ಕನ್ನಡ ಜನ್ರಪಿಯ ಕಿರುತೆರೆ ನಟಿ ಯಮುನಾ ಶ್ರೀನಿಧಿ ನೇತ್ರದಾನ ಮಾಡುವುದಕ್ಕೆ ನೋಂದಣಿ ಮಾಡಿಸಿ, ಒಂದೊಳ್ಳೆ ಕೆಲಸ ಮಾಡಿದ್ದಾರೆ.
ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ಜನಪ್ರಿಯ ನಟಿ ಯಮುನಾ ಶ್ರೀನಿಧಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನೇತ್ರಾದಾನ ಮಾಡುವುದಕ್ಕೆ ನೋಂದಣಿ ಮಾಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಅನೇಕರಿಗೆ ನೇತ್ರದಾನ ಮಾಡುವಂತೆಯೂ ಆಗ್ರಹಿಸಿದ್ದಾರೆ.
'ನಾವು ಸತ್ತ ಮೇಲೂ ಶಾಶ್ವತವಾಗಿ ಉಳಿದು ಕೊಳ್ಳಬೇಕು. ಕಣ್ಣುಗಳನ್ನು ಮಣ್ಣು ಮಾಡಬೇಡಿ. ಇನ್ನೊಬ್ಬರ ಜೀವನಕ್ಕೆ ನಂದಾ ದೀಪವಾಗಲಿ. ಮಿಂಟೋ ಆಸ್ಪತ್ರೆಯ ಡೈರೆಕ್ಟರ್ ಡಾ. ಸುಜಾತ ರಾಥೋಡ್ ಅವರು ಜನರಲ್ಲಿ ನೇತ್ರಾದಾನದ ಬಗ್ಗೆ ಅರಿವು ಮೂಡಿಸುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ,' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಡಿದ್ದಾರೆ.
ತಂದೆಗೆ ಮರೆವು: ಯಮುನಾ ಶ್ರೀನಿಧಿ ಭಾವುಕ ಪೋಸ್ಟ್!
undefined
'ನಟ ಸಂಚಾರಿ ವಿಜಯ್ ನಿಧನದ ನಂತರ ಅವರ ಅಂಗಾಂಗಳನ್ನು ದಾನ ಮಾಡಿದ್ದು, ನನ್ನನ್ನು ಪ್ರೇರೇಪಿಸಿತು. ಅವರ ಕುಟುಂಬದ ಬಗ್ಗೆ ನನಗೆ ಹೆಚ್ಚಿನ ಹೆಮ್ಮೆಯಿದೆ. ಎಲ್ಲರಿಗೂ ನಾನು ನೇತ್ರಾದಾನ ಮಾಡಿ ಎಂದು ಹೇಳುತ್ತೇನೆ. ಕಣ್ಣಿನ ಸಮಸ್ಯೆ ಇದ್ದವರಿಗೆ ಈ ಕಾರ್ಯ ಸಹಾಯ ಆಗುತ್ತದೆ. ಬೇರೆಯವರು ಕಣ್ಣು ದಾನ ಮಾಡಲು ಮುಂದಾದರೆ, ನಾವು ಅವರನ್ನು ಪ್ರೋತ್ಸಾಹಿಸಬೇಕು. ನನ್ನ ಕಣ್ಣು ಇನ್ನೊಬ್ಬರಿಗೆ ಸಹಾಯ ಅಗುತ್ತದೆ, ಎಂದಾದರೆ ಅದು ನನಗೆ ತುಂಬಾ ತೃಪ್ತಿ ನೀಡುವ ವಿಷಯ,' ಎಂದು ಯಮುನಾ ಮಾತನಾಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಿಡಲ್ ಕ್ಲಾಸ್ ಕುಟುಂಬ ಹೇಗೆ ದಿನಕೂಲಿ ಮಾಡಿಕೊಂಡು, ಬಂದ ಆದಾಯದಿಂದ ಜೀವನ ಮಾಡುತ್ತಾರೆ ಹಾಗೂ ಅವರಲ್ಲಿ ದೇವರ ಮೇಲೆ ಎಷ್ಟು ನಂಬಿಕೆ ಇದೆ ಎಂದು ಈ ಕುಟುಂಬ ತೋರಿಸಿ ಕೊಡುತ್ತದೆ. ಅರಮನೆ, ಒಂದೂರಲ್ಲಿ ರಾಜಾ ರಾಣಿ, ಕಮಲಿ, ಮಸಾರೆ, ಅಶ್ವಿನಿ ನಕ್ಷತ್ರ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಯುಮುನಾ ನಟಿಸಿದ್ದಾರೆ.