ಟಿಕ್ ಟಾಕ್ ಬಳಕೆದಾರರಿಗೆ ಆಘಾತ, ಪ್ಲೇ ಸ್ಟೋರ್ ಚೆಕ್ ಮಾಡ್ಕೊಳ್ಳಿ!

By Web DeskFirst Published Apr 17, 2019, 10:05 PM IST
Highlights

ಮಕ್ಕಳ ಅಶ್ಲೀಲ ಚಿತ್ರಕ್ಕೆ ಪಚ್ರೋದನೆ ನೀಡುತ್ತಿರುವ ಆರೋಪ ಎದಿರಿಸುತ್ತಿದ್ದ  ಚೈನಾ ಮೂಲದ ಟಿಕ್ ಟಾಕ್ ಆಪ್ ಗೆ ಬಹುತೇಕ ಜಾಗ ಖಾಲಿಯಾಗದೆ.

ಬೆಂಗಳೂರು[ಏ. 17]  ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುವ ಚೀನಾ ಮೂಲದ ವಿಡಿಯೋ ಆಪ್ ಟಿಕ್ ಟಾಕ್ ನ್ನು ಬ್ಯಾನ್ ಮಾಡಲು ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಈಗ ಗೂಗಲ್ ಪ್ಲೇ ಸ್ಟೋರ್ ಆ್ಯಪ್ ಡೌನ್ ಲೋಡ್ ಅವಕಾಶ ತೆಗೆದುಹಾಕಿದೆ. ಇನ್ನು ಮುಂದೆ ಹೊಸದಾಗಿ ಟಿಕ್ ಟಾಕ್ ಡೌನ್ ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ.

ಟಿಕ್ ಟಾಕ್ ಬ್ಯಾನ್‌ ಕೂಗು ಹುಟ್ಟಿಕೊಂಡಿದ್ದೆಲ್ಲಿ?

ಟಿಕ್ ಟಾಕ್ ಆಪ್ ಮೂಲಕ ವಿಶೇಷ ವಿಡಿಯೋಗಳನ್ನು ಶೇರ್ ಮಾಡಬಹುದಾಗಿದ್ದು, ಭಾರತದಲ್ಲಿ ಸುಮಾರು 54 ಮಿಲಿಯನ್ ಬಳಕೆದಾರರಿದ್ದಾರೆ ಎಂದು ಅಂದಾಜಿಲಾಗಿತ್ತು. 

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದಂತೆ ಗೂಗಲ್ ನಡೆದುಕೊಂಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಂಪೂರ್ಣ ನಿಷೇಧ ವಿಚಾರ ಏಪ್ರಿಲ್ 21 ರಂದು ವಿಚಾರಣೆಗೆ ಬರಲಿದೆ. 

click me!