ಭಯ ಗೊತ್ತಾಗಿದ್ದೇ ಮಕ್ಕಳು ಬಂದ್ಮೇಲೆ, ನನ್ನನ್ನ ಈಗ ಬದಲಾಯಿಸಿಕೊಂಡಿದ್ದೀನಿ; ರವಿಚಂದ್ರನ್ ಕಣ್ಣೀರು

Published : Oct 10, 2022, 04:41 PM IST
ಭಯ ಗೊತ್ತಾಗಿದ್ದೇ ಮಕ್ಕಳು ಬಂದ್ಮೇಲೆ,  ನನ್ನನ್ನ ಈಗ ಬದಲಾಯಿಸಿಕೊಂಡಿದ್ದೀನಿ; ರವಿಚಂದ್ರನ್ ಕಣ್ಣೀರು

ಸಾರಾಂಶ

ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ.  ಸಿನಿಮಾ ಲೋಕದ ಕನಸುಗಾರ, ಸಿನಿಮಾವನ್ನು ಅವರಷ್ಟು ಪ್ರೀತಿಸುವವರು ಯಾರಿಲ್ಲ. ಸಿನಿಮಾನೇ ಜೀವಿಸುತ್ತಿರುವ ರವಿಚಂದ್ರನ್ ಇಂದು ಸಾಕಷ್ಟು ನೊಂದಿದ್ದಾರೆ, ಸಿನಿಮಾ ಸಕ್ಸಸ್ ಕಾಣುತ್ತಿಲ್ಲ ಎನ್ನುವ ನೋವು ಅವರಲ್ಲಿದೆ.

ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡ ಸಿನಿಮಾರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ನಟ, ನಿರ್ದೇಶಕ, ನಿರ್ಮಾಪಕ.  ಸಿನಿಮಾ ಲೋಕದ ಕನಸುಗಾರ, ಸಿನಿಮಾವನ್ನು ಅವರಷ್ಟು ಪ್ರೀತಿಸುವವರು ಯಾರಿಲ್ಲ. ಸಿನಿಮಾನೇ ಜೀವಿಸುತ್ತಿರುವ ರವಿಚಂದ್ರನ್ ಇಂದು ಸಾಕಷ್ಟು ನೊಂದಿದ್ದಾರೆ, ಸಿನಿಮಾ ಸಕ್ಸಸ್ ಕಾಣುತ್ತಿಲ್ಲ ಎನ್ನುವ ನೋವು ಅವರಲ್ಲಿದೆ. ಸಾಲು ಸಾಲು ಸೋಲು ರವಿಚಂದ್ರನ್ ಅವರನ್ನು ಕಾಡುತ್ತಿದೆ. ಈ ಬಗ್ಗೆ ರವಿಚಂದ್ರನ್ ಅವರೇ ಮನಬಿಚ್ಚಿ ಮಾತನಾಡಿದ್ದಾರೆ. ತನ್ನಲ್ಲಿದ್ದ ನೋವನ್ನು ಹೊರಹಾಕಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋನಲ್ಲಿ ರವಿಚಂದ್ರನ್ ಭಾವುಕರಾಗಿದ್ದಾರೆ. ರವಿಚಂದ್ರನ್ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ರವಿಚಂದ್ರನ್‌ಗೆ  ಸೋಲು ಎನ್ನುವುದು ಹೊಸದಲ್ಲ. ಆದರೆ ಯಾವತ್ತು ಸೋಲಿನ ಬಗ್ಗೆ ಮಾತನಾಡಿ ಕಣ್ಣೀರಾಕಿದವರಲ್ಲ. ಇದೇ ಮೊದಲ ಬಾರಿಗೆ ರಿಯಾಲಿಟಿ ಶೋ ವೇದಿಕೆಯಲ್ಲಿ ಮಾತನಾಡಿ ಭಾವುಕರಾಗಿದ್ದಾರೆ. ಸ್ಪರ್ಧಿಗಳು ಪ್ರೇಮಲೋಕ ಸಿನಿಮಾದ ಪ್ರೀತಿ ಮಾಡಬಾರದು...ಹಾಡನ್ನು ಹಾಡಿದ ಬಳಿಕ ರವಿಚಂದ್ರನ್ ಭಾವುಕರಾಗಿದರು. ತನ್ನ ಮನಸ್ಸಿನಲ್ಲಿದ್ದ ನೋವನ್ನು ಹೊರಹಾಕಿದರು. 

ನಾನು ನನ್ನ ಮನಸ್ಸಿಗೆ ಬಂದಿರುವುದನ್ನೇ ಮಾಡಿದ್ದು. ನಾನು ಯಾವುತ್ತು ಲವಲವಿಕೆಯಿಂದ ಸಿನಿಮಾ ಮಾಡಿಕೊಂಡು ಬಂದವವನು. ನನ್ನ ಕಟೌಟ್‌ಗೆ ಹಾರ ಬೀಳೋದು ಬೇಡ. ಚಿತ್ರಮಂದಿರಕ್ಕೆ ಜನ ಬಂದ್ರೆ ಸಾಕು ನನಗೆ. ಜನ ಬಂದಿಲ್ಲ ಎಂದರೆ ಕಪಾಳಕ್ಕೆ ಹೊಡೆದ ಹಾಗೆ ಆಗುತ್ತೆ. ನಾನು ಯಾಕೆ ಈ ವೇದಿಕೆಗೆ ಬಂದೆ ಎಂದರೆ ನನ್ನನ್ನು ನಾನು ಬದಲಾಯಿಸಿಕೊಳ್ಳುವ ದಿನ ಬಂತು. 20 ವರ್ಷಗಳಿಂದ ನಾನು ಬದಲಾಗಿರಲಿಲ್ಲ. ನಾನು ನಿಮ್ಮನ್ನು ಮೆಚ್ಚಿಸಬೇಕು ಅಂತನೆ ಒದ್ದಾಡುತ್ತಿದೆ. ಏಕಾಂಗಿಗಾಗಿ ಯಾವತ್ತು ಟೊಪ್ಪಿ ಹಾಕಿಬಂದಿದ್ದನೋ ಅದನ್ನು ಕಿತ್ತು ಎಸೆದಿದ್ದೇನೆ. ಇನ್ನು ಯಾವುತ್ತು ಏಕಾಂಗಿ ಅಂತ ಪಾತ್ರ ತೆರೆಮೇಲೆ ಬರಲ್ಲ' ಎಂದು ಹೇಳಿದರು. 

ಮನೆ ಖಾಲಿ ಮಾಡಿದ ಬಗ್ಗೆ ಮಾತು 

ಮನೆ ಬಿಟ್ಟ ಬಗ್ಗೆ ರವಿಚಂದ್ರನ್ ಬಹಿರಂಗ ಮಾತನಾಡಿದ್ರು. ಮನೆ ಖಾಲಿ ಮಾಡಿದೆ. ಎಲ್ಲರೂ ಹೇಳಿದ್ರು ದುಡ್ಡು ಕಳೆದುಕೊಂಡ ಮನೆ ಖಾಲಿ ಮಾಡಿದ ಅಂತ. ನಾನು ದುಡ್ಡು ಕಳೆದುಕೊಂಡಿದ್ದು ಇವತ್ತಲ್ಲ. 30 ವರ್ಷಗಳಿಂದ ನಾನು ದುಡ್ಡು ಕಳೆದುಕೊಂಡೇ ನಗ್ತಾ ಬಂದಿದ್ದು. ಆದರೆ ಅರ್ಥ ಆಗದೆ ಇರೋದು ಅಂದರೆ ಅದು ನಿಮಗಳಿಗೋಸ್ಕರ ಅಷ್ಟೆ. ಗೆಲ್ಲುತ್ತೀನಿ ಎನ್ನುವ  ಆವೇಶ ಇವತ್ತಿಗೂ ಕಮ್ಮಿಯಾಗಿಲ್ಲ ಎಂದು ಹೇಳಿದರು.  

ಕಳೆದೊಂದು ತಿಂಗ್ಳಿಂದ ತಪ್ಪಿಸಿಕೊಂಡು ಓಡಾಡ್ತಿದ್ದೀನಿ! Ravichandran ಬೆನ್ನು ಬಿದ್ದಿದ್ದ ಝೈದ್ ಖಾನ್!

ನನ್ನನ್ನು ಬದಲಾಯಿಸಿಕೊಂಡಿದ್ದೀನಿ 

ರವಿಚಂದ್ರನ್‌ಗೆ ರವಿಚಂದ್ರನ್‌ನ್ನೇ ಗೆಲ್ಲೋಗೆ ಆಗ್ತಿಲ್ಲ. ನನಗೆ ಯಾರು ಪೈಪೋಟಿ ನೀಡೋಕೆ ಇಲ್ಲ. ನನ್ನನ್ನೇ ನಾನು ಗೆಲ್ಲಬೇಕು. ನಾನು ದುಡ್ಡಿಗಾಗಿ ಕೆಲಸ ಮಾಡಿಲ್ಲ. ಆದರೆ ದುಡ್ಡು ಬೇಕು ಎನ್ನುವುದು ಸಿನಿಮಾ ಮಾಡೋಕೆ ಅಷ್ಟೆ. ಅದೊಂದಕ್ಕೆ ಇವತ್ತು  ಇಲ್ಲಿ ಬಂದು ಕೂತಿದಿದ್ದೀನಿ. ನಾನು ಸಂಪಾದನೆ ಮಾಡೋದು ರಾಯಲ್ ಆಗಿ ಬದಕಲಿಕ್ಕೆ ಅಲ್ಲ, ರಾಯಲ್ ಆಗಿ ಸಿನಿಮಾ ಮಾಡೋಕೆ. ಒಂದು ತಿಂಗಳಿಂದ ನಾನು ನನ್ನನ್ನು ನಾನು ಬದಲಾಯಿಸಿಕೊಳ್ಳಬೇಕು ಎನಿಸಿತು. ಸಿನಿಮಾ ಸೋತಿದ್ದಕ್ಕೆ ನನಗೆ ಬೇಸರ ಆಗಿದೆ ಅಂತ ಅಂದುಕೊಳ್ಳೋದು ಸುಳ್ಳು, ನಿಮ್ಮನ್ನ ಮೆಚ್ಚಿಸಿಲ್ಲ ಎನ್ನುವುದು ನನಗೆ ಬೇಸರ ಆಗಿದ್ದು.  

ಮತ್ತೆ ಆ ದಿನಗಳು ಬರುತ್ತೆ  

ನನ್ನ ಸಿನಿಮಾಗಳಿಗೆ ನೀವು ನುಗ್ಗಿ ಅಭ್ಯಾಸ. ಮತ್ತೆ ಆ ದಿನಗಳು ಬರುತ್ತೆ. ಆ ಕೆಲಸ ಮಾಡೆ ಮಾಡ್ತೀನಿ. ನಾನು ನಿಮಗೆ ಕೊಡೊ ಮಾತಿದು. ನಾನು ಹಣ ಕೊಟ್ಟು ಕೆಲಸಕ್ಕೆ ಇಟ್ಕೊಂಡಿದ್ದವನು ಇವತ್ತು ನನಗೆ ಒಂದು ಕೋಟಿ ಕೊಟ್ಟು ಅವನ ಸಿನಿಮಾಗೆ ಕರೀತಾರೆ ಅಂದರೆ ನನ್ನ ಜೊತೆ ಇರೋ ಹುಡುಗುರು ಹಾಗೆ ಬೆಳೆದಿದ್ದಾರೆ. 

ರಣಧೀರ, ಪ್ರೇಮಲೋಕ ಬಗ್ಗೆ ಮಾತಾಡ್ತಾನೆ ಅಂತಾರೆ

ಮಾತೆತ್ತಿದ್ರೆ ಪ್ರೇಮಲೋಕ, ರಣಧೀರ ಬಗ್ಗೆ ಹೇಳ್ತಾರೆ ಅಂತಾರೆ, ಅಪ್ಪ-ಅಮ್ಮನ ಬದಲಾಯಿಸೋಕೆ ಆಗುತ್ತಾ? ನನ್ನನ್ನ ಇಲ್ಲಿವರೆಗೂ ಕರ್ಕೊಂಡು ಬಂದಿದೆ. ಇವತ್ತಿಗೂ ಆ ಹಾಡುಗಳನ್ನು ಹಾಡ್ತೀರಾ ಅಂದರೆ ಆ ಸಿನಿಮಾ ಎಷ್ಟು ಕೆಲಸ ಮಾಡಿದೆ ಎನ್ನುವುದು ಗೊತ್ತಾಗುತ್ತಿದೆ. ಕಾಮೆಂಟ್ ಮಾಡಿ ಮಾತನಾಡ್ತೀರೋ ಅವರು ಈ ಸಿನಿಮಾಗಳಿಂದ ಹುಟ್ಟಿರೋದು.

ನೆಚ್ಚಿನ ಮನೆಯನ್ನು ಖಾಲಿ ಮಾಡಿದ ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್

ನನಗೆ ಭಯ ಬಂದಿದ್ದು ಮಕ್ಕಳು ಬಂದ್ಮೇಲೆ

'ಭಯ ಎನ್ನುವುದು ನನಗೆ ಗೊತ್ತಿಲ್ಲಆದರೆ. ಆದರೆ ಭಯ್ ಹುಟ್ಟಿದ್ದು ನನ್ನ ಮಕ್ಕಳು ಬಂದಾಗ. ನಾವು ಹೇಗೊ ಬದುಕಿದ್ವಿ. ಆದರೆ ಅವರಿಗೆ ಏನು ಮಾಡೋದು. ಅದನ್ನು ನಾನು ಯೋಚನೆ ಮಾಡಿರಲಿಲ್ಲ. ಅವತ್ತು ಕಂಠೀರವ ಸ್ಟೂಡಿಯೋ ಪಕ್ಕದಲ್ಲಿ ಎಕರೆಗೆ 10 ಸಾವಿರ ಇರ್ಲಿಲ್ಲ. ಒಂದು ಎಕರೆ ತೆಗೆದು ಹಾಕಿದ್ರು ಸಹ ಇರ್ತಿತ್ತು. ನಗು, ಈ ಮುಖ ಪ್ರೀತಿಸಿ ನಾನು ನಿಮ್ಮ ಕಾಲಡಿ ಬಿದ್ದೀರ್ತೀನಿ' ಎಂದು ಹೇಳಿದರು.    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಿಲ್ಲಿಯಲ್ಲ, Bigg Boss ವಿನ್ನರೇ ಬೇರೆ: ಅಭಿಷೇಕ್​ ಹೇಳಿದ ಆ ಹೆಸರು ಯಾರದ್ದು, ಇಲ್ಲಿದೆ ಕುತೂಹಲ
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?