ಭಾರತದಲ್ಲಿ ಫೋಲ್ಡೇಬಲ್ ಫೋನ್ ಟ್ರೆಂಡ್, OPPOದಿಂದ FIND N3 Flip ಬಿಡುಗಡೆ!

By Suvarna News  |  First Published Nov 6, 2023, 1:55 PM IST

ಫೋಲ್ಡೇಬಲ್ ಫೋನ್ ಇದೀಗ ಆನ್‌ಲೈನ್ ಶಾಪಿಂಗ್, ಇ ಕಾಮರ್ಸ್‌ಗಳಲ್ಲಿ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಮಾರುಕಟ್ಟೆಗೆ ಮತ್ತೊಂದು ಪ್ರತಿಸ್ಪರ್ಧಿ ಫೋನ್ ಬಿಡುಗಡೆಯಾಗಿದೆ. ಒಪ್ಪೋ ಈ ಬಾರಿ FIND N3  ಫ್ಲಿಪ್ ಫೋನ್ ಬಿಡುಗಡೆ ಮಾಡಿದೆ. ಇದರ ಬೆಲೆ, ವಿಶೇಷ ಕುರಿತ ಮಾಹಿತಿ ಇಲ್ಲಿದೆ.


ಬೆಂಗಳೂರು(ನ.06) ಭಾರತದಲ್ಲಿ ಇದೀಗ ಫೋಲ್ಡೇಬಲ್ ಫೋನ್ ಭಾರಿ ಸಂಚಲನ ಸೃಷ್ಟಿಸುತ್ತಿದೆ.  OPPO ಇಂಡಿಯಾ ತನ್ನ ಹೊಚ್ಚಹೊಸ ಫೋಲ್ಡೇಬಲ್, FIND N3 Flip ಬಿಡುಗಡೆ ಮಾಡಿದೆ. ಇದರ ಬೆಲೆ 94,999 ರೂಪಾಯಿ. ಈ FIND N3 Flip ಕೇವಲ 198ಗ್ರಾಂ ತೂಕ ಹೊಂದಿದೆ ಮತ್ತು ಮಡಚಿದಾಗ ಕೇವಲ 8.55ಸೆಂ.ಮೀ. ಅಳತೆ ಹೊಂದಿದ್ದು ಯಾವುದೇ ಪರ್ಸ್ ಅಥವಾ ಪಾಕೆಟ್ ನಲ್ಲಿ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಈ ಸ್ಮಾರ್ಟ್ ಫೋನ್ ಫ್ಲಿಪ್ ಡಿವೈಸ್ ನಲ್ಲಿ ಉದ್ಯಮದ ಪ್ರಥಮ ಹ್ಯಾಸೆಲ್ ಬ್ಲಾಡ್-ಬೆಂಬಲಿತ ಟ್ರಿಪಲ್-ರಿಯರ್-ಕ್ಯಾಮರಾ ಸೆಟಪ್ ಹೊಂದಿದೆ. 

FIND N3 ಫ್ಲಿಪ್ ದೊಡ್ಡ 3.26-ಇಂಚು ಉದ್ದದ ಕವರ್ ಸ್ಕ್ರೀನ್ 17:9 ಆಸ್ಪೆಕ್ಟ್ ರೇಷಿಯೊ ಹೊಂದಿದೆ. ಶೇ.90ಕ್ಕೂ ಹೆಚ್ಚು ಆಂಡ್ರಾಯಿಡ್ ಆಪ್ ಗಳನ್ನು ವರ್ಟಿಕಲ್ ಓರಿಯೆಂಟೇಷನ್ ಗೆ ಗರಿಷ್ಠಗೊಳಿಸಲಾಗಿದೆ. ಇದರಿಂದ FIND N3 ಫ್ಲಿಪ್ 40+ ಆಪ್ ಗಳನ್ನು ಬೆಂಬಲಿಸುತ್ತದೆ, ಅದರಲ್ಲಿ ಜಿಮೇಲ್, ಔಟ್ ಲುಕ್, ಉಬರ್, ಎಕ್ಸ್(ಹಿಂದೆ ಟ್ವಿಟ್ಟರ್)ಮತ್ತು ಗೂಗಲ್ ಮ್ಯಾಪ್ಸ್ ಒಳಗೊಂಡಿದ್ದು ಅವುಗಳನ್ನು ನೇರವಾಗಿ ಈ ಡಿಸ್ಪ್ಲೇ ಮೂಲಕ ಬಳಸಬಹುದು. ಈ ಕವರ್ ಸ್ಕ್ರೀನ್ ಕ್ಯೂ.ಡಬ್ಲ್ಯೂ.ಇ.ಆರ್.ಟಿ.ವೈ. ಕೀಬೋರ್ಡ್ ಕೂಡಾ ಬೆಂಬಲಿಸುತ್ತಿದ್ದು ಇಮೇಲ್ ಗಳು ಮತ್ತು ತಕ್ಷಣದ ಮೆಸೇಜ್ ಗಳಿಗೆ ಪ್ರತಿಕ್ರಿಯಿಸಬಹುದು. ಇದನ್ನು 20 ಸ್ಟೈಲ್ ಗಳಿಗೆ ಮತ್ತು ಮೆಸೇಜಸ್, ಕ್ಯಾಮರಾ, ಬ್ಯಾಟರಿ, ರೆಕಾರ್ಡರ್, ಟೈಮರ್ ಮತ್ತು ಟು-ಡೂಸ್ ಒಳಗೊಂಡು ಮೂರು ತ್ವರಿತ ಬಳಕೆಯ ವಿಡ್ಜೆಟ್ ಗಳಿಗೆ ಕಸ್ಟಮೈಸ್ ಮಾಡಬಹುದು. 

Tap to resize

Latest Videos

undefined

ಒಂದೇ ವ್ಯಾಟ್ಸ್ಆ್ಯಪ್ ಖಾತೆಯಲ್ಲಿ ಎರಡೆರಡು ಪ್ರೊಫೈಲ್, ಡಿಪಿ, ಹೆಸರು ಬಳಸಲು ಅವಕಾಶ!

OPPO ಸ್ಮಾರ್ಟ್ ಫೋನ್ ನ ಎಡ ಅಂಚಿಗೆ ಅಲರ್ಟ್ ಸ್ಲೈಡರ್ ಕೂಡಾ ಸೇರಿಸಿದೆ. ಈ ಯಾಂತ್ರಿಕ ನಿಯಂತ್ರಣವು ಸೈಲೆಂಟ್, ವೈಬ್ರೇಟ್ ಮತ್ತು ರಿಂಗ್ ಮೋಡ್ ಗಳನ್ನು FIND N3 ಫ್ಲಿಪ್ ತೆರೆಯದೇ ಬದಲಾಯಿಸಬಹುದು. ಇತರೆ ಅಪ್ ಗ್ರೇಡ್ ಗಳಲ್ಲಿ ಫ್ಲಾಗ್ ಶಿಪ್-ಗ್ರೇಡ್ 4ಎನ್ಎಂ ಮೀಡಿಯಾಟೆಕ್ ನ ಡೈಮೆನ್ಸಿಟಿ 9200 ಚಿಪ್ ಸೆಟ್ OPPOದ 44ಡಬ್ಲ್ಯೂ ಸೂಪರ್ ವೂಕ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲ ಹೊಂದಿದ್ದು 4300ಎಂಎಎಚ್ ಬ್ಯಾಟರಿ ಫ್ಲಿಪ್ ಫೋನ್ ನಲ್ಲಿಯೇ ಅತ್ಯಂತ ದೊಡ್ಡದಾಗಿದೆ. 

ತನ್ನ ಹೊಚ್ಚಹೊಸ ಫೈಂಡ್ ಸೇರ್ಪಡೆ ಕುರಿತು OPPO ಇಂಡಿಯಾದ ಚೀಫ್ ಮಾರ್ಕೆಟಿಂಗ್ ಆಫೀಸರ್ ದಮ್ಯಂತ್ ಸಿಂಗ್ ಖನೋರಿಯಾ, “ಈ ವರ್ಷ ಫೈಂಡ್ ಎನ್2 ಫ್ಲಿಪ್ ಯಶಸ್ಸಿನ ನಂತರ ನಾವು ನಮ್ಮ ಹೊಚ್ಚಹೊಸ ಫ್ಲಿಪ್ FIND N3 ಫ್ಲಿಪ್ ಬಿಡುಗಡೆ ಮಾಡಲು ಬಹಳ ಉತ್ಸುಕರಾಗಿದ್ದೇವೆ. ಈ ಹೊಸ ಪುನರಾವರ್ತನೆಯು ಫೈಂಡ್ ಎನ್2 Flip ನ ವಿಜೇತ ಸೂತ್ರವನ್ನು ಸುಧಾರಿಸಿದ್ದು ಕವರ್ ಸ್ಕ್ರೀನ್ ಕಾರ್ಯಕ್ಷಮತೆ, ಕ್ಯಾಮರಾ ಅನುಭವ ಮತ್ತು ಕಾರ್ಯಕ್ಷಮತೆಯಲ್ಲಿ ಅಪ್ ಗ್ರೇಡ್ ನೀಡುತ್ತದೆ. ಇತರರು ಇನ್ನೂ ಪ್ರಯತ್ನಿಸುತ್ತಿರುವಾಗಲೇ ನಾವು ಈ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ರೂಪಿಸಿದ್ದೇವೆ. ನಮ್ಮ ಹೊಚ್ಚಹೊಸ ಫ್ಲಿಪ್ ಶ್ರೀಮಂತ ವಿಶೇಷತೆಗಳ ಗುಚ್ಛವನ್ನು ಸೊಗಸಾದ, ಕಿರಿದಾದ ವಿನ್ಯಾಸದಲ್ಲಿ ತಂದಿದ್ದು ಸರಿಸಾಟಿ ಇರದ ವೈವಿಧ್ಯತೆ ನೀಡುತ್ತದೆ. ಅಂತಹ ಅಸಾಧಾರಣ ವಿಶೇಷತೆಗಳು ಮತ್ತು ಆಕರ್ಷಕ ನೋಟಗಳಿಂದ OPPO FIND N3 ಫ್ಲಿಪ್ #ಮೇಡ್ ಟು ಬಿ ಐಕಾನಿಕ್’ ಆಗಿದೆ” ಎಂದರು. 

ಸ್ಟೈಲಿಷ್ ಪಾಕೆಟ್ ಗಾತ್ರದ ವಿನ್ಯಾಸ
FIND N3 ಫ್ಲಿಪ್ ನಲ್ಲಿ ನೀರಿನ ಹನಿಯ ಆಕಾರದ ಫ್ಲೆಕ್ಸಿಯಾನ್ ಹಿಂಜ್ ಅನ್ನು ಸ್ಮಾರ್ಟ್ ಫೋನ್ ನ ಮುಖ್ಯವಾದ ಫೋಲ್ಡಬಲ್ ಡಿಸ್ಪ್ಲೇಯಲ್ಲಿ ಅತ್ಯಂತ ಅಗೋಚರ ರೀತಿಯಲ್ಲಿ ರೂಪಿಸಲಾಗಿದೆ. OPPO ವಿಮಾನದ ಗುಣಮಟ್ಟದ ಉನ್ನತ ಶಕ್ತಿಯ ಉಕ್ಕನ್ನು ಕಠಿಣ ಭಾರ ಬೀಳುವ ಸ್ಥಳಗಳಲ್ಲಿ ಬಳಸುವ ಮೂಲಕ ಬೀಳುವುದರಿಂದ ಆಕಾರ ಕೆಡುವುದರಿಂದ ತಡೆಯುತ್ತದೆ, ಇದರಿಂದ ಫೈಂಡ್ ಎನ್2 ಫ್ಲಿಪ್ ಗೆ ಹೋಲಿಸಿದರೆ ಶೇ.25ರಷ್ಟು ಸುಧಾರಣೆ ನೀಡುತ್ತದೆ. ಈ ಅಪ್ ಗ್ರೇಡ್ ಆದ ಫ್ಲೆಕ್ಸಿಯಾನ್ ಹಿಂಜ್ ಅನ್ನು ಡ್ಯುಯಲ್ ಫ್ರಿಕ್ಷನ್-ಪ್ಲೇಟ್ ರಚನೆಯೊಂದಿಗೆ ಉನ್ನತೀಕರಿಸಲಾಗಿದ್ದು ಫೈಂಡ್ ಎನ್2 ಫ್ಲಿಪ್ ಗೆ ಹೋಲಿಸಿದರೆ ಸುಧಾರಿತ ಫ್ಲೆಕ್ಸಿಫಾರ್ಮ್ ಸ್ಥಿರತೆ ಹೊಂದಿದ್ದು ಇದನ್ನು ಬಳಕೆದಾರರಿಗೆ ಅವರ ಆದ್ಯತೆ ವೀಕ್ಷಣೆಯ ನೋಟ ಕಂಡುಕೊಳ್ಳಲು ಪ್ರಯತ್ನರಹಿತವಾಗಿ ನೆರವಾಗುತ್ತದೆ. 

ಐಫೋನ್ 14 ಖರೀದಿಗೆ ಭರ್ಜರಿ ಆಫರ್, ಬರೋಬ್ಬರಿ 29 ಸಾವಿರ ರೂ ಕಡಿತ!

ಇದರ ದೀರ್ಘಬಾಳಿಕೆಗೆ ಸಾಕ್ಷಿಯಾಗಿ FIND N3 ಫ್ಲಿಪ್ ಅನ್ನು ಮೂರನೇ ಪಕ್ಷದ ಟಿಯುವಿ ರೀನ್ ಲ್ಯಾಂಡ್  ಪ್ರಮಾಣೀಕರಿಸಿದ್ದು 6,00,000 ಮಡಚುಗಳು ಮತ್ತು ತೆರೆಯುವುದನ್ನು ತಡೆಯುತ್ತದೆ ಅಂದರೆ 16+ ವರ್ಷಗಳ ಬಳಕೆಯಾಗಿದ್ದು ಈ ಡಿವೈಸ್ ಅನ್ನು ದಿನಕ್ಕೆ 100 ಬಾರಿ ತೆರೆದು ಮುಚ್ಚಬಹುದು. ಡಿವೈಸ್ ಮುಚ್ಚಿದಾಗ ಲೋಹದ ಹಿಂಜ್ ನೀರಿನ ಅಲೆಗಳ ಮಿನುಗುವುದನ್ನು ನೆನಪಿಸುತ್ತದೆ; ಈ ಸೌಂದರ್ಯವನ್ನು ಅದರ ಮೇಲ್ಮೈಯನ್ನು ಸೂಕ್ಷ್ಮ ರಚನೆ ಸೃಷ್ಟಿಸಲು 12,000 ಬಾರಿ ಕುಸುರಿ ಮಾಡುವ ಮೂಲಕ ಸಾಧಿಸಲಾಗಿದೆ.
 
FIND N3 ಫ್ಲಿಪ್ ನ ಪ್ರಮುಖ 6.8-ಇಂಚು ಪಿಪಿಐ ಡಿಸ್ಪ್ಲೇ ಈಗ ಟಿಯುವಿ ರೀನ್ ಲ್ಯಾಂಡ್ ಇಂಟೆಲಿಜೆಂಟ್ ಐ ಕೇರ್ ಪ್ರಮಾಣೀಕರಣ ಹೊಂದಿದ್ದು ಅದಕ್ಕೆ 1440 ಹರ್ಟ್ಸ್ ಪಿಡಬ್ಲ್ಯೂಎಂ ಡಿಮ್ಮಿಂಗ್ ಮತ್ತು ಬೆಡ್ ಟೈಮ್ ಮೋಡ್ ಕಾರಣವಾಗಿದ್ದು ಅದನ್ನು ಕಣ್ಣುಗಳನ್ನು ರಕ್ಷಿಸಲು, ವೀಕ್ಷಣೆಯ ಆಯಾಸ ಕಡಿಮೆ ಮಾಡಲು ಮತ್ತು ನಿದ್ರೆ ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. 

ಈ ಫೋಲ್ಡಬಲ್ ಸ್ಮಾರ್ಟ್ ಫೋನ್ ಎಚ್.ಡಿ.ಆರ್. ಕಂಟೆಂಟ್ ಗೆ 1600 ನಿಟ್ಸ್ ಗರಿಷ್ಠ ಬೆಳಕು, ನೇರ ಬಿಸಿಲಿನಲ್ಲಿ 1200 ನಿಟ್ಸ್ ಬೆಳಕು ಮತ್ತು ಮೃದುವಾದ ಸ್ಕ್ರೋಲಿಂಗ್ ಗೆ 120 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿದೆ. ಈ ಡಿಸ್ಪ್ಲೇ OPPOದ ಪ್ರೊಕ್ಸ್ ಡಿಆರ್ ತಂತ್ರಜ್ಞಾನವನ್ನು ಕೂಡಾ ಹೊಂದಿದ್ದು 8 ಎಕ್ಸ್ ಹೆಚ್ಚಿನ ಡೈನಮಿಕ್ ಶ್ರೇಣಿ ಮತ್ತು ಹೆಚ್ಚು ನಾಟಕೀಯ ದೃಶ್ಯ ಪರಿಣಾಮ ನೀಡುತ್ತದೆ. 

ಟ್ರಿಪಲ್-ಕ್ಯಾಮರಾ ಇನ್ನೊವೇಷನ್ ಪ್ರವರ್ತಕ
FIND N3 ಫ್ಲಿಪ್ ನಲ್ಲಿ 50ಎಂಪಿ ಮೈನ್ ಕ್ಯಾಮರಾ ಒಳಗೊಂಡು ಮೂರು ಶಕ್ತಿಯುತ ರಿಯರ್ ಕ್ಯಾಮರಾಗಳಿದ್ದು ಹೊಸ 48ಎಂಪಿ ವೈಡ್-ಆಂಗಲ್ ಕ್ಯಾಮರಾ ಮತ್ತು 32ಎಂಪಿ ಟೆಲಿಫೋಟೋ ಕ್ಯಾಮರಾ ಒಳಗೊಂಡಿದೆ. 50ಎಂಪಿ ವೈಡ್-ಆಂಗಲ್ ಪ್ರೈಮರಿ ಕ್ಯಾಮರಾ ಒಐಎಸ್ ನೊಂದಿಗೆ ಬರುತ್ತದೆ ಮತ್ತು ದೊಡ್ಡ 1/1.56-ಇಂಚು ಸೋನಿ ಐಎಂಎಕ್ಸ್890 ಸೆನ್ಸರ್ ಅನ್ನು ಕಡಿಮೆ ಬೆಳಕಿನ ಪರಿಸರಗಳಲ್ಲಿ ಹೆಚ್ಚಿನ ಬೆಳಕು ತೆಗೆದುಕೊಳ್ಳಲು ಹೊಂದಿದೆ.
32ಎಂಪಿ ಪೋರ್ಟ್ರೈಟ್ ಕ್ಯಾಮರಾ ತನ್ನ 47ಎಂಎಂ ಸಮಾನ ಫೋಕಲ್ ಲೆಂಥ್ ಹೊಂದಿದ್ದು ಇದು ಸೋನಿ ಐಎಂಎಕ್ಸ್709 ಆರ್.ಬಿ.ಡಿ.ಡಬ್ಲ್ಯೂ ಸೆನ್ಸರ್ ಮತ್ತು 2ಎಕ್ಸ್ ಆಪ್ಟಿಕಲ್ ಝೂಮ್ ಇದ್ದು ಇದು ಫ್ಲಿಪ್ ಫೋನ್ ಅನ್ನು ಟೆಲಿಫೋಟೋ ಲೆನ್ಸ್ ಮತ್ತು ಅದ್ಭುತ ಕಡಿಮೆ ಬೆಳಕಿನ ಸಾಮರ್ಥ್ಯಗಳನ್ನು ಹೊಂದಿದೆ. ಇದು ಉನ್ನತ ರೆಸೊಲ್ಯೂಷನ್ ಪೋರ್ಟ್ರೈಟ್ ಫೋಟೋಗ್ರಫಿ ಹೊಂದಿದ್ದು ನೈಜ ಬ್ಯಾಕ್ ಗ್ರೌಂಡ್ ಬ್ಲರ್ ಪರಿಣಾಮಗಳು(ಬೊಕೇ) ಹೊಂದಿದೆ. ಅದಕ್ಕೆ ಹ್ಯಾಸೆಲ್ ಬ್ಲಾಡ್ ಎಕ್ಸ್.ಸಿ.ಡಿ65 ಪೋರ್ಟ್ರೈಟ್ ಲೆನ್ಸ್ ಔಟ್ ಪುಟ್ ಅನ್ನು ಅನುಕರಿಸುವ ಪೋರ್ಟ್ರೈಟ್ ಆಲ್ಗಾರಿದಂಗಳನ್ನು ಹೊಂದಿದೆ. 
 

click me!