ಹೊಸ ವರ್ಷ ಆಫರ್‌ಗಳು ಮುಗಿಯುತ್ತಿರುವ ಬೆನ್ನಲ್ಲೇ, ಗಣರಾಜ್ಯ ದಿನದ ಆಫರ್‌ಗಳು ಗ್ರಾಹಕರನ್ನು ಹುಡುಕುತ್ತಾ ಬಂದಿವೆ. ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆಫರ್ ನೀಡುವುದರಲ್ಲಿ ಮೊಬೈಲ್ ಕಂಪನಿಗಳು ಹಿಂದೆ ಬಿದ್ದಿಲ್ಲ.
ಮೊಬೈಲ್ ಮಾರುಕಟ್ಟೆಗೆ ಇತ್ತೀಚಿಗಿನ ವರ್ಷಗಳಲ್ಲಿ ಪದಾರ್ಪಣೆ ಮಾಡಿರುವ Realme, ದಿಗ್ಗಜ ಮೊಬೈಲ್ ತಯಾರಕ ಕಂಪನಿಗಳೊಂದಿಗೆ ಪೈಪೋಟಿಗಿಳಿದಿದೆ. ತಂತ್ರಜ್ಞಾನ ಮತ್ತು ಗುಣಮಟ್ಟ ಮಾತ್ರವಲ್ಲದೇ, ಬೆಲೆಯ ದೃಷ್ಟಿಯಿಂದಲೂ ಗ್ರಾಹಕರ ಪ್ರಶಂಸೆಗೆ Realme ಪಾತ್ರವಾಗಿದೆ.
ಇದೀಗ Realme ಮೊಬೈಲ್ ಕಂಪನಿಯು ರಿಪಬ್ಲಿಕ್ ಸೇಲ್ ಆಫರನ್ನು ಪ್ರಕಟಿಸಿದ್ದು, ಫ್ಲಿಪ್ ಕಾರ್ಟ್, ಅಮೆಜಾನ್ ಹಾಗೂ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಜ.20 ರಿಂದ ಜ.23ರವರೆಗೆ ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು.
ಜಿಯೋಗೆ ಸೆಡ್ಡು ಹೊಡೆದ BSNL! ಈ ಪ್ಲಾನ್‌ನಲ್ಲಿ ಪ್ರತಿದಿನ 3.21 GB ಡೇಟಾ ಉಚಿತ!
ಈ 4 ದಿನದ ‘ಸೇಲ್’ನಲ್ಲಿ, ಇತ್ತೀಚೆಗೆ ಮಾರುಕಟ್ಟೆಗೆ ಬಂದ Realme 2 Pro ಖರೀದಿಸುವವರಿಗೆ ₹1000 ಡಿಸ್ಕೌಂಟ್ ಸಿಗಲಿದೆ.
Realme 2 Pro ಮೂರು ಆವೃತ್ತಿಗಳಲ್ಲಿ ಲಭ್ಯವಿದ್ದು, 4GB RAM ಫೋನ್ ಬೆಲೆ ₹13990, 6GB RAM ಫೋನ್ ಬೆಲೆ ₹15,990 ಹಾಗೂ 8GB RAM ಫೋನ್ ಬೆಲೆ ₹ 17,990 ಆಗಿದೆ. ಆಫರ್‌ನಲ್ಲಿ ಈ ಪೋನ್‌ಗಳ ಬೆಲೆ ಕ್ರಮವಾಗಿ ₹12,990, ₹ 14,990 ಮತ್ತು ₹ 16,990 ಆಗುವುದು.
Realme C1 ಫೋನ್‌ಗಳ ಎಲ್ಲಾ ಆವೃತ್ತಿಗಳ ಮೇಲೆ ₹500 ರಿಯಾಯಿತಿ ಇರುವುದು. Realme U1 ಫೋನ್‌ಗಳ ಮೇಲೆ ₹1000 ರಿಯಾಯಿತಿ ಇದೆ.ಈ ಆಫರ್‌ನಲ್ಲಿ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸುವವರಿಗೆ EMI ಸೌಲಭ್ಯವನ್ನೂ ಪಡೆದುಕೊಳ್ಳಬಹುದು.
ಇವುಗಳ ಹೊರತಾಗಿ, Realme ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಪಬ್ಲಿಕ್ ಹೀರೋಸ್ ಎಂಬ ಸ್ಪರ್ಧೆಗೂ ಚಾಲನೆ ನೀಡಿದೆ. ಇವುಗಳಲ್ಲಿ ಭಾಗವಹಿಸುವವರಿಗೆ ₹100, ₹1000 ಕೂಪನ್, Realme ಇಯರ್ ಫೋನ್, ಮೊಬೈಲ್ ಗೆಲ್ಲುವ ಅವಕಾಶಗಳೂ ಇವೆ.
ಇನ್ಮುಂದೆ ಈ ವೆಬ್‌ಸೈಟ್‌ಗಳ ಆಟ ನಡೆಯಲ್ಲ! ಮಾಸ್ಟರ್ ಸ್ಟ್ರೋಕ್‌ಗೆ ಮುಂದಾಗಿದೆ ಮೋದಿ ಸರ್ಕಾರ