ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಹೊಸ ಮೈಲಿಗಲ್ಲು

By Web DeskFirst Published Apr 16, 2019, 4:21 PM IST
Highlights

ಅತೀ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಟೆಲಿಕಾಂ ಕ್ಷೇತ್ರ ಪ್ರಮುಖವಾದುದು. ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಒದಗಿಸುವ ಸಂಸ್ಥೆಗಳ ನಡುವೆ ಭಾರೀ ಪೈಪೋಟಿ ಇದೆ. ಅದೆಷ್ಟೋ ಕಂಪನಿಗಳು ಕಣ್ಣು ಮುಚ್ಚಿವೆ.    

ತೀವ್ರ ಸ್ಪರ್ಧೆಯಿಂದ ಕೂಡಿರುವ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ, ನೆಟ್ವಕ್ ವಿಸ್ತರಣೆ,  ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಗುಣಮಟ್ಟದ ಸೇವೆಯು ಎಲ್ಲಾ ಕಂಪನಿಗಳ ಮುಂದಿರುವ ಬೃಹತ್ ಸವಾಲು.   

ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಎರಡುವರೆ ವರ್ಷಗಳಲ್ಲೇ ರಿಲಯನ್ಸ್ ಜಿಯೋ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.  ದೇಶಾದ್ಯಂತ 300 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ, ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿರುವ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ.

ಇದನ್ನೂ ಓದಿ: Google Pay App ಬಳಕೆದಾರರಿಗೆ ಬಿಗ್ ಆಫರ್: ಸಿಗಲಿದೆ ಚಿನ್ನ!

ಕಳೆದ ಮಾರ್ಚ್ 2 ರಂದು ಜಿಯೋ ಬಳಕೆದಾರರ ಸಂಖ್ಯೆ 300 ಮಿಲಿಯನ್ ಮುಟ್ಟಿದೆ. ಚಾಲನೆ ಸಿಕ್ಕ ಬಳಿಕ ಕೇವಲ 170 ದಿನಗಳಲ್ಲಿ ಜಿಯೋ 100 ಮಿಲಿಯನ್ ಬಳಕೆದಾರರನ್ನು ಆಕರ್ಷಿಸಿ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು.

ವರದಿಯೊಂದರ ಪ್ರಕಾರ, ಟೆಲಿಕಾಂ ಕ್ಷೇತ್ರದ ಇನ್ನೊಂದು ಪ್ರಮುಖ ಸಂಸ್ಥೆ ಭಾರ್ತಿ ಏರ್ಟೆಲ್ ಜನವರಿ ಅಂತ್ಯಕ್ಕೆ 340.3 ಬಳಕೆದಾರರನ್ನು ಹೊಂದಿದೆ. ಏರ್ಟೆಲ್ ಗೆ 300 ಮಿಲಿಯನ್ ರೇಖೆಯನ್ನು ದಾಟಲು ಸುಮಾರು 19 ವರ್ಷಗಳು ಬೇಕಾಯಿತು.

ಬಳಕೆದಾರರ ಸಂಖ್ಯೆಯಲ್ಲಿ ವೊಡಾಫೋನ್ ಐಡಿಯಾ ಈಗ ದೇಶದ ಅತೀ ದೊಡ್ಡ ಸಂಸ್ಥೆಯಾಗಿ ಹೊಹೊಮ್ಮಿದೆ. ಪ್ರತ್ಯೇಕ ಸಂಸ್ಥೆಗಳಾಗಿದ್ದ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಕಳೆದ ವರ್ಷ ಆಗಸ್ಟ್ ನಲ್ಲಿ ವಿಲೀನವಾಗಿವೆ.

ಇದನ್ನೂ ಓದಿ: ಹೊಸ ಮೊಬೈಲ್ ಕೊಳ್ಳುವ ಯೋಚನೆಯೇ? ಕೈಗೆಟಕುವ ಬೆಲೆಯ ಮೊಬೈಲ್ ಲಿಸ್ಟ್

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!