'ಜಗಳ ಮಾಡ್ತೀನಿ, ಮನರಂಜನೆ ಕೊಡ್ತೀನಿ'; Bigg Boss Kannada 12 ಶೋಗೆ ಆಡಿಷನ್‌ ಕೊಟ್ಟ ಶಿರಸಿ-ಹಾವೇರಿ ಹುಡುಗಿ!

Published : Aug 03, 2025, 05:29 PM IST
bigg boss kannada season 12

ಸಾರಾಂಶ

Bigg Boss Kannada Season 12 Show: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಭಾಗಿಯಾಗಲು ಹಾವೇರಿ-ಶಿರಸಿ ಭಾಗದ ಮಹಿಳೆಯೊಬ್ಬರು ಆಡಿಷನ್‌ ನೀಡಿದ್ದಾರೆ. 

ಕೆಲ ಸೆಲೆಬ್ರಿಟಿಗಳಿಗೆ ಯಾವುದೇ ಭಾಷೆಯ ಬಿಗ್‌ ಬಾಸ್‌ ಶೋ ಆಫರ್‌ ನೀಡಿದರೂ ಕೂಡ ಹೋಗೋದಿಲ್ಲ. ಇನ್ನು ಕೆಲ ಸಾಮಾನ್ಯ ಜನರು ಈ ಮನೆಗೆ ಹೋಗಲು ಕಾತುರಿಂದ ಕಾಯುತ್ತಿರುತ್ತಾರೆ. ಬಿಗ್‌ ಬಾಸ್‌ ಶೊ ಹೋಗಲು ಕೆಲವರು ಹುಚ್ಚಾಟ ಕೂಡ ಮಾಡೋದುಂಟು. ಈ ಬಾರಿ ಹಾವೇರಿ-ಶಿರಸಿ ಹುಡುಗಿಯೋರ್ವರು ಬಿಗ್‌ ಬಾಸ್‌ ಕನ್ನಡ ಶೋಗೆ ( Bigg Boss Kannada Season 12 ) ಹೋದರೆ ತನಗೆ ಏನೆಲ್ಲ ಸಮಸ್ಯೆ ಆಗುವುದು ಎಂಬುದನ್ನು ಕೂಡ ವಿಡಿಯೋ ಮಾಡಿ, ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ನಾನು ಉತ್ತರ ಕರ್ನಾಟಕದವಳು!

“ನನಗೆ ಬಿಗ್‌ ಬಾಸ್‌ ಕನ್ನಡ ಶೋ ಹೋಗಲು ತುಂಬ ಇಷ್ಟ ಇದೆ. ನಾನು ಹಾವೇರಿ, ಶಿರಸಿ ಹುಡುಗಿ. ನಾನು ಉತ್ತರ ಕರ್ನಾಟಕ ಹುಡುಗಿ ಎಂದರೆ ಯಾರೂ ನಂಬೋದಿಲ್ಲ. ನನ್ನ ಅಜ್ಜಿ ಮನೆ ಶಿರಸಿ, ಹಾವೇರಿಯಲ್ಲಿದೆ” ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

ನಾನು ಯಾಕೆ ಬಿಗ್‌ ಬಾಸ್‌ಗೆ ಹೋಗಬೇಕು?

“ಬಿಗ್‌ ಬಾಸ್‌ ಮನೆಯಲ್ಲಿ ಇರಬೇಕು ಅಂದ್ರೆ ಟಾಸ್ಕ್‌ ಆಡಬೇಕು, ಜಗಳ, ಮನರಂಜನೆ ಇರಬೇಕು. ನಾನು ಜಗಳ ಮಾಡೋದರಲ್ಲಿ, ಮನರಂಜನೆ ಕೊಡೋದರಲ್ಲಿ, ಟಾಸ್ಕ್‌ ಮಾಡೋದರಲ್ಲಿ ನಾನು ಫಸ್ಟ್‌ ಇದ್ದೇನೆ. ಹೀಗಾಗಿ ನಾನು ಬಿಗ್‌ ಬಾಸ್‌ ಶೋನಲ್ಲಿ ಭಾಗಿ ಆಗಬಹುದು” ಎಂದು ಹೇಳಿದ್ದಾರೆ.

ಏನು ಸಮಸ್ಯೆ ಆಗುತ್ತದೆ?

“ಒಳ್ಳೆಯ ಆಹಾರ ಇಲ್ಲ ಅಂದರೆ ಕಷ್ಟ ಆಗುತ್ತದೆ. ನನಗೆ ಪ್ರೋಟೀನ್‌ ಬೇಕು, ಪ್ರೋಟೀನ್‌ ಸಿಕ್ಕಿಲ್ಲ ಅಂದರೆ ಸಿಟ್ಟು ಬರುತ್ತದೆ. ಜಿಮ್‌ ಉಪಕರಣಗಳು ಬೇಕು. ಕನ್ನಡದಲ್ಲಿ ಮಾತನಾಡುವಾಗ ಮಧ್ಯೆ ಹಿಂದಿ, ಇಂಗ್ಲಿಷ್‌ ಪದಗಳು ಬಂದರೆ ಬಿಗ್‌ ಬಾಸ್‌ ಬೈಯ್ಯಬಹುದು” ಎಂದು ಹೇಳಿದ್ದಾರೆ.

ಟ್ಯಾಟು ಹುಡುಗಿ!

ಅಂದಹಾಗೆ ಈ ಮಹಿಳೆಗೆ ಈಗ 29 ವರ್ಷ ವಯಸ್ಸಾಗಿದೆ. ಮೈತುಂಬ ಟ್ಯಾಟೂ ಹಾಕಿಕೊಂಡಿರೋ ಈ ಮಹಿಳೆ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ. ಇವರ ಮೈಮೇಲೆ ಬುದ್ಧ, ಬೆಕ್ಕಿನ ಟ್ಯಾಟೂ ಇದೆ.

ಯಾರಿದು?

ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ AXY ಎಂದು ಬರೆದುಕೊಂಡಿರೋ ಇವರು ತಮ್ಮ ನಿಜವಾದ ಹೆಸರು ಏನೆಂದು ಬರೆದುಕೊಂಡಿಲ್ಲ. ಒಟ್ಟಿನಲ್ಲಿ ಈ ಬಾರಿ ಸಾಮಾನ್ಯ ಜನರಿಗೆ ಬಿಗ್‌ ಬಾಸ್‌ ಹೋಗಲು ಅವಕಾಶವಿದ್ಯಾ ಎಂದು ಕಾದು ನೋಡಬೇಕಿದೆ.

ಯಾವಾಗ ಕನ್ನಡ ಬಿಗ್‌ ಬಾಸ್‌ ಆರಂಭ?

ಸೆಪ್ಟೆಂಬರ್‌ ಅಂತ್ಯದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಆರಂಭ ಆಗುವುದು. ಈ ಬಾರಿ ಕಿಚ್ಚ ಸುದೀಪ್‌ ಅವರೇ ನಿರೂಪಣೆ ಮಾಡಲಿದ್ದಾರೆ. ಮುಂದಿನ ನಾಲ್ಕು ಸೀಸನ್‌ಗಳಿಗೆ ನಿರೂಪಣೆ ಮಾಡೋದಾಗಿ ಕಿಚ್ಚ ಸುದೀಪ್‌ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, “ಇನ್ನು ಸ್ಪರ್ಧಿಗಳ ಆಯ್ಕೆಯಲ್ಲಿ ತಾನು ಭಾಗಿ ಆಗೋದಿಲ್ಲ, ವಿವಾದಾತ್ಮಕ ವ್ಯಕ್ತಿಗಳು ಸ್ಪರ್ಧಿಗಳಾಗುವ ಬಗ್ಗೆ ನಾನು ಏನೂ ಹೇಳೋದಿಲ್ಲ. ಸಮಾಜದಲ್ಲಿ ಓಡಾಡಿಕೊಂಡು ಇರೋರು ದೊಡ್ಮನೆಗೆ ಬಂದರೆ ತಪ್ಪೇನು?” ಎಂದು ಅವರು ಹೇಳಿಕೊಂಡಿದ್ದಾರೆ.

ಬಿಗ್‌ ಬಾಸ್‌ ಶೂಟಿಂಗ್‌ ಎಲ್ಲಿ ಆಗತ್ತೆ?

ಈಗಾಗಲೇ ದೊಡ್ಮನೆಗೆ ಯಾರು? ಯಾರು ಹೋಗಬಹುದು ಎಂಬ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಕೆಲ ಸೆಲೆಬ್ರಿಟಿಗಳ ಹೆಸರು ಕೂಡ ವೈರಲ್‌ ಆಗ್ತಿದ್ದು, ಯಾರು ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಅಂದಹಾಗೆ ಬೆಂಗಳೂರಿನಿಂದಾಚೆ ಬಿಡದಿ ಬಳಿಯಿರುವ ಇನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಬಿಗ್‌ ಬಾಸ್‌ ಮನೆ ನಿರ್ಮಾಣ ಆಗಿದೆ ಎನ್ನಲಾಗಿದೆ. ಕಳೆದ ಬಾರಿ ದೊಡ್ಡ ಆಲದಮರದ ಬಳಿ ದೊಡ್ಮನೆ ನಿರ್ಮಾಣ ಮಾಡಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!