
ನಟ ಮಡೆನೂರು ಮನು ವಿರುದ್ದ ಅ*ತ್ಯಾಚಾರ ಕೇಸ್ ಈಗ ಇನ್ನೊಂದು ಸ್ವರೂಪ ಪಡೆದಿದೆ. ದೂರು ದಾಖಲಾಗಿ ಒಂದೇ ದಿನಕ್ಕೆ ಸಂತ್ರಸ್ಥೆ ಯೂಟರ್ನ್ ಹೊಡೆದಿದ್ದಾರೆ. ʼಕಾಮಿಡಿ ಕಿಲಾಡಿಗಳುʼ ಶೋನಲ್ಲಿ ಇವರಿಬ್ಬರು ಭಾಗವಹಿಸಿದ್ದರು.
ನಟಿ ಹೇಳಿದ್ದೇನು?
ನಾನು ಸತ್ತರೂ ಯಾರು ಕಾರಣರಲ್ಲ. ಇದು ನನ್ನ ಸ್ವಂತ ನಿರ್ಧಾರ ಎಂದು ಸಂತ್ರಸ್ಥ ನಟಿ ಹೇಳಿಕೆ ಕೊಟ್ಟಿದ್ದಾರೆ. “ನನ್ನ ಮನು ಮಧ್ಯೆ ಒಂದಷ್ಟು ಜಗಳ ಗೊಂದಲಗಳಿತ್ತು. ಸಿನಿಮಾ ಪ್ರೊಡ್ಯೂಸರ್‌ಗೆ ಮೆಸೇಜ್ ಮಾಡಿದ್ದು ತಪ್ಪು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ನನ್ನದಲ್ಲ. ಏನಿದ್ದರು ನಮ್ಮ ಮಧ್ಯೆ ಇರಬೇಕಿತ್ತು. ಸಿನಿಮಾಗೆ ತೊಂದರೆ ಕೊಡುವ ಉದ್ದೇಶ ಇರಲಿಲ್ಲ. ಬಳಿಕ ವಕೀಲರನ್ನು ಮೀಟ್ ಮಾಡಿಸಿ ನನ್ನ ತಪ್ಪಿನ ಬಗ್ಗೆ ಅರಿವು ಮಾಡಿಸಿದ್ರು. ಇದು ನನ್ನ ಸ್ವಂತ ನಿರ್ಧಾರ. ಯಾರೂ ಕೂಡ ಒತ್ತಾಯಪೂರ್ವಕವಾಗಿ ದೂರು ನೀಡಿಸಿಲ್ಲ. ಕುಲದಲ್ಲಿ ಕೀಳ್ಯಾವುದೋ ಸಿನಿಮಾಗೆ ಒಳ್ಳೆದಾಗಲಿ. ಅಕಸ್ಮಾತ್ ನಾನು ಸತ್ತರೂ ಕೂಡ ಯಾರೂ ಕಾರಣರಲ್ಲ. ಇದು ನನ್ನ ಸ್ವಂತ ನಿರ್ಧಾರ” ಎಂದು ನಟಿ ವಿಡಿಯೋ ರಿಲೀಸ್ ಮಾಡಿ ಹೇಳಿಕೆ ಕೊಟ್ಟಿದ್ದಾರೆ.
ನಿಜಕ್ಕೂ ಏನಾಗಿತ್ತು?
ನಟ ಮಡೆನೂರ್ ಮನು ವಿರುದ್ದ ಅ*ತ್ಯಾಚಾರ ಕೇಸ್ ದಾಖಲಾಗಿತ್ತು. ಸದ್ಯ ಅನ್ನಪೂರ್ಣೇಶ್ವರಿ ನಗರ ಸ್ಟೇಷನ್ ನಲ್ಲಿ ಆರೋಪಿ ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ನಡೆಸಿ ಮನು ಅವರನ್ನು ಠಾಣೆಯಲ್ಲಿ ಇರಿಸಿದ್ದಾರೆ. ನಾಳೆ ಬೆಳಗ್ಗೆ ಮೆಡಿಕಲ್ ಮುಗಿಸಿ ಕೋರ್ಟ್‌ಗೆ ಹಾಜರುಪಡಿಸಬೇಕಿತ್ತು. ಆರೋಪಿಯನ್ನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸಂತ್ರಸ್ಥೆ ನಟಿಯ ಜೊತೆಗಿನ ಒಡನಾಟ ಹಾಗೂ ಆಕೆಯ ಆರೋಪದ ಬಗ್ಗೆ ವಿಚಾರಣೆ ಮಾಡಲಾಗಿದೆ.
“2022ರ ನವೆಂಬರ್ ತಿಂಗಳಿನಲ್ಲಿ ಶಿಕಾರಿಪುರದಲ್ಲಿ ನಡೆದ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನು ಆ ನಟಿಯನ್ನ ಕರೆದುಕೊಂಡು ಹೋಗಿದ್ದರಂತೆ, ಆ ಕಾರ್ಯಕ್ರಮದ ಮುಗಿದ ಬಳಿಕ ಹೋಟೆಲ್ ರೂಮ್‌ನಲ್ಲಿ ಸಂಭಾವನೆ ಕೊಡುವ ನೆಪದಲ್ಲಿ ಮನು ಅವರು ಅ*ತ್ಯಾಚಾರ ಮಾಡಿದ್ದಾರೆ” ಎಂದು ನಟಿ ದೂರಿನಲ್ಲಿ ತಿಳಿಸಿದ್ದರು.
ಇನ್ನೋರ್ವ ನಟನ ವಿರುದ್ಧ ಆರೋಪ
ಅಲ್ಲದೆ ಇಂದು ಸಂತ್ರಸ್ಥೆಯನ್ನ ಕರೆಸಿ ಹೇಳಿಕೆ ದಾಖಲಿಸಬೇಕಿತ್ತು. ಅಲ್ದೆ ಕೋರ್ಟ್‌ನಲ್ಲಿ 164 ಸ್ಟೇಟ್ಮೆಂಟ್ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. “ಸಂತ್ರಸ್ಥೆ ದೂರು ದುರುದ್ದೇಶವಾಗಿದ್ದು, ಒಳಸಂಚು ಮಾಡಿ ಕೆಲವರು ದೂರು ಕೊಡಿಸಿದ್ದಾರೆಂದು” ಎಂದು ಮಡೆನೂರು ಮನು ಹೇಳಿಕೆ ಕೊಟ್ಟಿದ್ದಾರೆ. ಇಂದು ಮನು ಅಭಿನಯದ ಸಿನಿಮಾ ರಿಲೀಸ್ ಆಗಿದೆ. ಇದರ ಜೊತೆಗೆ ನಾನು ಸತ್ತರೆ ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಅಪ್ಪಣ್ಣ ಕಾರಣ ಅಂತ ನಟಿ ಹೇಳಿರುವ ಆಡಿಯೋ ಕೂಡ ವೈರಲ್ ಆಗ್ತಿದೆ.
ನಟಿ ಹೇಳಿರೋದು ಸುಳ್ಳು!
“ನನಗೂ, ಆ ನಟಿಗೂ ಪರಿಚಯ ಇದೆ. ನಾನು ಯಾವುದೇ ತಾಳಿ ಕಟ್ಟಿಲ್ಲ, ಮದುವೆಯಾಗಿಲ್ಲ. ಅ*ತ್ಯಾಚಾರದ ದೂರು ಕೊಟ್ಟಿರೋದು. ಆಕೆ ದೂರಿನಲ್ಲಿ ಹೇಳಿರೋದು ಬಹುತೇಕ ಸುಳ್ಳು, ಆಕೆ ಜೊತೆ ಆತ್ಮೀಯತೆಯಿಂದ ಸಂಪರ್ಕದಲ್ಲಿದ್ದಿದ್ದು ನಿಜ. ಅವಳು ದೂರು ಕೊಡ್ತಿರ್ಲಿಲ್ಲ, ಇಲ್ಲದನ್ನು ಸೇರಿಸಿ ಕೊಡಿಸಿದ್ದಾರೆ” ಎಂದಿದ್ದರು ಮನು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.