ವೊಡಾಫೋನ್‌ನಿಂದ ಅತಿ ಕಡಿಮೆ ಬೆಲೆಯ ₹26 ಪ್ಲಾನ್ ರಿಲೀಸ್; ಸಿಗಲಿದೆ 1.5GB extra ಡೇಟಾ

Published : Dec 08, 2024, 02:01 PM IST
ವೊಡಾಫೋನ್‌ನಿಂದ ಅತಿ ಕಡಿಮೆ ಬೆಲೆಯ ₹26 ಪ್ಲಾನ್ ರಿಲೀಸ್; ಸಿಗಲಿದೆ 1.5GB extra ಡೇಟಾ

ಸಾರಾಂಶ

ವೊಡಾಫೋನ್ ಐಡಿಯಾ ₹26ರ ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಪ್ಲಾನ್‌ನಲ್ಲಿ 1.5GB ಹೆಚ್ಚುವರಿ ಡೇಟಾ ಸೌಲಭ್ಯವಿದೆ. 26 ರೂಪಾಯಿ ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ.

ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಬೆಲೆ ಏರಿಕೆ ಮಾಡಿಕೊಂಡ ನಂತರ, ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಿವೆ. ಬೆಲೆ ಏರಿಕೆ ಬಳಿಕ ಗ್ರಾಹಕರನ್ನು ಉಳಿಸಿಕೊಳ್ಳಲು ಜಿಯೋ ಮತ್ತು ಏರ್‌ಟೆಲ್ ಪೈಪೋಟಿಗೆ ಬಿದ್ದಂತೆ ಹಲವು ಬೆನೆಫಿಟ್ ಜೊತೆ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿವೆ.  ಇದೀಗ ವೊಡಾಫೋನ್ ಐಡಿಯಾ 26 ರೂಪಾಯಿಯ ಅತಿ ಕಡಿಮೆ ಬೆಲೆಯ ಪ್ಲಾನ್ ಘೋಷಿಸಿದೆ. ಈ ಪ್ಲಾನ್‌ನಲ್ಲಿ ಎಸ್ಎಂಎಸ್ ಮತ್ತು ಕಾಲಿಂಗ್ ಜೊತೆ ಹೆಚ್ಚುವರಿಯಾಗಿ 1.5GB ಡೇಟಾ ಸಹ ಸಿಗುತ್ತಿದೆ. 

ವೊಡಾಫೋನ್ ಐಡಿಯಾ ದೇಶದ ಅತಿದೊಡ್ಡ ಮೂರನೇ ಟೆಲಿಕಾಂ ಕಂಪನಿಯಾಗಿದೆ. ಮೂರು ಟೆಲಿಕಾಂ ಕಂಪನಿಗಳು ಸದ್ಯ ಶೇ.25ರಷ್ಟು ರಿಯಾಯ್ತಿ ನೀಡಿ ಹೊಸ ಆಫರ್ ಬಿಡುಗಡೆಗೊಳಿಸುತ್ತಿವೆ. 26 ರೂಪಾಯಿ ಈ ಪ್ಲಾನ್ 1 ದಿನದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಹಾಗೆ ಇದರಲ್ಲಿ ಯಾವುದೇ ಉಚಿತ ಎಸ್ಎಂಎಸ್ ಯಾವುದೇ ಸೌಲಭ್ಯಗಳಿರಲ್ಲ. ದಿನದ ಡೇಟಾ ಮುಕ್ತಾಯಗೊಂಡ ಸಂದರ್ಭದಲ್ಲಿ ಎಮೆರ್ಜೆನ್ಸಿ ಇಂಟರ್‌ನೆಟ್ ಬಳಕೆಗಾಗಿ 26 ರೂಪಾಯಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬಹುದು. 

ಇದನ್ನೂ ಓದಿ: ತಮಗಿಂತ ಜೊಮ್ಯಾಟೋ ಮಾಲೀಕ ದೀಪೇಂದ್ರ ಹೇಗೆ ಶ್ರೇಷ್ಠ ಎಂಬುದನ್ನ ಹೇಳಿದ್ರು ನಾರಾಯಣಮೂರ್ತಿ

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡರ ಬಳಿಯಲ್ಲಿಯೂ 26  ರೂಪಾಯಿ ಪ್ಲಾನ್ ಹೊಂದಿವೆ. ಒಂದು ದಿನಕ್ಕೆ ಡೇಟಾ ಲಿಮಿಟ್ ಹೆಚ್ಚಿಸಿಕೊಳ್ಳಲು ಇಚ್ಛಿಸುವ ಗ್ರಾಹಕರು 26 ರೂ.ಯ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಈ ಪ್ಲಾನ್ ಆಕ್ಟಿವೇಷನ್‌ಗೆ ಬೇಸ್ ಪ್ಲಾನ್ ಚಾಲ್ತಿಯಲ್ಲಿರಬೇಕು.  ನಿಮ್ಮ ಸಂಖ್ಯೆಯಲ್ಲಿ ಯಾವುದೇ ಬೇಸ್ ಪ್ಲಾನ್ ಇದ್ರೆ 26 ರೂ. ವೋಚರ್ ಪ್ಲಾನ್ ಆಕ್ಟಿವೇಟ್ ಆಗಲ್ಲ.

ನೀವು Vi ಗ್ರಾಹಕರಾಗಿದ್ದರೆ ಮತ್ತು ನಿಮ್ಮ ದೈನಂದಿನ ಡೇಟಾ ಖಾಲಿಯಾಗಿದ್ದರೆ, ಈ ಯೋಜನೆಯಿಂದ ನೀವು 1.5GB ಹೆಚ್ಚುವರಿ ಡೇಟಾವನ್ನು ಪಡೆಯಬಹುದು. ಇದರ ಹೊರತಾಗಿ, 1GB ಹೆಚ್ಚುವರಿ ಡೇಟಾಕ್ಕಾಗಿ ರೂ 22 ರ ಮತ್ತೊಂದು ವೋಚರ್ ಸಹ ಲಭ್ಯವಿದೆ, ಇದು ಕಂಪನಿಯ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ, ಅದನ್ನು ಸುಲಭವಾಗಿ ರೀಚಾರ್ಜ್ ಮಾಡಬಹುದು.

ಇದನ್ನೂ ಓದಿ: ಹೊಸ ವರ್ಷಕ್ಕೂ ಮೊದಲೇ ಬಂಪರ್ ಆಫರ್- ಸೂಪರ್ ಪ್ಲಾನ್‌ನಲ್ಲಿ ₹200 ಇಳಿಕೆ, ಪ್ರತಿದಿನ 2 ಅಲ್ಲ, 3GB ಡೇಟಾ ಫ್ರೀ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

Mobile history ಕ್ಲಿಯರ್​ ಮಾಡಿದ್ರೂ ನೋಡಿದ್ದೆಲ್ಲಾ ಸೇವ್​ ಆಗಿರತ್ತೆ: ಪರ್ಮನೆಂಟ್​ ಡಿಲೀಟ್​ ಮಾಡೋದು ಹೇಗೆ?
ಆ್ಯಪಲ್‌ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್