Lava Z3: 5000mAh ಬ್ಯಾಟರಿಯೊಂದಿಗೆ ಅತೀ ಅಗ್ಗದ ಸ್ಮಾರ್ಟ್‌ಫೋನ್‌ ಲಾಂಚ್‌: ಏನೆಲ್ಲಾ ವಿಶೇಷತೆಗಳಿವೆ?

By Suvarna News  |  First Published Mar 15, 2022, 3:00 PM IST

ಹೊಸ Lava Z3 ದೊಡ್ಡ ಡಿಸ್ಪ್ಲೇ, ದೊಡ್ಡ ಬ್ಯಾಟರಿ, ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಮತ್ತು ಬಜೆಟ್ ಸ್ಮಾರ್ಟ್ಫೋನ್ ಬಳಕೆದಾರರು ಇಷ್ಟಪಡುವ ಸಾಧಾರಣ ಪ್ರೊಸೆಸರ್ನೊಂದಿಗೆ ಬಿಡುಗಡೆಯಾಗಿದೆ


Tech Desk: ಲಾವಾ ಭಾರತದಲ್ಲಿ Z3 ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. Lava Z3 ಹೊಸ ಪ್ರವೇಶ ಮಟ್ಟದ ಫೋನಾಗಿದ್ದು ಸಾಧಾರಣ ಕಾರ್ಯಕ್ಷಮತೆಯನ್ನು ನೀಡಲಿದೆ. ಸ್ಮಾರ್ಟ್‌ಫೋನಲ್ಲಿ ನಾಚ್ ಹೊಂದಿರುವ ಡಿಸ್‌ಪ್ಲೇ, ಒಂದು ದಿನ ಉಳಿಯಲು ಸಾಧ್ಯವಾಗುವ ಬ್ಯಾಟರಿ ಮತ್ತು ಹೆಚ್ಚುವರಿ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. Lava Z3ನ ಯುನಿಕ್ ವಿಶೇಷತೆಗಳು ಏನೂ ಇಲ್ಲದಿದ್ದರೂ, Android 11  ಆವೃತ್ತಿಯ ನವೀಕರಣವು  ಹೈ ಲೈಟ್‌ ಆಗಿದೆ. ಇದರರ್ಥ Lava Z3 ಈ ವರ್ಷದ ನಂತರ Android 12 ಅಪ್‌ಡೇಟ್‌ಗೆ ಅರ್ಹವಾಗಿರುತ್ತದೆ.

ಭಾರತದಲ್ಲಿ Lava Z3 ಬೆಲೆ: ಕಂಪನಿಯ ವೆಬ್‌ಸೈಟ್‌ನಲ್ಲಿ Lava Z3 ಅನ್ನು 7,499 ರೂ ಬೆಲೆಯಲ್ಲಿ ಪಟ್ಟಿ ಮಾಡಲಾಗಿದೆ. ಫೋನ್ ಸ್ಟ್ರೈಪ್ಡ್ ಸಿಯಾನ್ (Striped Cyan) ಮತ್ತು ಸ್ಟ್ರೈಪ್ಡ್ ಬ್ಲೂ (Striped Blue) ಬಣ್ಣಗಳಲ್ಲಿ ಬರುತ್ತದೆ. ಇದು ಈಗ ಭಾರತದಲ್ಲಿ ಲಾವಾದ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಿಂದ ಖರೀದಿಸಲು ಲಭ್ಯವಿದೆ.

Latest Videos

undefined

ಇದನ್ನೂ ಓದಿ: Lava Agni 5G: ಹೊಸ ಆಫರ್! Realmeಯ ನಿರ್ದಿಷ್ಟ ಫೋನ್ ಕೊಟ್ಟರೆ ಲಾವಾ ಅಗ್ನಿ 5G ಉಚಿತ!

Lava Z3 ಫೀಚರ್ಸ್:‌ Lava Z3 ಬಜೆಟ್ ಫೋನ್ ಆಗಿದ್ದು, ಕಡಿಮೆ ಬೆಲೆಯ ಫೋನ್‌ ಖರೀದಿಸುವವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. Lava Z3 Z3 ಆಕ್ಟಾ-ಕೋರ್ MediaTek Helio A20 ಪ್ರೊಸೆಸರ್‌ನಿಂದ ಚಾಲಿತವಾಗಿದದ್ದು 3GB RAMನೊಂದಿಗೆ ಜೋಡಿಸಲಾಗಿದೆ.  ಇದು ಫೋನ್‌ನಲ್ಲಿ ಲಘು ಆಟಗಳನ್ನು ಆಡಲು ಮತ್ತು ಮಲ್ಟಿಟಾಸ್ಕ್ ಮಾಡಲು ಸಾಕಾಗುತ್ತದೆ.  Z3 ನಲ್ಲಿ 32GB ಆನ್‌ಬೋರ್ಡ್ ಸಂಗ್ರಹಣೆ ನೀಡಲಾಗಿದ್ದು   ಹೆಚ್ಚಿನ ಸಂಗ್ರಹಣೆಯ ಅಗತ್ಯವಿದ್ದರೆ, microSD ಕಾರ್ಡನ್ನು ಬಳಸಬಹುದು. ಆಂಡ್ರಾಯ್ಡ್ 12 ಅಪ್‌ಡೇಟ್ ಭರವಸೆಯೊಂದಿಗೆ ಸ್ಟಾಕ್ ಇಂಟರ್‌ಫೇಸ್‌ನೊಂದಿಗೆ ಫೋನ್ ಆಂಡ್ರಾಯ್ಡ್ 11 ಅನ್ನು ರನ್ ಮಾಡುತ್ತದೆ.

ಹೊಸ ಲಾವಾ ಫೋನ್ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದೆ. 8-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಸೆಕೆಂಡರಿ ಕ್ಯಾಮೆರಾ ಇದ್ದು ಅದರ ವಿಶೇಷಣಗಳು ಸ್ಪಷ್ಟವಾಗಿಲ್ಲ. ರಾತ್ರಿ ವೇಳೆ ಫೋಟೋಗಳನ್ನು ಕ್ಲಿಕ್ ಮಾಡಲು ಬಳಸಬಹುದಾದ LED ಫ್ಲ್ಯಾಷ್‌ಲೈಟನ್ನು ಸಹ ನೀಡಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ Z3 ಬ್ಯೂಟಿ ಮೋಡ್, HDR ಮೋಡ್, ನೈಟ್ ಮೋಡ್ ಮತ್ತು ಪೋರ್ಟ್ರೇಟ್ ಮೋಡ್‌ನೊಂದಿಗೆ ಬರುತ್ತದೆ  ಎಂದು ಲಾವಾ ಹೇಳುತ್ತದೆ. ಸೆಲ್ಫಿಗಳಿಗಾಗಿ, Lava Z3 ನಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಇದನ್ನೂ ಓದಿ: Lavaದ ಮೊದಲ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ : ಇಲ್ಲಿದೆ ಸಂಪೂರ್ಣ ಮಾಹಿತಿ!

Lava Z3 ನ ಡಿಸ್ಪ್ಲೇ 6.5-ಇಂಚಿ ಗಾತ್ರ ಹೊಂದಿದ್ದು ದೊಡ್ಡದಾಗಿದೆ. ಇದು 20:9 ರ ಆಕಾರ ಅನುಪಾತ, 263 PPI ನ ಪಿಕ್ಸೆಲ್ ಸಾಂದ್ರತೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರ ರಕ್ಷಣೆಯನ್ನು ಹೊಂದಿರುವ HD+ ಪ್ಯಾನೆಲ್ ಆಗಿದೆ.  ಚಲನಚಿತ್ರಗಳನ್ನು ವೀಕ್ಷಿಸಲು ಡಿಸ್ಪ್ಲೇ ಸಾಕಷ್ಟು ಉತ್ತಮವಾಗಿದೆ ಎಂದು ತೋರುತ್ತದೆಯಾದರೂ, ಸಿಂಗಲ್ ಸ್ಪೀಕರ್ ಉತ್ತಮ ಅನುಭವ ನೀಡುವ ಸಾಧ್ಯತೆ ಇಲ್ಲ. ಆದರೆ ಇಯರ್‌ಫೋನ್‌ಗಳಿಗೆ ಸಂಪರ್ಕಿಸಲು ಬ್ಲೂಟೂತ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಇದೆ. ಹೆಚ್ಚುವರಿ ಭದ್ರತೆಗಾಗಿ ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ. ಫೋನ್ ಫೇಸ್ ಅನ್‌ಲಾಕನ್ನು ಸಹ ಬೆಂಬಲಿಸುತ್ತದೆ.

Lava Z3 ಒಳಗಿನ 5000mAh ಬ್ಯಾಟರಿಯು ಒಂದು ದಿನ ಸುಲಭವಾಗಿ ಬಾಳಿಕೆ ಬರಬೇಕು, ಆದರೆ ವೇಗದ ಚಾರ್ಜಿಂಗ್‌ಗೆ  ಬೆಂಬಲವಿಲ್ಲದ ಕಾರಣ, ನೀವು ಅದನ್ನು  ಗಂಟೆಗಳ ಕಾಲ ಚಾರ್ಜ್ ಮಾಡಬೇಕಾಗಬಹುದು. ಫೋನ್ ಚಾರ್ಜಿಂಗ್ ಮತ್ತು ಮಾಧ್ಯಮ ವರ್ಗಾವಣೆಗಾಗಿ USB-C ಪೋರ್ಟನ್ನು ಹೊಂದಿದೆ. 

click me!