ನಷ್ಟದಲ್ಲಿ ಎಕ್ಸ್‌: ಹಳೆಯ ಟ್ವಿಟ್ಟರ್‌ ಹ್ಯಾಂಡಲ್‌ಗಳನ್ನೇ 50,000 ಡಾಲರ್‌ಗೆ ಮಾರಾಟ ಮಾಡ್ತಿರೋ ಎಲಾನ್‌ ಮಸ್ಕ್!

By BK Ashwin  |  First Published Nov 4, 2023, 3:23 PM IST

ಟ್ವಿಟ್ಟರ್‌ ಅನ್ನು ಖರೀದಿಸಿದ ನಂತರ, ಎಲಾನ್ ಮಸ್ಕ್‌ ನವೆಂಬರ್ 2022 ರ ಹೊತ್ತಿಗೆ ಹಳೆಯ ಬಳಕೆದಾರ ಹೆಸರುಗಳನ್ನು ಮಾರಾಟ ಮಾಡಲು ಯೋಜಿಸಿದ್ದರು.


ನವದೆಹಲಿ (ನವೆಂಬರ್ 4, 2023): ಎಲಾನ್ ಮಸ್ಕ್‌ ನೇತೃತ್ವದ ಎಕ್ಸ್ ( ಈ ಹಿಂದಿನ ಟ್ವಿಟ್ಟರ್‌)ನ ಮೌಲ್ಯ ಭಾರತದ ನಂ. 1 ಶ್ರಿಮಂತ ಖರೀದಿಸಿದ ದರಕ್ಕಿಂತ ಅರ್ಧದಷ್ಟು ಕುಸಿದಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಈ ಹಿನ್ನೆಲೆ ಈಗ ಹಳೆಯ ಟ್ವಿಟ್ಟರ್‌ ಹ್ಯಾಂಡಲ್‌ಗಳನ್ನು 50,000 ಡಾಲರ್‌ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ ಎಂದು ವರದಿಯಾಗಿದೆ. ಮೂಲತಃ ನೋಂದಾಯಿಸಿದ ಹಾಗೂ ಜನರು ಬಳಸದೆ ಉಳಿದಿರುವ ಖಾತೆಯ ಹೆಸರುಗಳನ್ನು ಮಾರಾಟ ಮಾಡಲು ಎಕ್ಸ್‌ ಒಳಗಿನ ಹ್ಯಾಂಡಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ.

ಕೆಲವು ಸಂದರ್ಭಗಳಲ್ಲಿ, ಖರೀದಿದಾರರು 50,000 ಡಾಲರ್‌ ಬೆಲೆಯನ್ನು ಉಲ್ಲೇಖಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಎಕ್ಸ್‌ನಲ್ಲಿನ ಪ್ರಸ್ತುತ ಉದ್ಯೋಗಿಗಳೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಫೋರ್ಬ್ಸ್‌ ವರದಿ ಮಾಡಿದೆ. @ಹ್ಯಾಂಡಲ್ ಮಾರ್ಗಸೂಚಿಗಳು, ಪ್ರಕ್ರಿಯೆ ಮತ್ತು ಶುಲ್ಕಗಳಿಗೆ ಅಪ್‌ಡೇಟ್‌ಗಳಿವೆ ಎಂದು ಇ ಮೇಲ್‌ನಲ್ಲಿ ತಿಳಿಸಲಾಗಿದೆ. 

Tap to resize

Latest Videos

ಇದನ್ನು ಓದಿ: ಸಿಂಗಲ್ಸ್‌ಗೆ ಸಿಹಿ ಸುದ್ದಿ: ಶೀಘ್ರದಲ್ಲೇ ಎಲಾನ್‌ ಮಸ್ಕ್‌ X ಆ್ಯಪ್‌ನಲ್ಲಿ ಡೇಟಿಂಗ್ ಕೂಡ ಮಾಡ್ಬೋದು!

ಟ್ವಿಟ್ಟರ್‌ ಅನ್ನು ಖರೀದಿಸಿದ ನಂತರ, ಎಲಾನ್ ಮಸ್ಕ್‌ ನವೆಂಬರ್ 2022 ರ ಹೊತ್ತಿಗೆ ಹಳೆಯ ಬಳಕೆದಾರ ಹೆಸರುಗಳನ್ನು ಮಾರಾಟ ಮಾಡಲು ಯೋಜಿಸಿದ್ದರು. ಟ್ವಿಟ್ಟರ್‌ ಸ್ವಾಧೀನಪಡಿಸಿಕೊಂಡ ಕೆಲವು ದಿನಗಳ ನಂತರ ಎಲಾನ್‌ ಮಸ್ಕ್‌ ಬಾಟ್‌ಗಳು ಮತ್ತು ಟ್ರೋಲ್‌ಗಳ ಮೂಲಕ ಅಪಾರ ಸಂಖ್ಯೆಯ ಹ್ಯಾಂಡಲ್‌ಗಳನ್ನು ತೆಗೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಮತ್ತು ಅವರು ಮುಂದಿನ ತಿಂಗಳು ಅವರನ್ನು ಮುಕ್ತಗೊಳಿಸುವುದನ್ನು ಪ್ರಾರಂಭಿಸಲು ಯೋಜಿಸಿದ್ದಾರೆ ಎಂದೂ ತಿಳಿದುಬಂದಿದೆ.

ಜನವರಿ 2023 ರ ಹೊತ್ತಿಗೆ, ಎಲಾನ್‌ ಮಸ್ಕ್ 150 ಕೋಟಿ ಬಳಕೆದಾರರ ಹೆಸರನ್ನು ಮುಕ್ತಗೊಳಿಸಲು ಯೋಜಿಸುತ್ತಿದ್ದಾರೆ ಮತ್ತು ಮೇ ತಿಂಗಳಿನಿಂದ X ವೆಬ್‌ಸೈಟ್‌ನಿಂದ ಈ ಖಾತೆಗಳನ್ನು ಶುದ್ಧೀಕರಿಸಲು ಪ್ರಾರಂಭಿಸಿದ್ದಾರೆ ಎಂದೂ ವರದಿಯಾಗಿದೆ. ಆದರೆ X ನ ಬಳಕೆದಾರ ಹೆಸರು ನೋಂದಣಿ ನೀತಿಯು ಈಗಲೂ ಸಹ ದುರದೃಷ್ಟವಶಾತ್, ನಾವು ಈ ಸಮಯದಲ್ಲಿ ನಿಷ್ಕ್ರಿಯ ಬಳಕೆದಾರರ ಹೆಸರುಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಿದೆ ಎಂದೂ ಫೋರ್ಬ್ಸ್ ಹೇಳಿದೆ. 

ಇದನ್ನೂ ಓದಿ: ಬಿಲಿಯನೇರ್‌ ಜಾರ್ಜ್ ಸೊರೋಸ್‌ ಮಾನವೀಯತೆಯನ್ನೇ ದ್ವೇಷಿಸುತ್ತಾರೆ: ಎಲಾನ್‌ ಮಸ್ಕ್‌ ಕಿಡಿ

X ನ ನಿಷ್ಕ್ರಿಯ ಖಾತೆ ನೀತಿ, ನಿಷ್ಕ್ರಿಯವೆಂದು ಪರಿಗಣಿಸುವುದನ್ನು ತಪ್ಪಿಸಲು ಪ್ರತಿ 30 ದಿನಗಳಿಗೊಮ್ಮೆ ಲಾಗ್ ಇನ್ ಮಾಡಲು ಬಳಕೆದಾರರನ್ನು ಎಚ್ಚರಿಸುತ್ತದೆ. ಆದರೂ, ಸಾಮಾಜಿಕ ಮಾಧ್ಯಮ ವೇದಿಕೆಯು ಸದ್ಯಕ್ಕೆ ನಿಷ್ಕ್ರಿಯ ಬಳಕೆದಾರ ಹೆಸರುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಉದ್ಯೋಗಿಗಳು ಹೇಳಿದ್ದಾರೆ.

ಇದನ್ನೂ ಓದಿ: ವಿಕಿಪೀಡಿಯಾ ತನ್ನ ಹೆಸರನ್ನು ಹೀಗೆ ಬದಲಾಯಿಸಿದ್ರೆ 1 ಬಿಲಿಯನ್ ಡಾಲರ್‌ ಕೊಡ್ತೀನಿ ಎಂದ ಎಲಾನ್‌ ಮಸ್ಕ್‌!

click me!