ಮಾರುಕಟ್ಟೆಗೆ ಬಂತು ಅಗ್ಗದ ಸ್ಮಾರ್ಟ್‌ಫೋನ್! ಇದಕ್ಕಿಂತ ಕಮ್ಮಿ ಇನ್ನೇನು ಬೇಕು?

Published : Sep 14, 2019, 01:15 PM IST
ಮಾರುಕಟ್ಟೆಗೆ ಬಂತು ಅಗ್ಗದ ಸ್ಮಾರ್ಟ್‌ಫೋನ್! ಇದಕ್ಕಿಂತ ಕಮ್ಮಿ ಇನ್ನೇನು ಬೇಕು?

ಸಾರಾಂಶ

ಹಿಂಬದಿ 3 ಕ್ಯಾಮೆರಾ ಇರುವ ಅಗ್ಗದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ; 4GB RAM ಮತ್ತು 64GB ಮೆಮೊರಿ!; ಇನ್ಫಿನಿಕ್ಸ್‌ನ ಹಾಟ್‌8 ಸ್ಮಾರ್ಟ್‌ಫೋನ್‌

ಅಗ್ಗದ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇನ್ಫಿನಿಕ್ಸ್‌ ಈಗ ಹೊಸ ಫೋನನ್ನು ಮಾರುಕಟ್ಟೆಗೆ ಬಿಟ್ಟಿದೆ. ಈಗ ಬಿಡುಗಡೆಯಾಗಿರುವ ಹಾಟ್‌ 8 ಸ್ಮಾರ್ಟ್‌ಫೋನ್‌,  4 ಜಿಬಿ RAM ಹಾಗೂ 64ಜಿಬಿ ಮೆಮೊರಿ ಹೊಂದಿದೆ.

6.52 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು ಕ್ವಾಡ್‌ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ AIನ ಮೂರು ರಿಯರ್‌ ಕ್ಯಾಮೆರಾಗಳಿವೆ. ಇವು 13ಎಂಪಿ, 8 ಎಂಪಿ ಹಾಗೂ 2 ಎಂಪಿಯ ಕ್ಯಾಮೆರಾಗಳು. 

ಇದನ್ನೂ ಓದಿ | ಮೊಬೈಲ್ ಪ್ರಿಯರಿಗೆ ಸಿಹಿ ಸುದ್ದಿ; ಇನ್ಮುಂದೆ ಆ್ಯಪಲ್ ಫೋನ್ ಖರೀದಿ ಸುಲಭ!

ಸೆಲ್ಫಿ ಕ್ಯಾಮೆರಾ ಸಾಮರ್ಥ್ಯ 8 ಎಂಪಿಯದು. ಹಿಲಿಯೋ ಪಿ22 ಆಕ್ಟಾಕೋರ್‌ ಪ್ರೊಸೆಸರ್‌ ಜೊತೆಗೆ ಬರೋಬ್ಬರಿ 5000ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ ಇದೆ. ಏನಿಲ್ಲವೆಂದರೂ ಸಿನಿಮಾ ನೋಡಿ, ಆಟವೂ ಆಡಿದರೆ ಎರಡು ದಿನ ಬಾಳಿಕೆ ಬರುತ್ತೆ. 

ಈ ಫೋನ್‌ನ ಮೂಲ ಬೆಲೆ 7999ರು. ಅಕ್ಟೋಬರ್‌ 30ರಿಂದ ಸ್ಪೆಷಲ್‌ ಸೇಲ್‌ನಲ್ಲಿ 6999ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ಸಿಗಲಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ