ಹೊಸ 14 ಫೋನ್ ಬಿಡುಗಡೆಯಿಂದ ರೆಡ್‌ಮಿ 13 ಪ್ರೋ + 5ಜಿ ಫೋನ್ ಬೆಲೆ ಭಾರಿ ಕಡಿತ!

Published : Dec 08, 2024, 02:47 PM ISTUpdated : Dec 08, 2024, 02:48 PM IST
ಹೊಸ 14 ಫೋನ್ ಬಿಡುಗಡೆಯಿಂದ ರೆಡ್‌ಮಿ 13 ಪ್ರೋ + 5ಜಿ ಫೋನ್ ಬೆಲೆ ಭಾರಿ ಕಡಿತ!

ಸಾರಾಂಶ

ರೆಡ್‌ಮಿ 14 ಸೀರಿಸ್ ಡಿ.9ಕ್ಕೆ ಬಿಡುಗಡೆಯಾಗುತ್ತಿದೆ. ಈ ಫೋನ್ ಬಿಡುಗಡೆ ಹಿನ್ನಲೆಯಲ್ಲಿ ಇದೀಗ ರೆಡ್‌ಮಿ 13 ಪ್ರೋ ಪ್ಲಸ್ 5ಜಿ ಫೋನ್ ಬೆಲೆಯಲ್ಲಿ ಭಾರಿ ಕಡಿತವಾಗಿದೆ. ಇದೀಗ ಕೈಕೆಟುಕುವ ದರದಲ್ಲಿ ಹೊಸ ರೆಡ್‌ಮಿ 13 ಪ್ರೋ + 5ಜಿ ಖರೀದಿ ಸಾಧ್ಯವಾಗುತ್ತಿದೆ.

ನವದೆಹಲಿ(ಡಿ.08) ಭಾರತದಲ್ಲಿ ರೆಡ್‌ಮಿಫೋನ್‌ಗಳು ಅತೀ ಹೆಚ್ಚು ಮಾರಾಟ ಕಾಣುತ್ತಿದೆ. ಅತೀ ಕಡಿಮೆ ಬೆಲೆಯಲ್ಲಿ ಗರಿಷ್ಠ ಫೀಚರ್ಸ್ ನೀಡುವ ಈ ಫೋನ್ ಅತ್ಯಾಕರ್ಷಕ ವಿನ್ಯಾಸ, ಬಣ್ಣದಲ್ಲೂ ಲಭ್ಯವಿದೆ. ಇದೀಗ ರೆಡ್‌ಮಿ ಭಾರತದಲ್ಲಿ 14 ಸೀರಿಸ್ ಫೋನ್ ಬಿಡುಗಡೆ ಮಾಡುತ್ತಿದೆ. ಡಿಸೆಂಬರ್ 9 ರಂದು ಹೊಸ ರೆಡ್‌ಮಿ 14 ಸೀರಿಸ್ ಫೋನ್ ಬಿಡುಗಡೆಯಾಗುತ್ತಿದೆ. ಹೀಗಾಗಿ ರೆಡ್‌ಮಿ 13 ಪ್ರೋ + 5ಜಿ ಫೋನ್‌ಗೆ ಡಿಸ್ಕೌಂಟ್ ಘೋಷಿಸಲಾಗಿದೆ. ಬರೋಬ್ಬರಿ 6 ಸಾವಿರ ರೂಪಾಯಿ ಕಡಿತಗೊಂಡಿದೆ. 

ರೆಡ್‌ಮಿ 13 ಪ್ರೋ + 5ಜಿ ಫೋನ್ ಡಿಸ್ಕೌಂಟ್ ಹಾಗೂ ಪ್ರಸಕ್ತ ಬೆಲೆ
ರೆಡ್‌ಮಿ 13 ಪ್ರೋ + 5ಜಿ ಫೋನ್ ಹಲವು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಪ್ರಮುಖವಾಗಿ 8ಜಿಪಿRAM ಹಾಗೂ 256 ಜಿಬಿ ಸ್ಟೋರೇಜ್‌ನಿಂದ ಆರಂಭಗೊಳ್ಳುತ್ತಿದೆ. ಈ ಪೈಕಿ 12ಜಿಬಿ RAM + 256 ಜಿಬಿ ಸ್ಟೋರೇಜ್, 12ಜಿಬಿ RAM + 512 ಜಿಬಿ ಸ್ಟೋರೇಜ್ ಸಾಮರ್ಥ್ಯದ ಫೋನ್ ಲಭ್ಯವಿದೆ. ಡಿಸ್ಕೌಂಟ್‌ಗೂ ಮೊದಲು ಈ ಫೋನ್ ಆರಂಭಿಕ ಬೆಲೆ 33,999 ರೂಪಾಯಿ. ಆದರೆ ಡಿಸ್ಕೌಂಟ್ ಬಳಿಕ ಈ ಫೋನ್ ಆರಂಭಿಕ ಬೆಲೆ ಇದೀಗ 27,998 ರೂಪಾಯಿಗೆ ಇಳಿಕೆಯಾಗಿದೆ.  

ವಿಶೇಷ ಅಂದರೆ ಈ ಫೋನ್ ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ 4,000 ರೂಪಾಯಿ ಫ್ಲ್ಯಾಟ್ ಡಿಸ್ಕೌಂಟ್ ಪಡೆಯಲು ಸಾಧ್ಯವಿದೆ. ಕೆಲ ಬ್ಯಾಂಕ್ ಕಾರ್ಡ್‌ಗಳ ಮೂಲಕ ಆಫರ್ ಪಡೆಯಬಹುದು. ಇದರಿಂದ ರೆಡ್‌ಮಿ 13 ಪ್ರೋ + 5ಜಿ ಫೋನ್ ಕೈಗೆಟುಕುವ ದರದಲ್ಲಿ ಲಭ್ಯವಿದೆ.

ನಿಮ್ಮ ಕೈಗೆಟುವ ದರದಲ್ಲಿ ಸಿಗಲಿವೆ ಈ 5 ಬೆಸ್ಟ್ ಸ್ಮಾರ್ಟ್‌ಫೋನ್‌ಗಳು!

ರೆಡ್‌ಮಿ 13 ಪ್ರೋ + 5ಜಿ ವಿಶೇಷತೆ
ರೆಡ್‌ಮಿ 13 ಪ್ರೋ + 5ಜಿ ಫೋನ್ ಹಲವು ವಿಶೇಷತೆ ಹೊಂದಿದೆ. 6.67 ಇಂಚಿನ ಡಿಸ್‌ಪ್ಲೆ ಹೊಂದಿದೆ. ಇದರಿಂದ ವಿಡಿಯೋ ವಾಚ್, ಗೇಮ್ ಸೇರಿದಂತೆ ಬಳಕೆಗೆ ಉತ್ತಮ ಅನುಭವ ನೀಡಲಿದೆ. ಮತ್ತೊಂದು ವಿಶೇಷ ಅಂದರೆ ಸ್ಕ್ರೀನ್ ಯಾವುದೇ ಸ್ಕ್ರಾಚ್‌ನಿಂದ ಮುಕ್ತವಾಗಲಿದೆ. ಇದಕ್ಕಾಗಿ ಸ್ಕ್ರಾಚ್ ರೆಸಿಸ್ಟೆಂಟ್ ಗ್ಲಾಸ್ ಬಳಕೆ ಮಾಡಲಾಗಿದೆ.  ಫ್ಯೂಶನ್ ಬ್ಲಾಕ್, ಪರ್ಪಲ್, ವೈಟ್ ಹಾಗೂ ಬ್ಲೂ ಬಣ್ಣದಲ್ಲಿ ಫೋನ್ ಲಭ್ಯವಿದೆ. 

ಇನ್ನು ಫೋನ್ ಮಿಡಿಯಾಟೆಕ್ ಡೈಮೆನ್ಸಿಟಿ 7200 ಒಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದರಿಂದ ಫೋನ್ ಬಳಕೆ ಸುಲಭವಾಗಿದೆ. ಯಾವುದೇ ರೀತಿಯಲ್ಲಿ ಹ್ಯಾಂಗ್ ಆಗುವ ಸಮಸ್ಯೆ ಇರುವುದಿಲ್ಲ. ಎಲ್ಲಾ ಆ್ಯಪ್‌ಗಳಿಗೆ ಸಪೋರ್ಟ್ ಮಾಡಲಿದೆ. ಬಳಕೆದಾರರು ಸ್ಟೋರೇಜ್ ಸುಲಭವಾಗಿ ಮಾಡುಬಹುದು. ಮುಖ್ಯ ಕ್ಯಾಮೆರಾ 200 MP, ಫ್ರಂಟ್ ಹಾಗೂ ಸೆಲ್ಫಿ ಕ್ಯಾಮೆರಾ 16 ಎಂಪಿ ಹೊಂದಿದೆ. ಇದರಿಂದ ಫೋನ್ ಫೋಟೋ ಹಾಗೂ ವಿಡಿಯೋ ಕ್ವಾಲಿಟಿ ಉತ್ತಮವಾಗಿದೆ. 5000mAh ಬ್ಯಾಟರಿ ಹೊಂದಿದೆ. ಜೊತಗೆ 120W ಫಾಸ್ಟ್ ಚಾರ್ಜಿಂಗ್ ಫೀಚರ್ ಹೊಂದಿದೆ. ಇದರಿಂದ ತಕ್ಷಣವೇ ಬ್ಯಾಟರಿ ಚಾರ್ಜ್ ಆಗಲಿದೆ. ಇಷ್ಟೇ ಅಲ್ಲ ಸುದೀರ್ಘ ಸಮಯ ಬ್ಯಾಟರಿ ಚಾರ್ಜ್ ಇರಲಿದೆ.

ರೆಡ್‌ಮಿ ಫೋನ್ ಭಾರತದಲ್ಲಿ ದಾಖಲೆಯ ಮಾರಾಟ ಕಾಣುತ್ತಿದೆ. ಚೀನಾಗಿಂತ ಭಾರತದಲ್ಲೇ ರೆಡ್‌ಮಿ ಫೋನ್ ಅತೀ ಹೆಚ್ಚು ಮಾರಾಟ ಕಾಣುತ್ತಿದೆ. 

ಡಿಸೆಂಬರ್ 9 ರಂದು ಬಿಡುಗಡೆಯಾಗಲಿರುವ ರೆಡ್‌ಮಿ 14 ಸೀರಿಸ್ ಫೋನ್ 50ಎಂಪಿ ಸೋನಿ ಎಲ್‌ವೈಟಿ 600 ಕ್ಯಾಮೆರಾ ಹೊಂದಿದೆ. 2ಎಂಪಿ ಡೆಪ್ತ್ ಸೆನ್ಸಾರ್ ಹಾಗೂ 16 ಎಂಪಿ ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. 6.67 AMOLED ಹೆಚ್‌ಡಿ ಫುಲ್ ಡಿಸ್‌ಪ್ಲೇ ಹೊಂದಿದೆ. ರೆಡ್‌ಮಿ 14 ಸೀರಿಸ್ ಫೋನ್ ಬೆಲೆ 21,999 ರೂಪಾಯಿಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ