ಜನ್ಮದಿನದ ಆಚರಣೆಯ ಫೋಟೋಗಳನ್ನು ಹಂಚಿಕೊಂಡ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ! Photos ಇಲ್ಲಿವೆ.!

Published : Jan 31, 2025, 10:19 AM ISTUpdated : Jan 31, 2025, 11:12 AM IST
ಜನ್ಮದಿನದ ಆಚರಣೆಯ ಫೋಟೋಗಳನ್ನು ಹಂಚಿಕೊಂಡ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ! Photos ಇಲ್ಲಿವೆ.!

ಸಾರಾಂಶ

ಚಿತ್ರದುರ್ಗ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್‌ ಅವರು ಕೆಲ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದರು. ಆಗ ದರ್ಶನ್‌ ಅವರನ್ನು ಹೊರಗಡೆ ಕರೆದುಕೊಂಡು ಬರಲು ಒದ್ದಾಡಿದ್ದ ವಿಜಯಲಕ್ಷ್ಮೀ ಈಗ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಈಗ ಅವರು ಜನ್ಮದಿನದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಸದ್ಯ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಕಳೆದ ಡಿಸೆಂಬರ್‌ 13ಕ್ಕೆ ಅವರಿಗೆ ಬೇಲ್‌ ಸಿಕ್ಕಿತ್ತು. 2024 ಜೂನ್‌ 9ರಂದು ಪೊಲೀಸರ ವಶವಾಗಿದ್ದ ದರ್ಶನ್‌ ಅವರೀಗ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಪತಿಯನ್ನು ಹೊರಗಡೆ ಕರೆದುಕೊಂಡು ಬರಲು ಒದ್ದಾಡಿದ್ದ ವಿಜಯಲಕ್ಷ್ಮೀ ಈಗ ಖುಷಿಯ ಕ್ಷಣ ಕಳೆಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಜನ್ಮದಿನದ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಎಲ್ಲ ಫೋಟೋ ಡಿಲಿಟ್‌ ಮಾಡಿದ್ರು…! 
ಕೆಲವು ದಿನಗಳ ಹಿಂದೆ ವಿಜಯಲಕ್ಷ್ಮೀ ದರ್ಶನ್ ಅವರು ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದರು. ಈಗ ಅವರು ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆರಂಭದಿಂದಲೂ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದ ವಿಜಯಲಕ್ಷ್ಮೀ ಅವರು ಆಗಾಗ ಏನಾದರೊಂದು ಪೋಸ್ಟ್‌ ಮಾಡುತ್ತಿದ್ದರು. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಆದ್ಮೇಲೆ ದರ್ಶನ್‌ ಅವರು ಜೈಲು ಸೇರಿದರು. ಅಲ್ಲಿಂದ ವಿಜಯಲಕ್ಷ್ಮೀ ಅವರು ಸೋಶಿಯಲ್‌ ಮೀಡಿಯಾ ಖಾತೆಯಲ್ಲ ಅವರ ಎಲ್ಲ ಫೋಟೋಗಳನ್ನು ಡಿಲಿಟ್‌ ಮಾಡಿದರು. ಇನ್ನು ದರ್ಶನ್‌ ಅವರಿಗೆ ಜಾಮೀನು ಸಿಕ್ಕಿದ್ದನ್ನು ಅವರು ಪೋಸ್ಟ್‌ ಮೂಲಕ ಸಂಭ್ರಮಿಸಿದ್ದರು.

ಡೇಂಜರ್‌ ಬಣ್ಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ವಿಜಯಲಕ್ಷ್ಮಿ ದರ್ಶನ್; ರೆಡ್‌ ಹಿಂದಿರುವ ಗುಟ್ಟು ಏನು?

ವಿಜಯಲಕ್ಷ್ಮೀಯಂಥ ಸೊಸೆ ಸಿಗೋದು ಅಪರೂಪ..! 
ನಟ ದರ್ಶನ್‌ ಅವರನ್ನು ಹೊರಗಡೆ ಕರೆದುಕೊಂಡು ಬರಲು ಅವರು ದೊಡ್ಡ ಹೋರಾಟ ಮಾಡಿದ್ದಾರೆ. ಪ್ರತಿ ವಾರ ಜೈಲಿಗೆ ಹೋಗಿ ದರ್ಶನ್‌ ಅವರಿಗೆ ಬಟ್ಟೆ, ತಿಂಡಿ, ಹಣ್ಣುಗಳನ್ನು ಕೊಟ್ಟು ಬರುತ್ತಿದ್ದರು. ಅಷ್ಟೇ ಅಲ್ಲದೆ ದೇವಸ್ಥಾನಗಳಿಗೂ ಭೇಟಿ ನೀಡಿದ್ದರು. ಕೊಲ್ಲೂರಿನಲ್ಲಿ ನವಚಂಡಿ ಯಾಗ ಮಾಡಿಸಿದ್ದರು. ಅಷ್ಟೇ ಅಲ್ಲದೆ ಹೊರರಾಜ್ಯದ ದೇವಸ್ಥಾನಕ್ಕೂ ಅವರು ಭೇಟಿ ನೀಡಿದ್ದರು. ದರ್ಶನ್‌ ಅವರು ಹೊರಗಡೆ ಬರಲು ವಿಜಯಲಕ್ಷ್ಮೀ ಮಾಡಿದ ಹೋರಾಟದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಇಂಥ ಸೊಸೆಯನ್ನು ಪಡೆದುಕೊಳ್ಳಲು ನಾವು ಪುಣ್ಯ ಮಾಡಿದ್ದೇವೆ ಎಂದು ದರ್ಶನ್‌ ತಾಯಿ ಮೀನಾ ತೂಗುದೀಪ ಅವರು ಹೇಳಿದ್ದರಂತೆ.

ಕುಟುಂಬದ ಜೊತೆ ಸಂಕ್ರಾಂತಿ ಆಚರಣೆ 
ಇನ್ನು ದಿನಕರ್‌ ತೂಗುದೀಪ ಅವರ ʼರಾಯಲ್‌ʼ ಸಿನಿಮಾವನ್ನು ವಿಜಯಲಕ್ಷ್ಮೀ ಅವರು ಪತಿ, ಅತ್ತೆಯ ಜೊತೆಗೆ ಬಂದು ವೀಕ್ಷಣೆ ಮಾಡಿದ್ದರು. ವಿಜಯಲಕ್ಷ್ಮೀ ಅವರು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಭಾಗವಹಿಸೋದಿಲ್ಲ. ಚಿತ್ರರಂಗದವರ ಗಣ್ಯರ ಜೊತೆ ಉತ್ತಮ ಸಂಬಂಧ ಹೊಂದಿರುವ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಉತ್ತಮ ಸಮಯ ಕಳೆದಿದ್ದರು. ಕುಟುಂಬದ ಜೊತೆ ಸೇರಿ ಅವರು ಸಂಕ್ರಾಂತಿ ಆಚರಿಸಿದ್ದರು. 

ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಅನ್ಸುತ್ತೆ: ದಿನಕರ್ ತೂಗುದೀಪ ಬೇಸರ

ಅಂದಹಾಗೆ ಜೂನ್‌ 8ರಂದು ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ನಡೆದಿದೆ. ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅವರು ಅಶ್ಲೀಲ ಮೆಸೇಜ್‌ ಕಳಿಸಿದ್ದರಂತೆ. ಇದು ಪವಿತ್ರಾ ಅವರ ಗೆಳೆಯ ದರ್ಶನ್‌ ಕಿವಿಗೆ ಬಿದ್ದಿತ್ತು. ಹೀಗಾಗಿ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಲಾಗಿತ್ತು. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಅವರನ್ನು ಥಳಿಸಲಾಗಿದೆ. ಇನ್ನು ರೇಣುಕಾಸ್ವಾಮಿ ಪ್ರಾಣಬಿಟ್ಟ ನಂತರ ಆ ದೇಹವನ್ನು ರಾಜಕಾಲುವೆಗೆ ಎಸೆಯಲಾಗಿದೆ. ಇನ್ನು ಇಬ್ಬರು ತಾವು ರೇಣುಕಾಸ್ವಾಮಿ ಕೊಲೆ ಮಾಡಿದ್ದೇವೆ ಎಂದು ಪೊಲೀಸ್‌ ಠಾಣೆಯಲ್ಲಿ ತಪ್ಪೊಪ್ಪಿಕೊಂಡಿದ್ದರು. ಪೊಲೀಸರಿಗೆ ಅನುಮಾನ ಬಂದು ತನಿಖೆ ಮಾಡಿದ ನಂತರದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಹೆಸರು ಕೇಳಿಬಂದಿತ್ತು. ಆ ನಂತರ ಜೂನ್‌ 9ರಂದು ದರ್ಶನ್‌ ಅವರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗಿತ್ತು. ಜೂನ್‌ ತಿಂಗಳಿನಿಂದ ಜೈಲಿನಲ್ಲಿದ್ದ‌ ದರ್ಶನ್‌ ಅವರಿಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಅಕ್ಟೋಬರ್‌ 30ರಂದು ಆರು ವಾರಗಳ ಕಾಲ ಜಾಮೀನು ನೀಡಲಾಗಿತ್ತು. ಈಗ ಅವರಿಗೆ ತಾತ್ಕಾಲಿಕ ಜಾಮೀನು ಸಿಕ್ಕಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!