
ಕೊರೋನಾ ವೈರಸ್ ಎರಡನೇ ಅಲೆಯಿಂದ ಅದೆಷ್ಟೋ ಮಂದಿ ಜೀವನ ಕಂಗಾಲಾಗಿದ್ದಾರೆ. ಬೆಡ್, ಆಕ್ಸಿಜನ್ ಮತ್ತು ಐಸಿಯು ಸಿಗದೆ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಜೀವವನ್ನು ಪಣಕಿಟ್ಟು ವೈದ್ಯರು, ನರ್ಸ್‌ಗಳು, ಕೋವಿಡ್ ವಾರಿಯರ್‌ಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೊಂದು ಸಲಾಂ ಹೇಳಬೇಕು. ಪರಿಸ್ಥಿತಿ ಹೀಗಿರುವಾಗ ಕಿರುತೆರೆ ನಟ ಅನಿರುದ್ಧ್ ಧಾವೆಗೂ ಕೊರೋನಾ ಸೋಂಕು ತಗುಲಿದೆ.
ಕೊರೋನಾದಿಂದ ಪಾರಾದ ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದ ಕತೆ!
ಕಳೆದ ವಾರ ಅನಿರುದ್ಧ್‌ಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿತ್ತು. ತೀವ್ರ ಅನಾರೋಗ್ಯಕ್ಕೊಳಗಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗೆ ಅನಿರುದ್ಧ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಅನಿರುದ್ಧ್ ಹಾಗೂ ಶಿಭಿಗೆ ಎರಡು ತಿಂಗಳ ಪಟ್ಟ ಮಗುವಿಗೆ. ಅನಿರುದ್ಧ್‌ಗೆ ಹೀಗಾಗಿರುವ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಶಿಭಿ ಎರಡು ತಿಂಗಳ ಮಗುವನ್ನು ಮನೆಯಲ್ಲಿಯೇ ಬಿಟ್ಟು ಆಸ್ಪತ್ರೆಗೆ ಓಡಿದ್ದಾರೆ.
ಶುಭಿ ಪೋಸ್ಟ್:
'ಆಸ್ಪತ್ರೆಯಲ್ಲಿ ತುಂಬಾನೇ ಕ್ರಿಟಿಕಲ್ ಕಂಡಿಷನ್‌ನಲ್ಲಿರುವ ಅನಿರುದ್ಧ್ ಬಳಿ ಹೊರಟಿರುವೆ. ನನ್ನ ಎರಡು ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟಿರುವೆ. ನನ್ನ ಜೀವನದ ಅತ್ಯಂತ ದೊಡ್ಡ ಸವಾಲಿನ ದಿನ ಇದಾಗಿದೆ. ಒಂದು ಕಡೆ ಮಗುವಿನ ಜೊತೆ ನಾನಿರಬೇಕು ಇನ್ನೊಂದು ಕಡೆ ಅನಿರುದ್ಧ್ ಜೊತೆಗಿದ್ದು ಸ್ಥೈರ್ಯ ತುಂಬಬೇಕಿದೆ. ಅನಿರುದ್ಧ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ದಯವಿಟ್ಟು ಎಲ್ಲರೂ ಪ್ರಾರ್ಥಿಸಿ. ನಿಮ್ಮಲ್ಲರ ಪ್ರಾರ್ಥನೆಯಿಂದ ಅನಿರುದ್ಧ ಗುಣಮುಖರಾಗಲಿದ್ದಾರೆ' ಎಂದು ಶಿಭಿ ಬರೆದುಕೊಂಡಿದ್ದಾರೆ.
ಸೋಂಕಿತರಿಗೆ ಆಕ್ಸಿಜನ್ ಕೊಡಿಸಲು ಫೇವರಿಟ್ ಬೈಕನ್ನೇ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.