ಇನ್ಯಾಕೆ ಚಿಂತೆ? ವಾಟ್ಸಪ್‌ನಿಂದ ಹೊಸ ವರ್ಷಕ್ಕೆ ಬರ್ತಿದೆ ಹೊಸ ಫೀಚರ್!

By Web Desk  |  First Published Jan 10, 2019, 6:31 PM IST

ಗೂಗಲ್‌ನಿಂದ ಕಾರ್ಯ ನಿರ್ವಹಿಸುವ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಸೌಲಭ್ಯ | ಇನ್ನು ಕೆಲವೇ ದಿನಗಳಲ್ಲಿ ಹೊಸ ಫೀಚರ್ | WhatsApp ಪರಿಚಯಿಸುತ್ತಿದೆ ಫಿಂಗರ್‌ಪ್ರಿಂಟ್‌ ಸೆಕ್ಯುರಿಟಿ 
 


WhatsAppಗೂ ಫಿಂಗರ್‌ಪ್ರಿಂಟ್‌ ಲಾಕ್‌ ಬರುತ್ತಿದೆ. ಫೇಸ್‌ಬುಕ್‌ ಒಡೆತನದಲ್ಲಿರುವ WhatsAppಗೆ ಫಿಂಗರ್‌ಪ್ರಿಂಟ್‌ ಸೆಕ್ಯೂರಿಟಿ ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಸಂಸ್ಥೆ ಇದೀಗ ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಸಿಸ್ಟಮ್‌ಅನ್ನು ಬಳಕೆಗೆ ತರಲು ಮುಂದಾಗಿದೆ. 

ಗೂಗಲ್‌ನಿಂದ ಕಾರ್ಯ ನಿರ್ವಹಿಸುವ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಸೌಲಭ್ಯ ಸಿಗಲಿದೆ. ಕೆಲವೇ ದಿನಗಳಲ್ಲಿ ಗೂಗಲ್‌ ಪ್ಲೇ ಬೀಟಾ ಪ್ರೋಗ್ರಾಮ್‌ನಲ್ಲಿ WhatsAppನ್ನು ಅಪ್‌ಡೇಟ್‌ ಮಾಡಿದರೆ ಈ ಸೌಲಭ್ಯವನ್ನು ಪಡೆಯಬಹುದು. 

Tap to resize

Latest Videos

ಇದನ್ನೂ ಓದಿ: ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?

ಈ ಅಧಿಕೃತ ವ್ಯವಸ್ಥೆಯಲ್ಲಿ ಈಗ ಜನಪ್ರಿಯವಾಗುತ್ತಿರುವ ಥರ್ಡ್ ಪಾರ್ಟಿ ಲಾಕಿಂಗ್‌ ಆ್ಯಪ್‌ಗಳಿರುವುದು ವಿಶೇಷ. ಒಮ್ಮೆ ಈ ಸೌಲಭ್ಯ ಚಾಲ್ತಿಗೆ ಬಂದರೆ ನಮ್ಮ ಗುರುತಿನ ಮೂಲಕವೇ ಆ್ಯಪ್‌ ಓಪನ್‌ ಆಗುವಂಥ ಸೌಲಭ್ಯ ಪಡೆಯಬಹುದು. ಇದರಿಂದ WhatsAppನಲ್ಲಿ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ. ಡಬ್ಲ್ಯೂಎ ಬೀಟಾ ಇಸ್ಫೋ ವರದಿಯೂ ಈ ವಿಷಯವನ್ನು ಅಧಿಕೃತವೆಂದು ಘೋಷಿಸಿದೆ.

ಈ ಹಿಂದೆ ಫೇಸ್‌ ರೆಕಗ್ನಿಶನ್‌, ಟಚ್‌ ಐಡಿ ವ್ಯವಸ್ಥೆಯನ್ನು ಮಾಡುವುದಾಗಿಯೂ WhatsApp ಹೇಳಿಕೊಂಡಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ವಿಫಲವಾಯಿತು. ಕಳೆದ ವರ್ಷ WhatsApp ಅತೀ ಹೆಚ್ಚು ಫೀಚರ್‌ಗಳನ್ನು ಪರಿಚಯಿಸಿತ್ತು. 

ಇದನ್ನೂ ಓದಿ: ಸೂಪರ್ ಬ್ಲಡ್ ವೂಲ್ಫ್ ಮೂನ್ ಕಣ್ತುಂಬಿಕೊಳ್ಳಿ...

ಫೇಸ್‌ಬುಕ್‌ನಿಂದ ನೇರ WhatsAppಗೆ ಮಾಹಿತಿ ರವಾನೆ, ಗ್ರೂಪ್‌ ವೀಡಿಯೋ ಕಾಲ್‌ ವ್ಯವಸ್ಥೆ, ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ಗೆ ಹೆಚ್ಚಿನ ಅಧಿಕಾರ ಇತ್ಯಾದಿಗಳು ಇದರಲ್ಲಿ ಪ್ರಮುಖವಾದವು. ಈ ವರ್ಷದ ಆರಂಭದಲ್ಲೇ ಮತ್ತೊಂದು ಬಂಪರ್‌ ಕೊಡುಗೆ ನೀಡಿ ಗ್ರಾಹಕನ ಮನ ತಣಿಸಲು ಮುಂದಾಗಿದೆ.

click me!