60 ಅನ್ನಪೂರ್ಣ ಅಜ್ಜಿ ಡ್ಯಾನ್ಸ್ ಗೆ ಕರ್ನಾಟಕ ಫಿದಾ!

By Suvarna News  |  First Published Jan 30, 2021, 2:43 PM IST

ನಾ ಬೋರ್ಡ್ ಇರದ ಬಸ್ಸನು ಹತ್ತಿ ಬಂದ ಚೋಕರಿ.. ಅಂತ ಟಪ್ಪಾಂಗುಜ್ಜಿ ಹಾಕ್ತಿರೋದು ಟೀನೇಜ್ ಹುಡುಗಿ ಅಲ್ಲ, ಅನ್ನಪೂರ್ಣ ಅನ್ನೋ ವೃದ್ಧೆ, ಏನಿವ್ರ ಕಥೆ?


ನಾ ಬೋರ್ಡ್ ಇರದ ಬಸ್ಸನು ಹತ್ತಿ ಬಂದ ಚೋಕರಿ.. ಅಂತ ಟಪ್ಪಾಂಗುಜ್ಜಿ ಹಾಕ್ತಿರೋದು ಟೀನೇಜ್ ಹುಡುಗಿ ಅಲ್ಲ, ಅನ್ನಪೂರ್ಣ ಅನ್ನೋ ವೃದ್ಧೆ, ಏನಿವ್ರ ಕಥೆ? ಹೆಸರು ಅನ್ನಪೂರ್ಣ, ವಯಸ್ಸು 60 ವರ್ಷ. ಊರು ಸವದತ್ತಿ.. ಸದ್ಯಕ್ಕೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಸ್ಟ್ರಾಂಗ್ ಕಂಟೆಸ್ಟೆಂಟ್. 60 ರ ಅಜ್ಜಿ 'ನಾ ಬೋರ್ಡ್ ಇರದ ಬಸ್ಸನು ಹಾಡಿಗೆ ಟಪ್ಪಾಂಗುಚ್ಚಿ ಹಾಕಿ ಕುಣೀತಿದ್ರೆ ಇಡೀ ಕರ್ನಾಟಕವೇ ದಂಗಾಗಿ ನೋಡ್ತಿತ್ತು.

60ರ ಹರೆಯದ ಈ ಅಜ್ಜಿಯ ಡ್ಯಾನ್ಸ್ ಹರೆಯದವರ ಡ್ಯಾನ್ಸ್ ಗೆ ಕಮ್ಮಿ ಇಲ್ಲದ ಹಾಗಿದೆ. ಶುರು ಶುರುವಿಗೆ ಅವರ ಸ್ಟೆಪ್ ಜೊತೆಗೆ ಎಲ್ಲರಿಗೂ ಅಚ್ಚರಿ ಆಗಿದ್ದು ಈ ಅಜ್ಜಿಯ ಎನರ್ಜಿ. ಎಂಥಾ ಪ್ರಾಯದ ಹುಡುಗರೂ ಐದು ನಿಮಿಷ ಕುಣಿದರೇ ಏದುಸಿರು ಬಿಡ್ತಾರೆ.

Tap to resize

Latest Videos

ಡಿಕೆಡಿ ವೇದಿಕೆಯಲ್ಲಿ ಅನುಶ್ರೀ ಬರ್ತಡೇ; ಇವನನ್ನು ನೋಡುತ್ತಿದ್ದಂತೆ ಮುದ್ದಾಡಿದ ಚೆಲುವೆ! ...

ಅಂತದ್ರಲ್ಲಿ ಈ ಅನ್ನಪೂರ್ಣ ಅಷ್ಟೊತ್ತು ಕುಣಿದರೂ ಒಂಚೂರೂ ದಣಿವಿಲ್ಲದೇ ಮತ್ತೆ ಮೈಕ್ ಹಿಡಿದು ಸ್ಟೇಜ್ ಮೇಲೆ ಬರ್ತಾರೆ. ನಿಂತು ಲವಲವಿಕೆಯಿಂದ ಮಾತಾಡ್ತಾರೆ. ಆದರೂ ಬಹಳ ಎಮೋಶನಲ್ ಆಗಿ ಈ ಅಜ್ಜಿಯ ಕತೆ ತೆರೆದುಕೊಂಡಿದ್ದು ಆರಂಭದ ಎಪಿಸೋಡ್‌ನಲ್ಲಿ.

ಯಾರು ಈ ಅನ್ನಪೂರ್ಣ, ಅವರ ಕತೆ ಏನು?

ಆಗಲೇ ಹೇಳಿದಂತೆ ಅನ್ನಪೂರ್ಣ ಸವದತ್ತಿಯವರು. ಉತ್ತರ ಕರ್ನಾಟಕದ ಹಳ್ಳಿಯೊಂದರ ಸಾಮಾನ್ಯ ಮಹಿಳೆ ಅದರಲ್ಲೂ ೬೦ರ ಹರೆಯದ ವಯೋವೃದ್ಧೆ ಕರ್ನಾಟಕದ ಜನರೆಲ್ಲ ನೋಡೋ ಜೀ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಹೇಗೆ ಬಂದರು ಅನ್ನೋದೇ ಸಖತ್ ಇಂಟೆರೆಸ್ಟಿಂಗ್. ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋಗೆ ಎಲ್ಲೆಡೆ ಆಡಿಶನ್ ಮಾಡ್ತಾರೆ. ಹಾಗೆ ಮಾಡಿದ ಆಡಿಶನ್ ಗೆ ಈ ಅಜ್ಜಿಯೂ ಬಂದಿದ್ದಾರೆ. ಬಹುಶಃ ತನ್ನ ಮೊಮ್ಮಕ್ಕಳನ್ನು ಕರ್ಕೊಂಡು ಬಂದಿರ್ತಾರೆ ಅಂತಲೇ ಶುರು ಶುರುವಲ್ಲಿ ಎಲ್ಲರೂ ಗ್ರಹಿಸಿದ್ದಾರೆ.

ಕಳೆದ 10 ವರ್ಷಗಳಿಂದ ಹಿರಿಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅನುಶ್ರೀ ವಿಡಿಯೋ ವೈರಲ್! ...

ಇಲ್ಲ ಅಜ್ಜಿಯೇ ಕಂಟೆಸ್ಟೆಂಟ್ ಅಂತ ಗೊತ್ತಾದಾಗ ಹೆಚ್ಚಿನವರು ನಕ್ಕಿದ್ದಾರೆ, ಆದರೆ ಅದನ್ನೆಲ್ಲ ಕ್ಯಾರೇ ಮಾಡದ ಅನ್ನಪೂರ್ಣ ಸ್ಟೇಜ್ ಹತ್ತಿ ಅಡಿಶನ್ ಕೊಟ್ಟಿದ್ದಾರೆ. ಅಜ್ಜಿ ಕಂಡು ನಕ್ಕವರು ನಕ್ಕೇ ಬಾಕಿಯಾದ್ರು, ಅಡಿಶನ್‌ಗೆ ಸೆಲೆಕ್ಟ್ ಆಗಿಲ್ಲ. ಆದರೆ ಅನ್ನಪೂರ್ಣ ಸೆಲೆಕ್ಟ್ ಆದರು. ಅಡಿಶನ್‌ನ ಎಲ್ಲ ಲೆವೆಲ್‌ನಲ್ಲೂ ಪಾಸ್ ಆಗಿ ಮೇನ್ ಸ್ಟೇಜ್ ಹತ್ತಿದರು. ಈ ಬಾರಿಯ ೩೨ ಮಂದಿ ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿ ಹರೆಯದ ಹುಡುಗರ ಜೊತೆಗೆ ಸ್ಪರ್ಧೆಗಿಳಿದರು.

ಗಂಡ ಇದ್ದಿದ್ರೆ ನಾನಿಲ್ಲಿ ಇರ್ತಿರಲಿಲ್ಲ!

ಈ ಅನ್ನಪೂರ್ಣ ಅವರ ಬಳಿ ಆಂಕರ್ ಅನುಶ್ರೀ ಕುಟುಂಬದ ಬಗ್ಗೆ ವಿಚಾರಿಸ್ತಾರೆ. ಆಗ ಈ ಅಜ್ಜಿ ಬಾಯಿಂದ ಬಂದ ಉತ್ತರಕ್ಕೆ ಎಲ್ಲ ಸ್ತಂಭೀಭೂತರಾಗುತ್ತಾರೆ. ಈ ಅಜ್ಜಿಯ ಗಂಡನಿಗೆ ಹೈ ಶುಗರ್ ಇತ್ತು. ಡಯಾಬಿಟೀಸ್ ವಿಪರೀತ ಏರಿದ ಪರಿಣಾಮ ಎರಡೂ ಕಾಲುಗಳನ್ನೂ ಕಟ್ ಮಾಡಬೇಕಾಗಿ ಬಂತು. ಆಮೇಲೆ ಇವರ ಪತಿ ಇದೇ ಸಮಸ್ಯೆಯಿಂದ ತೀರಿಕೊಂಡರು. ಬಹುಶಃ ಬೇರೆಯವರಾಗಿದ್ದರೆ ಗಂಡ ಹೋದ ಕೊರಗಿನಲ್ಲಿ ಜೀವನೋತ್ಸಾಹವೇ ಕಳೆದುಕೊಳ್ಳುತ್ತಿದ್ದರೋ ಏನೋ.. ಆದರೆ ಈ ಅನ್ನಪೂರ್ಣ ನಿಜಕ್ಕೂ ಛಲಗಾರ್ತಿ. ಗಂಡ ಹೋದ ಮೇಲೆ ಮತ್ತೆ ಚಿಗುರಿಕೊಂಡರು. ಮನೆಯಲ್ಲಿ ಹೇಗಾದ್ರೂ ಒಬ್ಬರೇ, ತಮ್ಮ ಹಳೆಯ ಹವ್ಯಾಸ ಡ್ಯಾನ್ಸ್ ಮಾಡೋದು, ಮನೆಯಲ್ಲಿ ಹಾಡು ಹಾಕ್ಕೊಂಡು ಡ್ಯಾನ್ಸ್ ಪ್ರಾಕ್ಟೀಸ್ ಶುರು ಮಾಡಿದ್ರು.

ಕನ್ನಡತಿ ನಟ ಹರ್ಷನನ್ನು ಸುಶಾಂತ್‌ಗೆ ಹೋಲಿಸಿದ ಫ್ಯಾನ್ಸ್ ...

ಆತ್ಮವಿಶ್ವಾಸದಲ್ಲೇ ಡ್ಯಾನ್ಸ್‌ ಕರ್ನಾಟಕ ಅಡಿಶನ್‌ನಲ್ಲೂ ಭಾಗವಹಿಸಿದರು. 'ಗಂಡ ಇದ್ರೆ ನಾನೀಗ ಇಲ್ಲಿಡ್ಯಾನ್ಸ್ ಮಾಡಕ್ಕಾಗ್ತಿರಲಿಲ್ಲ. ಯಾಕಂದ್ರೆ ಅವರನ್ನು ನೋಡಿಕೊಳ್ಳಬೇಕಾಗ್ತಿತ್ತು' ಅಂತ ಯಾವುದೇ ಭಾವನೆಯಿಲ್ಲದೇ ಹೇಳೋ ಅನ್ನಪೂರ್ಣ ಅವರಿಗೆ ಮಕ್ಕಳೂ ಇಲ್ಲ. ಮನೆಯಲ್ಲಿ ಒಂಟಿ ಜೀವ. ರೇಶನ್ ಮೂಲಕ, ಚಿಕ್ಕ ಮನೆ ಬಾಡಿಗೆ ಕೊಟ್ಟು ಅದರಲ್ಲಿ ಬಂದ ಹಣದಲ್ಲಿ ಇವರ ಖರ್ಚು ನಡೆಯುತ್ತೆ. ಆದರೆ ಈಗ ಈ ಅಜ್ಜಿಗೆ ಮನೆತುಂಬ ಮಕ್ಕಳು ಸಿಕ್ಕಿದ್ದಾರೆ, ಡ್ಯಾನ್ಸ್ ಕರ್ನಾಟಕದ ಉಳಿದೆಲ್ಲ ಸ್ಪರ್ಧಿಗಳನ್ನು ಈಕೆ ತನ್ನ ಮನೆ ಮಕ್ಕಳನ್ನಾಗಿ ಮಾಡಿಕೊಂಡಿದ್ದಾರೆ. ಅನ್ನಪೂರ್ಣ ಅವರ ಈ ಸಾಹಸವನ್ನು ಆಂಕರ್ ಅನುಶ್ರೀ ತನ್ನ ಇನ್‌ಸ್ಟಾ ಪೇಜ್‌ನಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಈ ಅಮ್ಮನ ಜೊತೆಗೆ ನಾನಿದ್ದೇನೆ ಎಂದಿದ್ದಾರೆ.

click me!