
ಕೊರಿಯೋಗ್ರಾಫರ್, ನಟ ರಾಬರ್ಟ್ ಮಾಸ್ಟರ್ ( Robert Master ) ತಮ್ಮ ತಾಯಿಯ ಅಂತ್ಯಕ್ರಿಯೆ ವೇಳೆ ಕುಣಿದು ಕಳಿಸಿಕೊಟ್ಟಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ಮೂರು ದಿನಗಳ ಹಿಂದೆ ನಿಧನರಾಗಿದ್ದು, ಅಂತ್ಯಕ್ರಿಯೆ ವಿಡಿಯೋ ಈಗ ವೈರಲ್ ಆಗ್ತಿದೆ.
ಹೌದು, ರಾಬರ್ಟ್ ಮಾಸ್ಟರ್ ತಾಯಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಈ ವೇಳೆ ಅವರು ತಮ್ಮಟೆ ಹಾಡಿಗೆ ಡ್ಯಾನ್ಸ್ ಮಾಡಿ ಕಳಿಸಿಕೊಟ್ಟರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದು, ಇಂಥ ಕಷ್ಟದ ಸಂದರ್ಣದಲ್ಲಿ ಓರ್ವ ಡ್ಯಾನ್ಸರ್ ಆಗಿ ಈ ರೀತಿ ತಾಯಿಗೆ ವಿದಾಯ ಹೇಳೋದು ನಿಜಕ್ಕೂ ಕಷ್ಟ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ರಾಬರ್ಟ್ ಮಾಸ್ಟರ್ ಅವರು ಓರ್ವ ನಟ, ಕೊರಿಯೋಗ್ರಾಫರ್ ಕೂಡ ಹೌದು. ದಕ್ಷಿಣ ಭಾರತದ ಚಿತ್ರರಂಗದ ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ರಾಬರ್ಟ್ ಸಾಮಾನ್ಯವಾಗಿ ವಿಲನ್ ಪಾತ್ರಗಳನ್ನು ಮಾಡುತ್ತಾರೆ ಅಥವಾ ತಾವು ಕೊರಿಯೋಗ್ರಫಿ ಮಾಡಿದ ಸಿನಿಮಾಗಳಲ್ಲಿ ಕಾಣಿಸಿಕೊಳ್ತಾರೆ.
ಸತ್ಯರಾಜ್ ಅವರ 'ಮಾರನ್' ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದರು. ಡ್ಯಾನ್ಸರ್ ಸಿನಿಮಾದಲ್ಲಿ ಅವರ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆ ಸಿಕ್ಕಿತ್ತು. ಅತ್ಯುತ್ತಮ ಖಳನಾಯಕ ಎಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. ರಾಬರ್ಟ್ ಮಾಸ್ಟರ್ ಅವರು 'ಪೊಡಾ ಪೊಡಿ' ಸಿನಿಮಾದಲ್ಲಿ ನಟಿಸಿದ್ದರು.
'ಲವ್ ಪನ್ಲಮ್ಮ, ವೇನಮಾ' ಹಾಡಿಗೆ ಅತ್ಯುತ್ತಮವಾಗಿ ಕೊರಿಯೋಗ್ರಫಿ ಮಾಡಿದ್ದಕ್ಕೆ ವಿಜಯ್ ಪ್ರಶಸ್ತಿಯನ್ನು ಗೆದ್ದಿದ್ದರು. ನಟ ಕಮಲ್ ಹಾಸನ್ ನಿರೂಪಣೆಯ ʼಬಿಗ್ ಬಾಸ್ ತಮಿಳು ಸೀಸನ್ 6ʼ ರಲ್ಲಿ ರಾಬರ್ಟ್ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ರಾಬರ್ಟ್ ಮಾಸ್ಟರ್ ಅವರು ಎರಡು ಬಾರಿ ಮದುವೆಯಾಗಿ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಟಿ ವನಿತಾ ವಿಜಯ್‌ಕುಮಾರ್ ಅವರನ್ನು ಮದುವೆ ಆಗ್ತಾರೆ ಎನ್ನಲಾಗಿತ್ತು. ಆಮೇಲೆ ಈ ಜೋಡಿಗೆ ಒಟ್ಟಿಗೆ ಮದುವೆ ಕುರಿತಾದ ಸಿನಿಮಾವೊಂದರಲ್ಲಿ ನಟಿಸ್ತಾರೆ ಎನ್ನೋದು ಬಹಿರಂಗ ಆಗಿತ್ತು. ಈ ಚಿತ್ರಕ್ಕೆ ವನಿತಾ ಮಗಳು ನಿರ್ಮಾಪಕಿಯಂತೆ. ಮೂರು ಮದುವೆಯಾಗಿ, ಯಾವಾಗಲೂ ವಿವಾದ ಮಾಡಿಕೊಂಡು ಸದ್ದು ಮಾಡುವ ವನಿತಾ ವಿಜಯ್‌ಕುಮಾರ್ ಅವರು ಕೂಡ ರಾಬರ್ಟ್ ತಾಯಿ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಆದಷ್ಟು ಬೇಗ ಈ ಜೋಡಿಯ ಸಿನಿಮಾ ರಿಲೀಸ್ ಆಗಲಿದೆಯಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.