ದಾಖಲೆ ಮಾಡೋದು ಮನುಷ್ಯರು ಮಾತ್ರನಾ... ಓಡಿ ವಿಶ್ವದಾಖಲೆ ನಿರ್ಮಿಸಿದ ರೊಬೋಟ್‌

By Anusha KbFirst Published Sep 29, 2022, 6:12 PM IST
Highlights

ಅಮೆರಿಕಾದಲ್ಲಿ ರೊಬೋಟ್ ಒಂದು ಓಡಿ ವಿಶ್ವ ದಾಖಲೆ ನಿರ್ಮಿಸಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯೂಯಾರ್ಕ್: ದಾಖಲೆ ಮಾಡುವುದು ಗಿನ್ನೆಸ್ ಪುಟ ಸೇರುವುದು ಇದೆಲ್ಲಾ ಮನುಷ್ಯರಿಗಷ್ಟೇ ಅಂತ ನಾವು ನೀವು ಭಾವಿಸಬಹುದು ಆದರೆ ಅಮೆರಿಕಾದಲ್ಲಿ ರೊಬೋಟ್ ಒಂದು ವಿಶ್ವ ದಾಖಲೆ ನಿರ್ಮಿಸಿ ಗಿನ್ನೆಸ್ ಪುಟ ಸೇರಿದೆ. ಅಮೆರಿಕಾದ ಒರಿಗಾನ್ ಸ್ಟೇಟ್ ಯುನಿವರ್ಸಿಟಿ ಡೈನಾಮಿಕ್ ರೋಬೋಟಿಕ್ ಲ್ಯಾಬೋರೇಟರಿ ಅಭಿವೃದ್ಧಿಪಡಿಸಿದ ರೊಬೋಟ್ ಒಂದು  24.73 ಸೆಕೆಂಡ್‌ಗಳಲ್ಲಿ 100 ಮೀಟರ್ ಓಡಿ ಕ್ರಮಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದು, ಗಿನ್ನೆಸ್ ಪುಟ ಸೇರಿದೆ.

ಓಡಿ ದಾಖಲೆ ನಿರ್ಮಿಸಿದರು ಎಂದರೆ ಥಟ್ಟನೇ ನೆನಪಾಗುವುದು ಉಸೇನ್ ಬೋಲ್ಟ್. ಆದರೆ ಅಮೆರಿಕಾದಲ್ಲಿ(US) ರೊಬೋಟ್(Robot) ಕೂಡ ವಿಶ್ವ ದಾಖಲೆ ನಿರ್ಮಿಸಿದೆ. ಈ ವರ್ಷದ ಮೇ.11 ರಂದು ಈ ದಾಖಲೆ ನಿರ್ಮಿಸಲಾಗಿದ್ದು, ಈ ಬಗ್ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಮಾಹಿತಿ ನೀಡಿದ್ದು, ಜಗತ್ತಿನ ವೇಗದ ರೊಬೊಟ್‌ಗಳ(Fastest Robot) ಬಗ್ಗೆ ಹಲವು ವಿಶ್ವದಾಖಲೆಗಳು ಈಗಾಗಲೇ ಇವೆ. ಆದರೆ ಇದೊಂದು ಮಾನವ ಮಾಡುವ ಕೆಲಸಗಳನ್ನು ಮಾಡುವ ವಿಭಾಗದಲ್ಲಿ ಸ್ಪರ್ಧೆ ನೀಡಿದ ರೊಬೋಟ್ ಆಗಿದೆ. ಇದು ಮಾನವರಂತೆ ಓಡಿ ದಾಖಲೆ ನಿರ್ಮಿಸಿದೆ ಎಂದರು. ಟ್ವಿಟ್ಟರ್‌ನಲ್ಲಿ ಡಾನ್ ಟಿಲ್ಕಿನ್ ಎಂಬುವವರು ರೊಬೋಟ್ ಓಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದರಿಂದ ಸ್ಪೂರ್ತಿ ಪಡೆಯಬೇಕೆ ಅಥವಾ ಭಯಗೊಳ್ಳಬೇಕೆ ಎಂಬುದು ತಿಳಿದಿಲ್ಲ ಎಂದು ಬರೆದುಕೊಂಡಿದ್ದಾರೆ. 

Robot World Record: Not sure whether to be inspired or terrified? https://t.co/xevauknkpV pic.twitter.com/2SlycGFsaX

— Dan Tilkin (@DanTilkinKOIN6)

ಇತ್ತ ಈ ವಿಡಿಯೋ(Video) ನೋಡಿದ ನೆಟ್ಟಿಗರೊಬ್ಬರು ಇದೇ ರೀತಿಯ ಆಕೃತಿಯೊಂದು ನನಗೆ ಕನಸಿನಲ್ಲಿ ಬೆನ್ನಟ್ಟಿ ಬಂದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಈ ರೊಬೋಟ್‌ನ ವಿಶ್ವ ದಾಖಲೆಯ ಯತ್ನದ ನೇತೃತ್ವ ವಹಿಸಿದ್ದ ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ( Oregon State University) ಪದವಿ ವಿದ್ಯಾರ್ಥಿ ಡೆವಿನ್ ಕ್ರೌಲಿ (Devin Crowley) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಳೆದ ಹಲವಾರು ವರ್ಷಗಳಿಂದ ಈ ಸಾಧನೆಯನ್ನು ಸಾಧಿಸಲು ಶ್ರಮಿಸುತ್ತಿರುವುದಾಗಿ ಹೇಳಿದರು. ಈ ರೊಬೊಟ್ 5 ಕಿಲೋಮೀಟರ್ ಓಡುವುದು ಮತ್ತು ಮೆಟ್ಟಿಲುಗಳಲ್ಲಿ ಮೇಲೆ  ಕೆಳಗೆ ನಡೆದಾಡುವುದನ್ನು ಒಳಗೊಂಡಿತ್ತು ಎಂದು ಅವರು ಹೇಳಿದರು. 

ಆರ್ಡರ್ ಕೊಟ್ಟು ಗಂಟೆಗಟ್ಟಲೆ ಕಾಯ್ಬೇಕಿಲ್ಲ..! ಕೆಲವೇ ನಿಮಿಷಗಳಲ್ಲಿ ಬರ್ಗರ್ ತಯಾರಿಸುತ್ತೆ ರೊಬೋಟ್..!

ಇದಕ್ಕೆ ಸುಮಾರು ಒಂದು ವರ್ಷಗಳ ಕಾಲ ತರಬೇತಿ ನೀಡಲಾಗಿತ್ತು. ಸ್ವತಂತ್ರವಾಗಿ ನಿಂತುಕೊಳ್ಳುವುದು ಓಡುವುದು, ಎಲ್ಲಿಯೂ ಕೆಳಗೆ ಬೀಳದೆ ಮತ್ತೆ ಹಿಂದಿನ ಜಾಗಕ್ಕೆ ಬರುವುದು ಮುಂತಾದವುಗಳನ್ನು ಒಳಗೊಂಡಿತ್ತು ಎಂದು ಮಾಹಿತಿ ನೀಡಿದರು. ಈ ರನ್ನಿಂಗ್ ರೊಬೋಟ್ ಯೋಜನೆಯಲ್ಲಿ ಭಾಗಿಯಾಗಿದ್ದ ಕೃತಕ ಬುದ್ದಿಮತ್ತೆಯ ಫ್ರೊಫೆಸರ್ ಅಲನ್ ಪೇರ್ನ್ ಮಾತನಾಡಿ, ಓಡುವುದಕ್ಕಿಂತಲೂ ಓಟ ಆರಂಭಿಸುವುದು ಹಾಗೂ ನಿಲ್ಲಿಸುವುದು ಬಹಳ ಕಷ್ಟದ ಕೆಲಸ ಆಗಿತ್ತು ಎಂದು ಹೇಳಿದರು. 

Winter Olympic:ಕ್ರೀಡಾಪಟುಗಳ ಸೇವೆಗೆ ಮಾನವರ ಬದಲು ರೊಬೋಟ್ ಬಳಸಲು ಮುಂದಾದ ಚೀನಾ

click me!