ಇಡೀ ವರ್ಷ ಟೆನ್ಷನ್ ಫ್ರೀ, ಜಿಯೋದಿಂದ ಧಮಾಕಾ ಆಫರ್; ಸಿಗುತ್ತೆ 912GB ಡೇಟಾ, 365000 ಎಸ್‌ಎಂಎಸ್ 

Published : Dec 08, 2024, 03:27 PM ISTUpdated : Dec 08, 2024, 03:29 PM IST
ಇಡೀ ವರ್ಷ ಟೆನ್ಷನ್ ಫ್ರೀ, ಜಿಯೋದಿಂದ ಧಮಾಕಾ ಆಫರ್; ಸಿಗುತ್ತೆ 912GB ಡೇಟಾ, 365000 ಎಸ್‌ಎಂಎಸ್ 

ಸಾರಾಂಶ

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿಯೊಂದಿಗೆ ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಘೋಷಿಸಿದೆ. ಈ ಪ್ಲಾನ್‌ಗಳಲ್ಲಿ 912GB ಡೇಟಾ, 36,500 SMS ಮತ್ತು ಅನ್‌ಲಿಮಿಟೆಡ್ ಕರೆಗಳಂತಹ ಪ್ರಯೋಜನಗಳಿವೆ.

ನೀವು ಜಿಯೋ ಸಿಮ್ ಬಳಕೆದಾರರಾಗಿದ್ದು, ಪ್ರತಿ ತಿಂಗಳು ರೀಚಾರ್ಜ್ ಮಾಡಿಕೊಳ್ಳುತ್ತೀರಾ? ರಿಲಯನ್ಸ್  ಜಿಯೋ ತನ್ನ ಬಳಕೆದಾರರಿಗೆ 84 ದಿನದಿಂದ 365 ದಿನಗಳವರೆಗಿನ ವಿವಿಧ ವ್ಯಾಲಿಡಿಟಿಯ ಪ್ಲಾನ್‌ಗಳನ್ನು ನೀಡುತ್ತಿದೆ.  ವರ್ಷದ ಪ್ಲಾನ್‌ಗಳು ಗ್ರಾಹಕರ ಜೇಬಿನಲ್ಲಿಯ ಹಣ ಉಳಿತಾಯ ಮಾಡೋದರ ಜೊತೆ ಹೆಚ್ಚುವರಿ ಲಾಭಗಳನ್ನು ನೀಡುತ್ತವೆ.  ಈ ಆಫರ್‌ಗಳಲ್ಲಿ  ಕನಿಷ್ಠ 11 ತಿಂಗಳವರೆಗೆ ಯಾವುದೇ  ರೀಚಾರ್ಜ್ ಟೆನ್ಷನ್ ಇಲ್ಲದೇ ನೆಟ್‌ವರ್ಕ್ ಸೇವೆಗಳನ್ನು ಅನುಭವಿಸಬಹುದು.

ಪದೇ ಪದೇ ತಿಂಗಳು ಪ್ರಿಪೇಯ್ಡ್ ಪ್ಲಾನ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳುವ ಬದಲು ದೀರ್ಘಾವಧಿಯ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಜೇಬಿಗೆ ಹಿತಕಾರಿಯಾಗಿದೆ.  ವರ್ಷದ ಜೊತೆ ಅದಕ್ಕಿಂತಲೂ ಕಡಿಮೆ ಪ್ಲಾನ್‌ಗಳು ಸಹ ಜಿಯೋದಲ್ಲಿ ಗ್ರಾಹಕರಿಗೆ ಸಿಗುತ್ತಿವೆ. ಇಂದು ನಾವು ನಿಮಗೆ ಒಂದು ವರ್ಷ ವ್ಯಾಲಿಡಿಟಿಯ ಪ್ಲಾನ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 36,500 ಎಸ್‌ಎಂಎಸ್ ಮತ್ತು 912GB ಡೇಟಾ ಸಿಗುತ್ತದೆ.

Jio Rs 3599 Prepaid Plan
ರಿಲಯನ್ಸ್ ಜಿಯೋ ನೀಡುತ್ತಿರುವ ಈ ಪ್ರಿಪೇಯ್ಡ್ ಪ್ಲಾನ್‌ 365 ದಿನದ ವ್ಯಾಲಿಡಿಟಿಯನ್ನು  ಒಳಗೊಂಡಿದೆ. 365 ದಿನಕ್ಕೆ ಒಟ್ಟಾರೆ 912GB ಡೇಟಾ ಸಿಗುತ್ತದೆ.  ಅಂದ್ರೆ ಪ್ರತಿದಿನ 2.5GB ಡೇಟಾ ಬಳಸಬಹುದಾಗಿದೆ. ಎಲ್ಲಾ ನೆಟ್‌ವರ್ಕ್‌ಗ ಅನ್‌ಲಿಮಿಟೆಡ್ ಕರೆ ಮಾಡಬಹುದು. ಇದೆಲ್ಲದರ ಜೊತೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ ಉಚಿತ ಆಕ್ಸೆಸ್ ಗ್ರಾಹಕರಿಗೆ ಸಿಗುತ್ತದೆ. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸುವ ಆಯ್ಕೆಯನ್ನು ನೀಡಲಾಗಿದೆ. ಅನ್‌ಲಿಮಿಟೆಡ್ 5G ಸಹ ಸಿಗಲಿದೆ.

ಇದನ್ನೂ ಓದಿ: ತಮಗಿಂತ ಜೊಮ್ಯಾಟೋ ಮಾಲೀಕ ದೀಪೇಂದ್ರ ಹೇಗೆ ಶ್ರೇಷ್ಠ ಎಂಬುದನ್ನ ಹೇಳಿದ್ರು ನಾರಾಯಣಮೂರ್ತಿ

Jio Rs 3999 Prepaid Plan
ರಿಲಯನ್ಸ್ ಜಿಯೋ ಗ್ರಾಹಕರು 3999 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 365 ದಿನ ವ್ಯಾಲಿಡಿಟಿಯ ಪ್ಯಾಕ್ ಆಕ್ಟಿವೇಟ್ ಆಗುತ್ತದೆ.  ಈ ಯೋಜನೆಯಲ್ಲಿಯೂ ಗ್ರಾಹಕರಿಗೆ ಪ್ರತಿದಿನ 2.5GB ಡೇಟಾ ಸಿಗುತ್ತದೆ. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸುವ ಆಯ್ಕೆಯನ್ನು ನೀಡಲಾಗಿದೆ.  ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ ಉಚಿತ ಆಕ್ಸೆಸ್ ಗ್ರಾಹಕರಿಗೆ ಸಿಗುತ್ತದೆ.

Jio Rs 1899 Prepaid Plan
ಜಿಯೋ ಬಳಕೆದಾರರು 1899 ರೂಪಾಯಿ ರಿಚಾರ್ಜ್ ಮಾಡಿಕೊಂಡರೆ 336 ದಿನ ಅಂದ್ರೆ 11 ತಿಂಗಳ ಪ್ಲಾನ್ ಆಕ್ಟಿವೇಟ್ ಆಗುತ್ತದೆ. ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ, 100 ಎಸ್‌ಎಂಎಸ್ ಮತ್ತು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹುದು. 3 ಸಾವಿರ ರೂಪಾಯಿ ಮೊತ್ತ ಅಧಿಕವಾದ್ರೆ 11 ತಿಂಗಳ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. ಇಲ್ಲಿ ಪ್ರತಿದಿನ 0.5GB ಡೇಟಾ ಕಡಿಮೆ ಸಿಗಲಿದೆ. ಇನ್ನುಳಿದಂತೆ ಎಲ್ಲಾ ಬೆನೆಫಿಟ್‌ಗಳು ಗ್ರಾಹಕರಿಗೆ ಸಿಗುತ್ತವೆ.

ಇದನ್ನೂ ಓದಿ: ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್- ಸೂಪರ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 2 ಅಲ್ಲ, 3GB ಡೇಟಾ ಫ್ರೀ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ