Huawei P30 Pro ಹವಾಕ್ಕೆ ಮೊಬೈಲ್ ಪ್ರಿಯರು ಫಿದಾ! ಹೇಗಿದೆ? ಬೆಲೆ ಎಷ್ಟಿದೆ?

By Web Desk  |  First Published Apr 16, 2019, 6:12 PM IST

ಭಾರತ ಮೊಬೈಲ್ ತಯಾರಕರಿಗೆ ಬಹಳ ಪ್ರಮುಖವಾದ ಮಾರುಕಟ್ಟೆ. ಕೋಟ್ಯಾಂತರ ಗ್ರಾಹಕರ ಆಯ್ಕೆಯೂ ವಿಭಿನ್ನ. ಬ್ರಾಂಡ್, ಫೀಚರ್ಸ್, ಸ್ಪೆಸಿಫಿಕೆಶನ್ಸ್ ಹಾಗೂ ಬೆಲೆ ಆಧಾರದಲ್ಲಿ ಗ್ರಾಹಕರಿಗೆ ಹೊಸ ಹೊಸ ಆಯ್ಕೆ ನೀಡುವುದು ಅನಿವಾರ್ಯ. Huaweiನ P ಶ್ರೇಣಿಗೆ ಹೊಸದೊಂದು ಸೇರ್ಪಡೆಯಾಗಿದೆ.     


ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ದೈತ್ಯ Huawei ಕಂಪನಿಯು, ಇತರ ಮೊಬೈಲ್ ತಯಾರಕ ಕಂಪನಿಗಳಿಗೆ ಸೆಡ್ಡು ಹೊಡೆಯುವಂತೆ ವಿನೂತನ ಮಾಡೆಲ್ ಗಳನ್ನು ಹೊರತರುತ್ತಿದೆ.  Huaweiನ ಮಹಾತ್ವಾಕಾಂಕ್ಷಿ ಮಾಡೆಲ್ ಇದೀಗ ಭಾರತೀಯ ಮೊಬೈಲ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೈ-ಎಂಡ್ ಮೊಬೈಲ್ ಗಳ ಪೈಕಿ ಆ್ಯಪಲ್ ಗೆ ಪೈಪೋಟಿ ನೀಡುವ ಗುರಿ Huaweiಯದ್ದು. Huaweiನ P ಶ್ರೇಣಿಯ ಫೋನ್ ಗಳೆಂದರೆ ಫೋಟೋಗ್ರಾಫಿ ಎಂದರ್ಥ! ಈ ಹಿಂದೆ P10 ಮತ್ತು P20 ಫೋನ್ ಗಳು ಮೊಬೈಲ್ ಪ್ರಿಯರ ಮೆಚ್ಚುಗೆ ಪಡೆದಿತ್ತು.  ಈಗ P30 Pro ತನ್ನ 5X ಆಪ್ಟಿಕಲ್ ಜೂಮ್ ಸಾಮರ್ಥ್ಯದ ಕಾರಣದಿಂದಾಗಿ ಇತರೆಲ್ಲವನ್ನೂ ಹಿಂದೆ ಹಾಕಿದೆ.

Tap to resize

Latest Videos

ಇದನ್ನೂ ಓದಿ: ಫಾರ್ವರ್ಡ್‌ ಮೆಸೇಜ್‌ಗೂ ವಾಟ್ಸಾಪ್‌ ಕಡಿವಾಣ: ಅಡ್ಮಿನ್ ಗೆ ಹೊಸ ಅಧಿಕಾರ!

ಬರೇ 192 ಗ್ರಾಂ ತೂಗುವ ಈ ಫೋನಿನ ಇತರ ಫೀಚರ್ ಗಳು ಹೀಗಿವೆ... 

Performance: Octa core
Display:    6.47" (16.43 cm)
Storage:    256 GB
Camera:   40MP + 20MP + 8MP
Battery:    4200 mAh
RAM:       8 GB
ಬೆಲೆ:          ₹ 71,990

ಇದನ್ನೂ ಓದಿ: ಎಚ್ಚರ! Facebookನಲ್ಲಿ ರಾಜಕೀಯ ಲೇಖನ ಬರೆಯುವ ಮುನ್ನ ಇದನ್ನು ತಪ್ಪದೇ ಓದಿ!

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!