SRK+: ಓಟಿಟಿ ಮಾರುಕಟ್ಟೆಗೆ ಶಾರುಖ್ ಎಂಟ್ರಿ? ಟ್ವೀಟರ್‌ನಲ್ಲಿ ಕಿಂಗ್‌ಖಾನ್‌ ಸುಳಿವು!

By Suvarna News  |  First Published Mar 15, 2022, 3:48 PM IST

ಶಾರುಖ್ ಮತ್ತು ಅವರ ಪ್ರೊಡಕ್ಷನ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಎಸ್‌ಆರ್‌ಕೆ+ ಅವರ ಹೊಸ  ಓಟಿಟಿ ಅಪ್ಲಿಕೇಶನ್ ಆಗಿದೆಯೇ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ.


Tech Desk: ಬಾಲಿಬುಡ್‌ ಬಾದ್‌ ಶಾ ಶಾರುಖ್ ಖಾನ್ ಮಂಗಳವಾರ ತಮ್ಮ ಓಟಿಟಿ ಪ್ಲಾಟ್‌ಫಾರ್ಮ್‌ನ ಪ್ರಾರಂಭ ಮಾಡುವುದಾಗಿ ಸುಳಿವು ನೀಡಿದ್ದಾರೆ. ಈ ಬಗ್ಗೆ ಶಾರುಖ್‌ ಟ್ವೀಟ್‌ ಮಾಡಿದ್ದು ಪ್ರಕಟಣೆಯ ಪೋಸ್ಟರ್ ಅನ್ನು ಹಂಚಿಕೊಂಡಿದ್ದು  "SRK +, ಶೀಘ್ರದಲ್ಲೇ ಬರಲಿದೆ" ಎಂದು  ಬರೆಯಲಾಗಿದೆ. ಈ ಬಳಿಕ ಉದ್ಯಮದ ಸ್ನೇಹಿತರು ಮತ್ತು ಸಹಯೋಗಿಗಳು ಶಾರುಖ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ . ಶಾರುಖ್ ಮತ್ತು ಅವರ ಪ್ರೊಡಕ್ಷನ್ ಬ್ಯಾನರ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್, ಆದಾಗ್ಯೂ, ಎಸ್‌ಆರ್‌ಕೆ + ನಿಜವಾಗಿಯೂ ಅವರ ಹೊಸ ಓಟಿಟಿ ಅಪ್ಲಿಕೇಶನ್ ಆಗಿದೆಯೇ ಎಂದು ಇನ್ನೂ ಖಚಿತಪಡಿಸಿಲ್ಲ.

2018 ರಲ್ಲಿ ಅವರ  ಬಿಡುಗಡೆಯಾದ "ಝೀರೋ" ನಂತರ ಶಾರುಖ್‌ ಖಾನ ಬಿಗ್‌ ಸ್ಕ್ರೀನ್‌ನಿಂದ ದೂರವಿದ್ದು, ಈಗ "ಕುಚ್ ಕುಚ್ ಹೋನೆ ವಾಲಾ ಹೈ, ಒಟಿಟಿ ಕಿ ದುನಿಯಾ ಮೇ" (OTTಜಗತ್ತಿನಲ್ಲಿ ಏನಾದರೂ ಸಂಭವಿಸಲಿದೆ) ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಇನ್ನು ಸಲ್ಮಾನ್ ಖಾನ್ ಶಾರುಖ್ ಅವರ ಟ್ವೀಟನ್ನು ಹಂಚಿಕೊಂಡಿದ್ದು ಅವರನ್ನು ಅಭಿನಂದಿಸಿದ್ದಾರೆ.

Latest Videos

undefined

ಇದನ್ನೂ ಓದಿ: BSNL Broadband: ಅಗ್ಗದ ದರದಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ: ಇಲ್ಲಿದೆ ಎಲ್ಲಾ ಪ್ಯಾಕ್‌ ಡಿಟೇಲ್ಸ್‌‌!

"ಆಜ್ ಕಿ ಪಾರ್ಟಿ ತೇರಿ ತರಫ್ ಸೆ @iamsrk. ನಿಮ್ಮ ಹೊಸ OTT ಅಪ್ಲಿಕೇಶನ್, SRK + ಗೆ ಅಭಿನಂದನೆಗಳು," ಎಂದು ಸಲ್ಮಾನ್‌ ಖಾನ್ ಬರೆದಿದ್ದಾರೆ. ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಹೊಸ OTT ಅಪ್ಲಿಕೇಶನ್‌ನಲ್ಲಿ ಸೂಪರ್‌ಸ್ಟಾರ್‌ನೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

"ಕನಸು ನನಸಾಗಿದೆ! ಅವರ ಹೊಸ OTT ಅಪ್ಲಿಕೇಶನ್, SRK+ ನಲ್ಲಿ @iamsrk ನೊಂದಿಗೆ ಸಹಕರಿಸುತ್ತಿದ್ದಾರೆ," ಎಂದು ಕಶ್ಯಪ್ ಬರೆದಿದ್ದಾರೆ. ಶಾರುಖ್ ಅವರ ಸಹಯೋಗಿ ಮತ್ತು ಸ್ನೇಹಿತ ಕರಣ್ ಜೋಹರ್ ಕೂಡ ಹೊಸ ಅಪ್ಲಿಕೇಶನ್‌ಗೆ ಅವರನ್ನು ಅಭಿನಂದಿಸಿದ್ದಾರೆ.

"ವರ್ಷದ ದೊಡ್ಡ ಸುದ್ದಿ! @iamsrk, ಇದು ಓಟಿಟಿ ಮಾರುಕಟ್ಟೆಯನ್ನು ಬದಲಾಯಿಸಲಿದೆ. ತುಂಬಾ ಉತ್ಸುಕವಾಗಿದೆ!!!" ಶಾರುಖ್ ಅವರು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಸರಣಿಗಳಾದ "ಬಾರ್ಡ್ ಆಫ್ ಬ್ಲಡ್" ಮತ್ತು "ಬೇಟಾಲ್" ನೊಂದಿಗೆ ನಿರ್ಮಾಪಕರಾಗಿ ಡಿಜಿಟಲ್ ಸ್ಟ್ರೀಮಿಂಗ್ ಜಾಗಕ್ಕೆ ಕಾಲಿಟ್ಟಿದ್ದರು. ಈ ಯೋಜನೆಗಳಿಗೆ ಅವರ ಪ್ರೊಡಕ್ಷನ್ ಹೌಸ್ ಬೆಂಬಲ ನೀಡಿತ್ತು.

 

Kuch kuch hone wala hai, OTT ki duniya mein. pic.twitter.com/VpNmkGUUzM

— Shah Rukh Khan (@iamsrk)

 

ಶಾರುಖ್ ಮುಂದಿನ ಚಿತ್ರ "ಪಠಾನ್" ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಜನವರಿ 25, 2023 ರಂದು ಬಿಡುಗಡೆಗೆ ಸಜ್ಜಾಗುತ್ತಿದೆ. ಸ್ಪೈ ಆಕ್ಷನ್‌ಗೆ ಯಶ್ ರಾಜ್ ಫಿಲ್ಮ್ಸ್ ಬೆಂಬಲ ನೀಡಿದೆ ಮತ್ತು "ವಾರ್" ಮತ್ತು "ಬ್ಯಾಂಗ್ ಬ್ಯಾಂಗ್" ಖ್ಯಾತಿಯ ಸಿದ್ಧಾರ್ಥ್ ಆನಂದ್ ಈ ಚಿತ್ರ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: 15 OTT ಸೇವೆಗಳೊಂದಿಗೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಬಿಡುಗಡೆ!

$13-15 ಶತಕೋಟಿ ಬೆಳೆವಣಿಗೆ: ಇನ್ನು ಮಾಧ್ಯಮ ಮತ್ತು ಮನರಂಜನೆಯ ಮಾರುಕಟ್ಟೆಯ ಜಂಟಿ ವರದಿಯ ಪ್ರಕಾರ, ಭಾರತೀಯ ಓಟಿಟಿ ಸ್ಟ್ರೀಮಿಂಗ್ ಉದ್ಯಮವು (OTT Streaming) ಮುಂದಿನ ದಶಕದಲ್ಲಿ ವಾರ್ಷಿಕ 22-25 ಶೇಕಡಾ ಹಾಗೂ USD 13-15 ಶತಕೋಟಿ ಬೆಳೆವಣಿಗೆಯ ನಿರೀಕ್ಷೆಯಿದೆ. ಓಟಿಟಿ (ಓವರ್-ದಿ-ಟಾಪ್) ಉದ್ಯಮವು ನಿರಂತರವಾಗಿ ಬೆಳೆಯುತ್ತಿದೆ ಹಾಗೂ ಮಾರುಕಟ್ಟೆಯಲ್ಲಿ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಸ್ಪರ್ಧೆ ಇದೆ. ಮತ್ತು ಎಲ್ಲಾ ರೀತಿಯ ಕಂಟೆಂಟ್‌ಗಳನ್ನು ನೀಡುವ  40ಕ್ಕೂ ಹೆಚ್ಚು ಕಂಪನಿಗಳೊಂದಿ ಮಾರುಕಟ್ಟೆಗಳಲ್ಲಿ ಪೈಫೋಟಿ ನಡೆಸುತ್ತಿವೆ ಎಂದು  CII ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG) ವರದಿ ಹೇಳಿದೆ.

ಕೈಗೆಟಕುವ ದರದ ಹೈ-ಸ್ಪೀಡ್ ಮೊಬೈಲ್ ಇಂಟರ್ನೆಟ್, ಕಳೆದ ಆರು ವರ್ಷಗಳಲ್ಲಿ ಇಂಟರ್ನೆಟ್ ಬಳಕೆದಾರರನ್ನು ದ್ವಿಗುಣಗೊಳಿಸುವುದು, ಡಿಜಿಟಲ್ ಪಾವತಿಗಳ  ಸಂಖ್ಯೆಯಲ್ಲಿ ಗಣನೀಯ ಏರಿಕೆ ಸೇರಿದಂತೆ ಹಲವು ವಿಷಯಗಳು ಓಟಿಟಿ  ಹಾಗೂ  ಡಿಜಿಟಲ್ ವೀಡಿಯೊ ಸ್ಟ್ರೀಮಿಂಗ್‌ಗಾಗಿ ಬೆಳವಣಿಗೆಗೆ  ಕಾರಣವಾಗಿವೆ.

click me!