ಮನೆಗೆ ಬಂದ ನೆಂಟರೆದುರು ತುಳಸಿ ಗರ್ಭಿಣಿ ಎನ್ನುವ ವಿಷಯವನ್ನು ಬಹಿರಂಗಗೊಳಿಸಿದ ದೀಪಿಕಾಗೆ ಹಾಗೂ ಶಾರ್ವರಿಗೆ ಅಭಿ ಶಾಕ್ ಕೊಟ್ಟಿದ್ದಾನೆ. ಏನಿದು ಟ್ವಿಸ್ಟ್?
ನಿಧಿಯನ್ನು ನೋಡಲು ಹುಡುಗನ ಕಡೆಯವರು ಬಂದಿದ್ದಾರೆ. ಹುಡುಗನ ಮನೆಯವರಿಗೆ ತುಳಸಿ ಗರ್ಭಿಣಿ ಎನ್ನುವುದು ತಿಳಿದರೆ ಅವರು ನಿಧಿಯನ್ನು ಒಪ್ಪುವುದಿಲ್ಲ ಎಂದು ತುಳಸಿಯನ್ನು ಮನೆಯ ಒಳಗೇ ಇರುವಂತೆ ಶಾರ್ವರಿ ಹೇಳಿದ್ದಳು. ಅದರೆ ಗಂಡಿನ ಕಡೆಯವರು ತುಳಸಿಯನ್ನು ಹುಡುಕಿದಾಗ ತುಳಸಿ ಹೊರಗೆ ಬಂದಿದ್ದಾಳೆ. ಅದೇ ಸಮಯಕ್ಕೆ ತುಳಸಿಗೆ ತಲೆ ತಿರುಗಿದೆ. ಇದೇ ಸಮಯವನ್ನು ಕಾಯುತ್ತಿದ್ದ ದೀಪಿಕಾ ಪ್ರೆಗ್ನೆನ್ಸಿ ಟೈಮ್ನಲ್ಲಿ ಹುಷಾರಾಗಿ ಇರಬೇಕಲ್ವಾ ಎಂದು ಪ್ರಶ್ನಿಸಿದ್ದಾಳೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಬಂದವರ ಎದುರು ಮಾನ ಕಳೆಯುವುದಕ್ಕಾಗಿ ದೀಪಿಕಾ ಈ ಕುತಂತ್ರ ಮಾಡಿದ್ದಾಳೆ. ಅವಳು ಅಂದುಕೊಂಡಂತೆ ಹುಡುಗಿ ನೋಡಲು ಬಂದವರು ಕೂಡ ಇದೇನಿದು ಅಸಹ್ಯ ಎಂದು ಹೇಳಿದ್ದಾರೆ. ಆದರೆ ಅದೇ ವೇಳೆ ಅಭಿಯ ಎಂಟ್ರಿ ಆಗಿದೆ. ಕುತೂಹಲದ ವಿಷಯ ಏನೆಂದ್ರೆ, ಅವನು ಅಮ್ಮ ತುಳಸಿ ಪರವಾಗಿ ಇದ್ದಾನೆ. ಅಮ್ಮನಿಗೆ ನೋವಾದ್ರೆ ಯಾವ ಮಗನೂ ಸಹಿಸಲ್ಲ ಎನ್ನುತ್ತಲೇ ಎಂಟ್ರಿ ಕೊಟ್ಟಿದ್ದಾನೆ.
ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ತುಳಸಿಯ ಗರ್ಭದ ಬಗ್ಗೆ ನೆಗೆಟಿವ್ ಮಾತನಾಡುತ್ತಿದ್ದವರೂ ಅಭಿಯ ವರ್ತನೆಗೆ ಮನಸೋತಿದ್ದಾರೆ. ಶಾರ್ವರಿಯನ್ನು ಉದ್ದೇಶಿಸಿ, ನೀನೇ ಸಾಕಿದಾ ಗಿಣಿ... ಹದ್ದಾಗಿ ಕುಕ್ಕಿತಲ್ಲೋ ಎನ್ನುತ್ತಿದ್ದಾರೆ. ಅಭಿಯ ಮನಸ್ಸಿನಲ್ಲಿ ಹೆಜ್ಜೆ ಹೆಜ್ಜೆಗೂ ಮಾಧವ್ ಮತ್ತು ತುಳಸಿಯ ಬಗ್ಗೆ ವಿಷದ ಬೀಜವನ್ನೇ ಬಿತ್ತುದ್ದಿದ್ದ ಶಾರ್ವರಿ ಮತ್ತು ದೀಪಿಕಾಗೆ ಇದು ನುಂಗಲಾಗದ ತುತ್ತಾಗಿದೆ. ಅಭಿ ಬಂದು ಏನು ಹೇಳುತ್ತಾನೆ, ನಿಧಿಯ ಮದುವೆಯ ವಿಷಯ ಏನಾಗುತ್ತದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಅಷ್ಟೇ ಅಲ್ಲದೇ, ದಿಢೀರ್ ಎಂದು ಅಭಿ ಬದಲಾಗಲು ಕಾರಣವೇನು? ಪೂರ್ಣಿಗೆ ತುಳಸಿ ಮಗುವನ್ನು ಹೆತ್ತು ಕೊಡುವುದು ಆತನಿಗೆ ತಿಳಿದಿದೆಯೇ ಎನ್ನುವುದು ವೀಕ್ಷಕರ ಮುಂದಿರುವ ಪ್ರಶ್ನೆ.
ಪುಟ್ಟಕ್ಕನ ಮಗಳು ಸ್ನೇಹಾ ಹಾಟ್ ಫೋಟೋಶೂಟ್: ಜಿಲ್ಲಾಧಿಕಾರಿ ಘನತೆ ಕಾಪಾಡಿ ಪ್ಲೀಸ್ ಅನ್ನೋದಾ ಫ್ಯಾನ್ಸ್?
ಅದೇ ಇನ್ನೊಂದೆಡೆ ತುಳಸಿ ಗರ್ಭಿಣಿಯಾಗಿರುವುದನ್ನು ಸಮರ್ಥ್, ಸಿರಿ ಮತ್ತು ಸಂಧ್ಯಾ ಒಪ್ಪಿಕೊಂಡಿದ್ದಾರೆ. ಅಮ್ಮನ ಜೀವನ ಅವಳ ಇಷ್ಟ. ಅಮ್ಮ ನಮಗೆ ಏನು ಬೇಕೋ ಎಲ್ಲವನ್ನೂ ಕೊಟ್ಟಾಗಿದೆ. ಈಗ ಅವಳ ಆಸೆಯನ್ನು ಈಡೇರಿಸಿಕೊಳ್ಳಲು ಅವಳ ಪರವಾಗಿ ನಾವು ನಿಂತುಕೊಳ್ಳಬೇಕಲ್ವಾ ಎಂದು ಸಮರ್ಥ್ ಪ್ರಶ್ನಿಸಿದ್ದಾನೆ. ಇಂಥ ಸಮಯದಲ್ಲಿ ಅಮ್ಮನನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಿರಿ ಹೇಳಿದ್ದಾಳೆ. ಇದಕ್ಕೆ ಸಂಧ್ಯಾ, ಅಮ್ಮ ಪ್ರೆಗ್ನೆಂಟ್ ಆಗಿರೋದು ನನಗೇನೂ ಬೇಸರವಿಲ್ಲ ನನಗೂ ಖುಷಿನೇ ಎಂದಿದ್ದಾಳೆ. ಆಗ ಮಧ್ಯೆ ಬಂದ ಸಂಧ್ಯಾಳ ಮಾವ, ಇಲ್ಲಿ ಕಮೆಂಟಿಗರ ಮಾತಿಗೆ ಸಾಕ್ಷಿಯಾಗಿ ನಿಂತಿದ್ದಾನೆ. ಪ್ರೇಕ್ಷಕರು ತುಳಸಿಗೆ ಹೇಗೆ ಉಗಿಯುತ್ತಿದ್ದಾರೋ ಅದೇ ರೀತಿ ಇಲ್ಲಿ ಮಾವ ತುಳಸಿಯನ್ನು ನಿಂದಿಸುತ್ತಿದ್ದಾನೆ.
undefined
ಅದಕ್ಕೆ ಕೋಪಗೊಂಡ ಸಂಧ್ಯಾ, ವಯಸ್ಸಾದ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳುವಾಗ ನಿಮಗೆ ವಯಸ್ಸಿನ ಯೋಚನೆ ಬರಲ್ಲ. ಆಗ ಬರದದ್ದು ಈಗ ಬರುತ್ತಾ? ಅವರೇನು ಅಕ್ರಮವಾಗಿ ಸಂಬಂಧ ಇಟ್ಟುಕೊಂಡು ಮಕ್ಕಳು ಮಾಡಿಕೊಂಡಿದ್ದಾರಾ ಇಲ್ಲವಲ್ಲ, ಅದು ಅವರ ಪವಿತ್ರ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದಿದ್ದಾಳೆ ಸಿರಿ. ತಮ್ಮ ಮಾವನಿಗೆ ತಿರುಗೇಟು ಕೊಟ್ಟಿರೋ ಸಂಧ್ಯಾ, ಮಕ್ಕಳನ್ನು ಮನೆಯಿಂದ ಹೊರ ಹಾಕುವಾಗ ಯಾವ ಅಸಹ್ಯವೂ ಬರುವುದಿಲ್ಲ... ಇಂಥ ವಿಷಯಕ್ಕೆ ಅಸಹ್ಯ ಹುಟ್ಟತ್ತಾ ಎಂದು ಪ್ರಶ್ನಿಸಿದ್ದಾಳೆ. ಅತ್ತೆ, ಮದುವೆಯಾಗಲೇ ಅಕ್ರಮವಾಗಿ ಇದನ್ನು ಹುಟ್ಟಿಸಿಲ್ಲ. ವಯಸ್ಸು ಯಾವುದಾದರೇನು, ಹುಟ್ಟಿಸುವ ಶಕ್ತಿ ಇದ್ದ ಮೇಲೆ ಮಗು ಹುಟ್ಟಿದರೆ ತಪ್ಪೇನು ಎಂದು ಸಿರಿ ಪ್ರಶ್ನಿಸಿದ್ದಾಳೆ. ಸಮಾಜಕ್ಕೆ ಹೆದರುತ್ತಾ ಕುಳಿತರೆ ಏನೂ ಆಗುವುದಿಲ್ಲ. ಸಮಾಜ ಇರುವುದೇ ಮಾತನಾಡಲು. ಅಕ್ಕ-ಪಕ್ಕದ ಮನೆಯವರು ಹೇಳುವುದನ್ನು ಕೇಳುತ್ತಾ ಕುಳಿತುಕೊಳ್ಳಬಾರದು. ಅವರ ಮಾತಿಗೆ ಕಿವಿಗೊಡಬಾರದು ಎಂದಿದ್ದಾಳೆ. ಒಟ್ಟಿನಲ್ಲಿ ಸೀರಿಯಲ್ ಮೂಲಕವೇ ನಿರ್ದೇಶಕರು ಉಲ್ಟಾ ಮಾತನಾಡುವವರಿಗೆ ತಿರುಗೇಟು ನೀಡಿದ್ದಾರೆ.
ಸ್ಟಾರ್ ಷೆಫ್ ಆದ್ರೆನೇ ಒಪ್ಲಿಲ್ಲ... ಕಾರು ಕಲಿತ್ರೆ ಒಪ್ತಾನಾ? ಅದೇನಂತ ಕಥೆ ಮಾಡ್ತೀರಪ್ಪಾ... ಫ್ಯಾನ್ಸ್ ಬೇಸರ