ಐಟಿ ನಿಯಮ ಪಾಲಿಸದೆ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್‌!

By Suvarna News  |  First Published Jun 16, 2021, 1:07 PM IST

* ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್‌ 

* ಭಾರತದಲ್ಲಿ ‘ಮಧ್ಯವರ್ತಿ ಮಾಧ್ಯಮ ಸ್ಥಾನಮಾನ’ ಕಳೆದುಕೊಂಡ ಟ್ವಿಟರ್

* ಇನ್ಮುಂದೆ ಟ್ವಿಟರ್‌ಗೆ ಭಾರತದಲ್ಲಿ ಕಾನೂನು ರಕ್ಷಣೆ ಸಿಗುವುದಿಲ್ಲ


ನವದೆಹಲಿ(ಜೂ.16): ಹೊಸ ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಟ್ವಿಟರ್‌ ಭಾರತದಲ್ಲಿ ‘ಮಧ್ಯವರ್ತಿ ಮಾಧ್ಯಮ ಸ್ಥಾನಮಾನ’ ಕಳೆದುಕೊಂಡಿದೆ. ಅಂದರೆ ಇನ್ಮುಂದೆ ಟ್ವಿಟರ್‌ಗೆ ಭಾರತದಲ್ಲಿ ಕಾನೂನು ರಕ್ಷಣೆ ಸಿಗುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಹೌದು ಕೊಟ್ಟ ಅವಧಿಯೊಳಗೆ ಸರ್ಕಾರದ ನಿಯಮಗಳಿಗೆ ಬದ್ಧತೆ ತೋರದಿದ್ದರೆ  ಟ್ವಿಟರ್‌ನ್ನು ಬಳಕೆದಾರರ ವಿಷಯಗಳನ್ನು ಅಥವಾ ಸಂದೇಶಗಳನ್ನು ಪ್ರಕಟಿಸುವ ಒಂದು ಮಧ್ಯವರ್ತಿಯಾಗಿ ಪರಿಗಣಿಸಲಾಗುವುದಿಲ್ಲ. ಬಳಕೆದಾರರು ಪ್ರಕಟಿಸುವ ಎಲ್ಲಾ ಪೋಸ್ಟ್‌ಗಳಿಗೆ ಖುದ್ದು ಟ್ವಿಟರ್ ಹೊಣೆಗಾರನಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ. 

Tap to resize

Latest Videos

undefined

ಕೇಂದ್ರದ ಕಡೇ ಎಚ್ಚರಿಕೆಗೆ ಸೈಲೆಂಟ್‌ ಆದ ಟ್ವಿಟರ್, ಅಧಿಕಾರಿ ನೇಮಿಸಿದ ಫೇಸ್‌ಬುಕ್!

Twitter has lost its status as intermediary platform in India due to non-compliance with new IT rules. This means instead of being considered just a platform hosting content from various users, Twitter will be directly editorially responsible for posts published on its platform.

— ANI (@ANI)

ಭಾರತದಲ್ಲಿನ ನೂತನ ಐಟಿ ನಿಯಮವನ್ನು ಟ್ವಿಟರ್ ಸಂಸ್ಥೆ ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿತ್ತು. ಆದರೆ ಟ್ವಿಟರ್ ಕೇಂದ್ರದ ನೂತನ ಐಟಿ ನಿಯಮಕ್ಕೆ ಸಡ್ಡು ಹೊಡೆದಿತ್ತು. ಅಲ್ಲದೇ ಭಾರತದ ನೂತನ ಐಟಿ ಕಾಯ್ದೆಯನ್ನು ಅನುಸರಿಸುವುದಾಗಿ ಹೇಳಿತ್ತಾದರೂ, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂಬುವುದು ಉಲ್ಲೇಖನೀಯ.

ದೇಶದಲ್ಲಿರುವ ಕಂಪನಿ ಭಾರತದ ನಿಯಮ ಪಾಲಿಸಬೇಕು, ಅಮೆರಿಕದ್ದಲ್ಲ; RS ಪ್ರಸಾದ್!

ಕೇಂದ್ರಕ್ಕೆ ಮಣಿದ ಟ್ವಿಟರ್:

ಕೇಂದ್ರ ಸರ್ಕಾರ ಕಠಿನ ಕ್ರಮಕ್ಕೆ ಮುಂದಾದ ಬೆನ್ನಲ್ಲೇ ಟ್ವಿಟರ್ ಸಂಸ್ಥೆ ದೇಶದ ನೂತನ ಐಟಿ ನಿಮಯದ ಪ್ರಕಾರ ನೂತನ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ತಿಳಿಸಿದೆ. ನಾವು ಕಾನೂನಿನಂತೆ ಪ್ರತಿಯೊಂದು ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ನಾವು ಕೈಗೊಂಡ ಕ್ರಮದ ಬಗ್ಗೆ ಶೀಘ್ರವೇ ಸಚಿವಾಲಯದ ಜತೆ ಮಾಹಿತಿ ಹಂಚಿಕೊಳ್ಳುವುದಾಗಿ ಟ್ವಿಟರ್ ವಕ್ತಾರ ತಿಳಿಸಿದ್ದಾರೆ.

click me!