್‌ನ ದೃಶ್ಯಗಳನ್ನು ಲೀಕ್‌ ಮಾಡಿ ಇದನ್ನು ನಕಲಿ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ದೂರು ನೀಡಿದ ಜ್ಯೋತಿ ಹೇಳಿದ್ದಿಷ್ಟು..
 

click me!