ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ , ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್ ಮತ್ತು ಸಚಿತ್ ಹೊಸದೊಂದು ವಿಡಿಯೋ ಮಾಡಿ ಹರಿಬಿಟ್ಟಿದ್ದು, 2 ಮಿಲಿಯನ್ ವೀಕ್ಷಣೆ ಪಡೆದಿದೆ.
ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ , ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್ ಮತ್ತು ಸಚಿತ್ ಹೊಸದೊಂದು ವಿಡಿಯೋ ಮಾಡಿ ಹರಿಬಿಟ್ಟಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಎರಡು ದಿನದಲ್ಲಿ 2 ಮಿಲಿಯನ್ ವೀಕ್ಷಣೆ ಮತ್ತು 2ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಮಾತ್ರವಲ್ಲ ಇದಕ್ಕೆ ನಟಿ ಮೇಘನಾ ರಾಜ್ ಮತ್ತು ನಟ ಧ್ರುವ ಸರ್ಜಾ ಕಮೆಂಟ್ ಕೂಡ ಮಾಡಿದ್ದಾರೆ.
ಹಣ ಸುಲಿಗೆ ಪ್ರಕರಣ, ಕಾಣೆಯಾಗಿದ್ದ ನಿರೂಪಕಿ ದಿವ್ಯ ವಸಂತ ಕೇರಳದಲ್ಲಿ ಬಂಧನ!
ಅಭಿಮಾನಿಯೊಬ್ಬ ಧ್ರುವ ಸರ್ಜಾ ಮುಂದೆ ಓಡ್ರೋ ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ, ಸರ್ಜಾ ಬಂದ್ರು ಸರ್ಜಾ ಆಕ್ಷನ್ ಪ್ರಿನ್ಸ್ ಸರ್ಜಾ ಅಂತ ಕನ್ನಡ ಹಲವು ಹಾಡುಗಳ ಬಿಟ್ ಸೇರಿಸಿ ತನ್ನದೇ ಹಾಡು ಹೇಳುತ್ತಿರುವ ವಿಡೀಯೋ ಹಲವು ದಿನಗಳಿಂದ ವೈರಲ್ ಆಗಿತ್ತು.
ಇದನ್ನೇ ಕ್ರೀಯೇಟಿವ್ ಆಗಿ ಮಾಡಿರುವ ವಿಕ್ಕಿಪೀಡಿಯಾ ಖ್ಯಾತಿಯ ವಿಕಾಸ್ ಮತ್ತು ಸಚಿತ್ ಹೊಸದೊಂದು ಹಾಡು ಮಾಡಿದ್ದು, ಇದಕ್ಕೆ ನಟ ಧ್ರುವ ಸರ್ಜಾ ನಗುವ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಮೇಘನಾ ರಾಜ್ ಕ್ರೇಜಿ ಕ್ರೀಯೆಷನ್ ಎಂದು ನಕ್ಕಿದ್ದಾರೆ. ಕನ್ನಡದ ಹಲವು ತಾರೆಯರು ಇವರ ಕ್ರಿಯೇಟಿವ್ ಹಾಡಿಗೆ ಕಮೆಂಟ್ ಮಾಡಿದ್ದಾರೆ.
ಮಂಗಳೂರಿನಲ್ಲಿ ಕಾಣೆಯಾಗಿದ್ದ ಹಿಂದೂ ಯುವತಿ ಮುಸ್ಲಿಂ ಜೊತೆ ಪತ್ತೆ, ಯುವಕನ ಹಿನ್ನೆಲೆ ಕೇಳಿ ಶಾಕ್!
ಇನ್ನು ಕೆಲವರಂತೂ ಮೂಲ ಹಾಡನ್ನು ಕೇಳೋಕೆ ಆಗ್ತಿರಲಿಲ್ಲ. ಈವಾಗ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕಸದಲ್ಲಿ ರಸ ತೆಗೆಯೋದು ಅಂದ್ರೆ ಹೀಗೇನಾ ಎಂದು ಕೇಳಿದ್ದಾರೆ. ಇನ್ನು ಕೆಲವರು ಒರಿಜಿನಲ್ ಸಾಂಗ್ ನೆನಪೇ ಆಗ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ನಾನು ನಂದಿನಿ ಬೆಂಗಳೂರು ಬಂದೀನಿ ಅಂತ ಫೇಮಸ್ ಆಗಿದ್ದ ವಿಕ್ಕಿಪೀಡಿಯಾ ಮತ್ತು ಟೀಂ ಬಳಿಕ ಕರಿಮಣಿ ಮಾಲೀಕ ನಾನಲ್ಲ ಎಂದು ಸಾಂಗ್ ಬಿಡುಗಡೆ ಮಾಡಿ , ಅದು ಕೂಡ ಫೇಮಸ್ ಆಗಿತ್ತು.