
ಕಿರುತೆರೆಯ ಲೋಕದಲ್ಲಿ ಶೂಟಿಂಗ್ ಕಾರುಬಾರಿಗೆ ಚಾಲನೆ ಸಿಕ್ಕಿದೆ. ಅದರಲ್ಲೂ ಜೀ ಕನ್ನಡ ವಾಹಿನಿಯ ಧಾರಾವಾಹಿಗಳ ಚಿತ್ರೀಕರಣ ಸಂಭ್ರಮದಿಂದ ಶುರುವಾಗಿದ್ದು ನೈರ್ಮಲ್ಯಕ್ಕೆ ಆದ್ಯತೆ. ಅಗತ್ಯವಿದ್ದಷ್ಟೇ ತಂತ್ರಜ್ಞರು, ಕಲಾವಿದರನ್ನು ಬಳಸಿಕೊಂಡು ಶೂಟಿಂಗ್ ಮಾಡಲಾಗುತ್ತಿದೆ.
ಸದ್ಯ ಅತ್ಯಂತ ಜನಪ್ರಿಯಗೊಂಡಿರುವ ಅನಿರುದ್ಧ್ ಹಾಗೂ ಮೇಘಾ ಶೆಟ್ಟಿಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ‘ಜೊತೆ ಜೊತೆಯಲ್ಲಿ’ ಧಾರಾವಾಹಿ ಶೂಟಿಂಗ್ ರಂಗು ಕಾಣುತ್ತಿದೆ.
ಸಿದ್ಧರಾಗಿ 'ಜೊತೆ ಜೊತೆಯಲಿ' ಹೊಸ ಎಪಿಸೋಡ್ಸ್ ನೋಡಲು
ರಾಜ್ಯ ಸರ್ಕಾರವು ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಿಕೊಂಡು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಧಾರಾವಾಹಿಗಳ ಚಿತ್ರೀಕರಣ ಮತ್ತೆ ಪ್ರಾರಂಭಗೊಂಡಿದೆ. ರಾಧಾ ಕಲ್ಯಾಣ ಮತ್ತು ಸುಬ್ಬಲಕ್ಷ್ಮಿ ಸಂಸಾರ ಎರಡು ಧಾರಾವಾಹಿಗಳ ಹೊರತಾಗಿ ಜೀ ಕನ್ನಡ ತನ್ನ ಎಲ್ಲ ಧಾರಾವಾಹಿಗಳ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.
ಸೆಟ್‌ನಲ್ಲಿ ಕಲಾವಿದರೂ ಸೇರಿ ಗರಿಷ್ಠ 15 ಮಂದಿ ಇರುತ್ತಾರೆ. ಮುಂಚಿತವಾಗಿಯೇ ಎಲ್ಲ ಕಲಾವಿದರು ಸೆಟ್‌ಗೆ ಕರೆಸುತ್ತಿಲ್ಲ. ತಂತ್ರಜ್ಞರು ಗ್ಲೋವ್‌್ಸ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಲಾಗಿದೆ. ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ವಾಹಿನಿ ಕಡೆಯಿಂದ ಒಬ್ಬರನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಕಿರುತೆರೆ ವೀಕ್ಷಕರಿಗೆ ಹೊಸ ಎಪಿಸೋಡು, ಕಾರ್ಮಿಕರಿಗೆ ಕೆಲಸ ಖಾತ್ರಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.