ವಾಟ್ಸಪ್ ಹೊಸ ಫೀಚರ್; ಇನ್ಮುಂದೆ ಎಲ್ಲವೂ ಇಲ್ಲೇ, ಹೋಗಬೇಕಿಲ್ಲ ಬೇರೆಲ್ಲೂ!

By Web Desk  |  First Published Dec 19, 2018, 9:13 PM IST

WhatsAppನಿಂದ ಬಳಕೆದಾರರಿಗೆ ಹೊಸ ಫೀಚರ್‌! WhatsApp ಬಿಟ್ಟು ಬೇರೆಲ್ಲೂ ಹೋಗೋದು, ಮತ್ತೆ ವಾಪಸು ಬರೋದು ಕಿರಿಕಿರಿ ಇನ್ನಿಲ್ಲ; ಏನದು ಅಂತಹ ಹೊಸ ಫೀಚರ್? ಇಲ್ಲಿದೆ ಡೀಟೆಲ್ಸ್...


ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸಂವಹನಕ್ಕೆ WhatsApp ಹೊಸ ಭಾಷ್ಯ ಬರೆದಿದೆ.  Facebook ಒಡೆತನದ WhatsApp  ಜನಜೀವನದ ಅವಿಭಾಜ್ಯ ಅಂಗವಾಗಿರುವುದು ಅಷ್ಟೇ ಸತ್ಯ.

ಅದಕ್ಕೆ ಕಾರಣಗಳೂ ಇವೆ. ಕೇವಲ ಟೆಕ್ಸ್ಟ್ ಮೆಸೇಜ್‌ಗಳಿಂದ ಆರಂಭವಾದ ಈ WhatsApp ಸೇವೆ ಇಂದು ಹಲವಾರು ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಿದೆ.

Tap to resize

Latest Videos

ಬಳಕೆದಾರರ ಬೇಡಿಕೆ, ಬದಲಾಗುತ್ತಿರುವ ಅವಶ್ಯಕತೆಗಳನ್ನು ಮುಂದಿಟ್ಟುಕೊಂಡು ಯಾವತ್ತೂ ಹೊಸತನವನ್ನು ನೀಡುತ್ತಾ ಬಂದಿರುವುದು WhatsApp ಹೆಗ್ಗಳಿಕೆ. ಈ ಕಾರಣದಿಂದಲೇ ಅದು ಬೆಳೆದಂತೆ, ಜನರ ಹತ್ತಿರವಾಗುತ್ತಾ ಬಂದಿದೆ.

ಇದನ್ನೂ ಓದಿ: ವಿಶ್ವದ ಮೊದಲ 5G ಪೋನ್‌ನ ಡೆಮೋ ಕೊಟ್ಟ Xiaomi! ಹೇಗಿದೆ ನೋಡಿ...

ಅದಿರಲಿ, ಈಗ WhatsApp ಒಂದು ಹೊಸ ಫೀಚರನ್ನು ಪರಿಚಯಿಸಿದೆ. ನೇರವಾಗಿ ಹೇಳೋದಾದರೆ, ಅದು  Picture-in-Picture (PiP) ಫೀಚರ್. ಏನಿದು Picture-in-Picture ಎಂದು ನಿಮ್ಮ ಮುಂದಿನ ಪ್ರಶ್ನೆಯಾಗಿರಬಹುದು. ಅದಕ್ಕೆ ಇಲ್ಲಿದೆ ಉತ್ತರ..

ನಿಮಗೆ WhatsAppನಲ್ಲಿ ಯಾರಾದರೂ ಒಂದು Facebook, Instagram ಅಥವಾ Youtubeನ ವಿಡಿಯೋ ಲಿಂಕನ್ನು ಕಳುಹಿಸಿದ್ರು ಎಂದಿಟ್ಟುಕೊಳ್ಳಿ. 

ಸಾಮಾನ್ಯವಾಗಿ, ನೀವು ಆ ಲಿಂಕನ್ನು ತೆರೆದರೆ, ಅದು ಆಯಾಯ ಪ್ಲಾಟ್‌ಫಾರ್ಮ್‌ (Facebook, Instagram, Youtube)ಗೆ ಹೋಗಿ ತೆರೆದುಕೊಳ್ಳುತ್ತದೆ. ಅದರರ್ಥ ನೀವು WhatsAppನಿಂದ ಹೊರ ಹೋಗಿರುತ್ತೀರಿ.

ಆದರೆ, WhatsApp ಈಗ ಪರಿಚಯಿಸಿರುವ ಹೊಸ ಫೀಚರ್ Picture-in-Picture (PiP)ನಲ್ಲಿ ಹಾಗಾಗಲ್ಲ! ಲಿಂಕ್ ಒತ್ತಿದ ಕೂಡಲೇ ಆ ವಿಡಿಯೋ, ಅಲ್ಲೇ ಸಣ್ಣ ವಿಂಡೋನಲ್ಲಿ ತೆರೆದುಕೊಳ್ಳುತ್ತದೆ.  ವೀಡಿಯೋ ನೋಡಿದ ಬಳಿಕ ನೀವು ಸ್ಕ್ರಾಲ್ ಡೌನ್ ಮಾಡಿದರೆ ಸಾಕು WhatsApp ಚಾಟ್ ವಿಂಡೋನಲ್ಲೇ ಮುಂದುವರಿಯುತ್ತೀರಿ!

ಇದನ್ನೂ ಓದಿ: ವೈರಸ್ ಹಾವಳಿ, 22 ಆ್ಯಪ್‌ ಪ್ಲೇಸ್ಟೋರ್‌ನಿಂದ ಡಿಲೀಟ್! ನಿಮ್ಮ ಫೋನಿನಲ್ಲಿದಿಯಾ?

ಇನ್ನೊಂದು ವಿಷಯ, ಈ ಫೀಚರ್ ಗ್ರೂಪ್‌ಗಳಲ್ಲೂ ವರ್ಕ್ ಆಗುತ್ತೆ. ಹಾಂ, ಅಂದ ಹಾಗೇ ಈ ಫೀಚರ್ Facebook, Instagram, Youtube ಗಳ ಲಿಂಕ್‌ಗಳಿಗೆ ಮಾತ್ರ ಸೀಮಿತ.  ಇವುಗಳ ಹೊರತು ಬೇರೆ ವೆಬ್‌ಸೈಟ್‌ಗಳಲ್ಲಿರುವ  ವಿಡಿಯೋಗಳಿಗೆ ಹೊಸ ಫೀಚರ್ ಸಪೋರ್ಟ್ ಮಾಡಲ್ಲ. 

ಈ ಹೊಸ ಫೀಚರನ್ನು ಪ್ರಾಯೋಗಿಕವಾಗಿ ಕಳೆದ ಅಕ್ಟೋಬರ್‌ನಲ್ಲೇ ಪರಿಚಯಿಸಲಾಗಿತ್ತಾದರೂ, ಈಗ  WhatsApp version 2.18.380ನಲ್ಲಿ ಎಲ್ಲಾ ಆ್ಯಂಡ್ರಾಯಿಡ್ ಬಳಕೆದಾರರಿಗೆ ಲಭ್ಯವಿದೆ. iPhone ಇಟ್ಕೊಂಡವರು ಚಿಂತಿಸಬೇಕಿಲ್ಲ.... iPhoneನಲ್ಲಿ ವಾಟ್ಸಪ್ ಬಳಕೆದಾರರಿಗೆ ಇಂತಹದ್ದೇ ಒಂದು ಫೀಚರ್ ಕಳೆದ ಜನವರಿಯಿಂದಲೇ ಲಭ್ಯವಿದೆ.

ಮತ್ತೇಕೆ ತಡ, ಈಗಲೇ ನಿಮ್ಮ WhatsAppನ್ನು ಅಪ್ಗ್ರೇಡ್ ಮಾಡಿ, ಚಾಟ್ ಮಾಡುತ್ತಾ ವಿಡಿಯೋಗಳನ್ನು ಎಂಜಾಯ್ ಮಾಡಿ!

click me!