ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಯಾರು ಟಾಪ್?

By Web DeskFirst Published Sep 17, 2019, 6:39 PM IST
Highlights

ಮೊಬೈಲ್ ಇಂಟರ್ನೆಟ್ ಸೇವೆಯಲ್ಲಿ ಯಾರು ಸ್ಪೀಡ್ ಇದ್ದಾರೆ? ಡೌನ್‌ಲೋಡ್ ಸ್ಪೀಡ್ ಯಾರದ್ದು ಹೆಚ್ಚು? ಅಪ್ಲೋಡ್ ಸ್ಪೀಡ್‌ನಲ್ಲಿ ಯಾರು ಮುಂದು? ಇಲ್ಲಿದೆ TRAI ವರದಿ....   

ಬೆಂಗಳೂರು (ಸೆ.17): ಈಗ ಬರೇ ಇಂಟರ್ನೆಟ್ ಇದ್ದರೆ ಸಾಲದು, ಇಂಟರ್ನೆಟ್ ಸ್ಪೀಡ್ ಸಖತ್ ಆಗಿರ್ಬೇಕು. ಇಲ್ಲದಿದ್ದರೆ ಪ್ರಯೋಜನವಿಲ್ಲ... ಎಂಬ ಕಾಲದಲ್ಲಿ ನಾವು ಬದುಕುತ್ತಿದ್ದೇವೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕೂಡಾ ಪ್ರತಿ ತಿಂಗಳು  ಇಂಟರ್ನೆಟ್ ಸ್ಪೀಡ್ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ.

ಆಗಸ್ಟ್ ತಿಂಗಳ ಸ್ಪೀಡ್ ಚಾರ್ಟ್ ವರದಿ ಈಗ ಲಭ್ಯವಿದೆ. 4G ಡೌನ್‌ಲೋಡ್ ಸ್ಪೀಡ್‌ನಲ್ಲಿ ರಿಲಯನ್ಸ್ ಮೊದಲ ಸ್ಥಾನದಲ್ಲಿದ್ದರೆ, ಅಪ್ಲೋಡ್ ಸ್ಪೀಡ್‌ನಲ್ಲಿ ವೊಡಾಫೋನ್ ಮುಂದಿದೆ.

ಆಗಸ್ಟ್‌ನಲ್ಲಿ ಜಿಯೋ ಸರಾಸರಿ ಡೌನ್‌ಲೋಡ್ ಸ್ಪೀಡ್‌ನಲ್ಲಿ ತುಸು ಹೆಚ್ಚಳ ಕಂಡು ಬಂದಿದ್ದು, 21.3Mbps ಆಗಿದೆ. ಜುಲೈಯಲ್ಲಿ ಸರಾಸರಿ ಡೌನ್ ಲೋಡ್ ಸ್ಪೀಡ್ 21 Mbps ಆಗಿತ್ತು.

ಸರಾಸರಿ 5.5 Mbps ಅಪ್ಲೋಡ್ ಸ್ಪೀಡ್ ಹೊಂದುವ ಮೂಲಕ ವೊಡಾಫೋನ್ ಮುಂದಿದ್ದರೂ, ಜುಲೈಗಿಂತ ವೇಗ ಕಡಿಮೆಯಾಗಿದೆ. ಜುಲೈ ತಿಂಗಳಿನಲ್ಲಿ 5.8 Mbps ಇತ್ತು.

ಡೌನ್‌ಲೋಡ್ ಸ್ಪೀಡ್‌ನಲ್ಲಿ ಕಳೆದ ವರ್ಷದ (2018) 12 ತಿಂಗಳು ರಿಲಯನ್ಸ್ ಜಿಯೋ ಮುಂಚೂಣಿಯಲ್ಲಿತ್ತು. ಈ ವರ್ಷವೂ ಸತತ 8 ತಿಂಗಳು ಟಾಪ್ ಸ್ಥಾನವನ್ನು ಜಿಯೋ ಕಾಯ್ದುಕೊಂಡಿದೆ.

ಇದನ್ನೂ ಓದಿ | ಬ್ರಾಡ್‌ಬ್ಯಾಂಡ್‌ ಮಾರುಕಟ್ಟೆಗೆ ಜಿಯೋ ದಾಳಿ; ಉಚಿತ ಟಿವಿ ಕೂಡಾ ತಗೊಳ್ಳಿ!

ಜುಲೈಗೆ ಹೋಲಿಸಿದಾಗ ಭಾರ್ತಿ ಏರ್ಟೆಲ್‌ನ ಡೌನ್‌ಲೋಡ್ ಸ್ಪೀಡ್  ಆಗಸ್ಟ್‌ನಲ್ಲಿ ಕುಸಿತ ಕಂಡಿದ್ದು, ಸರಾಸರಿ ವೇಗ 8.8 Mbps ನಿಂದ 8.2 Mbpsಗೆ ಇಳಿದಿದೆ.

ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ವಿಲೀನವಾಗಿದ್ದರೂ, TRAI ವರದಿಯಲ್ಲಿ ಅವುಗಳ ಅಂಕಿ-ಅಂಶಗಳನ್ನು ಪ್ರತ್ಯೇಕವಾಗಿಯೇ ನಮೂದಿಸಲಾಗಿದೆ.

ಆಗಸ್ಟ್‌ನಲ್ಲಿ ವೊಡಾಫೋನ್‌ನ ಸರಾಸರಿ ಡೌನ್‌ಲೋಡ್ ಸ್ಪೀಡ್ 7.7 Mbps ಆಗಿದ್ದರೆ, ಐಡಿಯಾದ ಸರಾಸರಿ ಡೌನ್‌ಲೋಡ್ ಸ್ಪೀಡ್ 6.1 Mbps ಆಗಿದೆ. 

ಆಗಸ್ಟ್ ತಿಂಗಳಿನಲ್ಲಿ ಐಡಿಯಾ ಮತ್ತು ಏರ್ಟೆಲ್ ಅಪ್ಲೋಡ್ ಸ್ಪೀಡ್ ಕೊಂಚ ಇಳಿಮುಖವಾಗಿದೆ. ಐಡಿಯಾ ಸರಾಸರಿ ಅಪ್ಲೋಡ್ ಸ್ಪೀಡ್ 5.1 Mbps ಆಗಿದ್ದರೆ, ಏರ್ಟೆಲ್ ಸರಾಸರಿ ಅಪ್ಲೋಡ್ ಸ್ಪೀಡ್ 3.1Mbps ಆಗಿದೆ. ಜಿಯೋ ಸರಾಸರಿ ಅಪ್ಲೋಡ್ ಸ್ಪೀಡ್ 4.4 Mbps ಆಗಿದೆ.

click me!