ಬೆಂಗಳೂರು(ಜೂ.15): ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಮಾಡಿರುವ ಜಿಯೋ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದೆ. ಇದೆ ಮೊದಲ ಬಾರಿಗೆ ಪೋಸ್ಟ್ ಪೇಡ್ ಜಿಯೋ ಫೈಬರ್ ಸೇವೆಯನ್ನು ಆರಂಭಿಸಿದೆ. ಶೂನ್ಯ ಮುಂಗಡ ಪ್ರವೇಶ ವೆಚ್ಚ (ಇಂಟರ್ನೆಟ್ ಬಾಕ್ಸ್‌ಗೆ ಯಾವುದೇ ಭದ್ರತಾ ಠೇವಣಿ ಇಲ್ಲ ಮತ್ತು ಇನ್ಸ್ಟಲೇಷನ್ ಗೆ ಯಾವುದೇ ಶುಲ್ಕಗಳಿಲ್ಲ) ಇಲ್ಲದೇ ಸೇವೆಯನ್ನು ಪಡೆಯಬಹುದಾಗಿದೆ. ಇದರಿಂದ ಗ್ರಾಹಕರು ರೂ.1,500 ಉಳಿತಾಯ ಮಾಡಬಹುದು.
ಸಂಗೀತ ಮತ್ತು ಆಡಿಯೊ ಮನರಂಜನೆ ಜಿಯೋ ಸಾವನ್ ಟಿವಿ ಬಿಡುಗಡೆ!.
undefined
ಪ್ರತಿ ತಿಂಗಳಿಗೆ ರೂ. 399 ಗಳಿಂದ ಪ್ರಾರಂಭವಾಗುವ ಯೋಜನೆಗಳು ಮಾರುಕಟ್ಟಯಲ್ಲೇ ಅತಿ ಕಡಿಮೆ ಶುಲ್ಕವಾಗಿದೆ. 6 ಮತ್ತು 12 ತಿಂಗಳ ಯೋಜನೆ ಆಯ್ಕೆಗಳನ್ನು ಆಯ್ಕೆ ಮಾಡಬಹುದಾಗಿದೆ. ಅಲ್ಲದೇ ಸಿಮೆಟ್ರಿಕ್ ಯೋಜನೆಗಳು (ಡೌನ್‌ಲೋಡ್ ವೇಗ = ಅಪ್‌ಲೋಡ್ ವೇಗ) ದೊರೆಯಲಿದೆ.
ಸೆಟ್ ಟಾಪ್ ಬಾಕ್ಸ್ ಗಾಗಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 4K ಸೆಟ್ ಟಾಪ್ ಬಾಕ್ಸ್ ಒಟಿಟಿ ಅಪ್ಲಿಕೇಶನ್‌ಗಳಿಗೆ ರೂ.1,000 ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ನೀಡಬೇಕಾಗಿದೆ.ರೂ. 999 ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಯನ್ನು ಪಡೆದರೆ ಸುಮಾರು 15 ಪಾವತಿಸಿದ ಒಟಿಟಿ ಅಪ್ಲಿಕೇಶನ್‌ಗಳಾದ ಸನ್‌ನೆಕ್ಸ್ಟ್, ಹೋಯ್‌ಚಾಯ್, ಇತ್ಯಾದಿ ವೇದಿಕೆಗಳನ್ನು ಬಳಕೆ ಮಾಡಬಹುದಾಗಿದೆ.
ಜಿಯೋ ಜೊತೆ ಸೇರಿ ಕೈಗೆಟುಕವ ದರದಲ್ಲಿ ಬರುತ್ತಿದೆ ಗೂಗಲ್ ಸ್ಮಾರ್ಟ್‌ಫೋನ್!
ರೀಚಾರ್ಜ್ ಮಾಡದಿದ್ದರೂ ಯಾವುದೇ ಸೇವಾ ಅಡೆತಡೆಗಳಿಲ್ಲದೆ 24 * 7 * 365 ಸಂಪರ್ಕದಲ್ಲಿ ಇರಬಹುದಾಗಿದೆ. 99.9% ಅತ್ಯುನ್ನತ ಗುಣಮಟ್ಟದ ಸೇವೆ ಯಾವುದೇ ಕಿರಿ ಕಿರಿ ಇಲ್ಲದ ಸ್ವಯಂ ಪಾವತಿ ಸೌಲಭ್ಯವು ದೊರೆಯಲಿದೆ.