ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಿದ ವೈರಲ್‌ ವಿಡಿಯೋ; ಡೀಪ್‌ಫೇಕ್ ತಂತ್ರಜ್ಞಾನ ಎಂದರೇನು?

Published : Nov 06, 2023, 03:50 PM IST
ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಿದ ವೈರಲ್‌ ವಿಡಿಯೋ; ಡೀಪ್‌ಫೇಕ್ ತಂತ್ರಜ್ಞಾನ ಎಂದರೇನು?

ಸಾರಾಂಶ

ನಟಿ ರಶ್ಮಿಕಾ ಮಂದಣ್ಣ ನಕಲಿ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಎದೆ ಸೀಳು ತೋರಿಸುವಂತೆ ಬಟ್ಟೆ ಹಾಕಿರುವ ರಶ್ಮಿಕಾ ಲಿಫ್ಟ್‌ನಲ್ಲಿ ಹೋಗುವುದನ್ನು ತೋರಿಸುತ್ತದೆ. ವೈರಲ್ ಆಗ್ತಿರೋ ವಿಡಿಯೋ ತಂತ್ರಜ್ಞಾನದ ಬಳಕೆಯ ಬಗ್ಗೆ ಅನೇಕ ಪ್ರಮುಖ ಭಾರತೀಯ ವ್ಯಕ್ತಿಗಳನ್ನು ಚಿಂತೆಗೀಡು ಮಾಡಿದೆ. ಇಷ್ಟಕ್ಕೂ ಈ ನಕಲಿ ವಿಡಿಯೋ ಮಾಡಿರೋ ಡೀಪ್‌ಫೇಕ್ ತಂತ್ರಜ್ಞಾನ ಎಂದರೇನು?

ರಶ್ಮಿಕಾ ಮಂದಣ್ಣ ಸದ್ಯ ಸೂಪರ್‌ಸ್ಟಾರ್ ನಟಿ. ಹಲವು ಚಿತ್ರಗಳಲ್ಲಿ ನಟಿಸಿ ಹೊಸ ಹೊಸ ದೊಡ್ಡ ಪ್ರಾಜೆಕ್ಟ್‌ಗಳಿಗೆ ಸೈನ್ ಮಾಡುತ್ತಾ ಬಿಝಿಯಾಗಿದ್ದಾರೆ. ತಮ್ಮ ಅಟಿಡ್ಯೂಡ್‌, ಸ್ಟೇಟ್‌ಮೆಂಟ್‌, ಚೈಲ್ಡಿಶ್ ವರ್ತನೆಯಿಂದ ಆಗಾಗ ಟ್ರೋಲ್ ಆಗುತ್ತಲೂ ಇರುತ್ತಾರೆ. ಕನ್ನಡ ಸಿನಿಮಾದಲ್ಲಿ ನಟಿಸಿ ಎಲ್ಲಿ ಹೋದರೂ ಇತರ ಭಾಷೆಗಳಲ್ಲಿ ಮಾತನಾಡುವ ರಶ್ಮಿಕಾರನ್ನು ಕನ್ನಡಿಗರಂತೂ ಹಿಗ್ಗಾಮುಗ್ಗಾ ಬೈಯುತ್ತಿರುತ್ತಾರೆ. ಆದ್ರೆ ಸದ್ಯ ರಶ್ಮಿಕಾ ಸುದ್ದಿಯಲ್ಲಿರೋದು ಇಂಥಾ ಯಾವುದೇ ವಿಚಾರಕ್ಕಲ್ಲ. ಬದಲಿಗೆ ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ಎದೆ ಸೀಳು ತೋರಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಅದು ರಶ್ಮಿಕಾ ವಿಡಿಯೋ ಎಂದು ಹಂಚಿಕೊಂಡಿದ್ದರು. 

ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಇದು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆಯ ಬಗ್ಗೆ ಅನೇಕ ಪ್ರಮುಖ ಭಾರತೀಯ ವ್ಯಕ್ತಿಗಳನ್ನು ಚಿಂತೆಗೀಡು ಮಾಡಿದೆ. ಕಪ್ಪು ಬಟ್ಟೆ ಧರಿಸಿದ ಮಹಿಳೆಯೊಬ್ಬರು ಲಿಫ್ಟ್‌ಗೆ ಪ್ರವೇಶಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಮಹಿಳೆಯ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ನಟಿ ರಶ್ಮಿಕಾ ಮಂದನಾ ಅವರ ಮುಖವನ್ನು ಹೋಲುತ್ತದೆ. ವೀಡಿಯೋ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. 

Golden Dressನಲ್ಲಿ ಮಿಂಚಿದ Rashmika Mandanna: ಕಿರಿಕ್ ಬೆಡಗಿ ಪೋಸ್ ನೋಡಿ ಡವ್ ರಾಣಿ ಎಂದ ಫ್ಯಾನ್ಸ್‌!

ನಟಿ ರಶ್ಮಿಕಾ ಮಂದಣ್ಣ ಯಾಕೆ ಹೀಗೆ ಮಾಡಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದರು. ಆದರೆ, ಅದು ರಶ್ಮಿಕಾ ಮಂದಣ್ಣ ಅವರ ವಿಡಿಯೋ ಅಲ್ಲವೆಂದು ಈಗ ಗೊತ್ತಾಗಿದೆ. ಬದಲಿಗೆ ಅಭಿಷೇಕ್ ಅನ್ನುವವರು ಇದಕ್ಕೆ ಸಂಬಂಧಿಸಿ ಮೂಲ ವಿಡಿಯೋವನ್ನು ಪತ್ತೆ ಮಾಡಿ ಎರಡೂ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಗೆ ಅದು ರಶ್ಮಿಕಾದ್ದು ಅಲ್ಲ ಎಂಬುದು ಸಾಕ್ಷಿ ಸಮೇತ ಪ್ರೂವ್ ಆದಂತಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಝರಾ ಪಟೀಲ್ ಎನ್ನುವವರದ್ದು ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಝರಾ ಪಟೇಲ್ ಈ ವಿಡಿಯೋವನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಯಾರೋ ಕಿಡಿಕೇಡಿಗಳು ಆ ವಿಡಿಯೋಗೆ ರಶ್ಮಿಕಾ ತಲೆಯನ್ನು ಮಾಸ್ಕ್ ಮಾಡಿ ಹರಿಬಿಟ್ಟಿದ್ದರು. ಈ ಕಾರಣಕ್ಕೆ ಆ ವಿಡಿಯೋ ಮತ್ತಷ್ಟು ವೈರಲ್ ಆಗಿತ್ತು. ಸದ್ಯ ರಶ್ಮಿಕಾರದ್ದು ಡೀಪ್ ಫೇಕ್ ವೀಡಿಯೋ ಎಂಬುದು ತಿಳಿದುಬಂದಿದೆ.

ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದ ಅಮಿತಾಬ್‌
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಕೇಂದ್ರ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರ ಗಮನವನ್ನೂ ಸೆಳೆದಿದೆ. ನಟ ಅಮಿತಾಭ್ ಬಚ್ಚನ್ ಈ ಬಗ್ಗೆ ಮಾತನಾಡಿ, 'ಇದು ಮಹಾಪರಾಧ, ತಕ್ಷಣವೇ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಯಾರಿಗೂ ಅಪಮಾನ ಮಾಡಬಾರದು' ಎಂದಿದ್ದಾರೆ.

ವೈರಲ್‌ ಡೀಪ್‌ಫೇಕ್‌ ವಿಡಿಯೋ ಅಪಾಯಕಾರಿ ಎಂದ ರಾಜೀವ್ ಚಂದ್ರಶೇಖರ್‌
ಡೀಪ್‌ಫೇಕ್ ವಿಡಿಯೋ ಕುರಿತು ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್, 'ಇಂಥಾ ಅಪಾಯಕಾರಿ ಮತ್ತು ಹಾನಿಕಾರಕ ತಪ್ಪು ಮಾಹಿತಿಗಳನ್ನು ಈ ವೇದಿಕೆಗಳ ಮೂಲಕ ಎದುರಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಇಂಟರ್ನೆಟ್ ಬಳಸುವ ಎಲ್ಲಾ ಡಿಜಿಟಲ್‌ ನಾಗರಿಕರ ಸುರಕ್ಷತೆ ಮತ್ತು ವಿಶ್ವಾಸವನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ' ಎಂದಿದ್ದಾರೆ.

ವಿಜಯ್ ಜೊತೆಗಿದ್ದ ರಶ್ಮಿಕಾಗೆ ಗೇಟ್‌ ಪಾಸ್, ದೇವರಕೊಂಡಗೆ ಸಾಕ್ಷಿ ವೈದ್ಯ ಹೊಸ ಜೋಡಿ?

ಡೀಪ್‌ಫೇಕ್ ವಿಡಿಯೋ ಎಂದರೇನು?
ಡೀಪ್‌ಫೇಕ್ ಎನ್ನುವುದು ವೀಕ್ಷಕರನ್ನು ಮೋಸಗೊಳಿಸಲು ದೃಶ್ಯ ಮತ್ತು ಆಡಿಯೊ ವಿಷಯವನ್ನು ತಯಾರಿಸಲು AI ಮತ್ತು ಯಂತ್ರ ಕಲಿಕೆಯನ್ನು ಬಳಸುವ ತಂತ್ರಜ್ಞಾನವಾಗಿದೆ. ಇದು ನಿಜವಾದ ವೀಡಿಯೊದಂತೆಯೇ ಕಾಣುವ ಮತ್ತೊಂದು ಫೈಲ್‌ನ್ನು ತಯಾರಿಸುತ್ತದೆ. ತಂತ್ರಜ್ಞಾನವು ವ್ಯಕ್ತಿಯ ಮುಖವನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಅದನ್ನು ವೀಡಿಯೊ ಫೈಲ್‌ನಲ್ಲಿ ಮಾಸ್ಕ್ ಮಾಡುತ್ತದೆ. ಇದರಿಂದ ಅದೇ ವ್ಯಕ್ತಿಯಂತೆಯೇ ಕಾಣುವ ನಕಲಿ ವೀಡಿಯೋ ಸಿದ್ಧಗೊಳ್ಳುತ್ತದೆ. ಇದನ್ನು ಸುಲಭವಾಗಿ ಮತ್ತೊಬ್ಬರ ಮಾನ ಹಾನಿ ಮಾಡಲು ಬಳಸಬಹುದಾಗಿದೆ.

ತಂತ್ರಜ್ಞಾನವನ್ನು ಹಲವಾರು ಪ್ರಮುಖ ವೇದಿಕೆಗಳಿಂದ ನಿಷೇಧಿಸಲಾಗಿದೆ ಏಕೆಂದರೆ ಇದನ್ನು ಮಾನನಷ್ಟ ಅಥವಾ ತಪ್ಪು ಮಾಹಿತಿಯನ್ನು ಹರಡಲು ಬಳಸಬಹುದು. ಇಂತಹ ತಂತ್ರಜ್ಞಾನವನ್ನು ಸುಳ್ಳು ಉದ್ದೇಶದಿಂದ ಬಳಸಿದ ಹಲವಾರು ಘಟನೆಗಳು ನಡೆದಿದ್ದರೂ, ಭಾರತದಲ್ಲಿ ಇಂತಹ ಘಟನೆಗಳನ್ನು ಎದುರಿಸಲು ಯಾವುದೇ ಕಟ್ಟುನಿಟ್ಟಾದ ಕಾನೂನು ಮತ್ತು ನಿಯಂತ್ರಕ ಚೌಕಟ್ಟುಗಳಿಲ್ಲ.

ರಶ್ಮಿಕಾರದ್ದು ಡೀಪ್ ಫೇಕ್ ವೀಡಿಯೋ

ಇದು ಒರಿಜಿನಲ್ ವಿಡಿಯೋ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ
ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌