OnePlus 6T ಕೊಳ್ಳುವವರಿಗೆ ಅಮೆಜಾನ್‌ನಲ್ಲಿ ಭರ್ಜರಿ ಆಫರ್!

Published : Nov 28, 2018, 02:19 PM ISTUpdated : Nov 28, 2018, 02:54 PM IST
OnePlus 6T ಕೊಳ್ಳುವವರಿಗೆ ಅಮೆಜಾನ್‌ನಲ್ಲಿ ಭರ್ಜರಿ ಆಫರ್!

ಸಾರಾಂಶ

ಇತ್ತೀಚೆಗೆ ಬಿಡುಗಡೆಯಾದ OnePlus 6T ಮೊಬೈಲ್‌ ಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. OnePlus ಹಾಗೂ Amazon ತಮ್ಮ ಸಹಭಾಗಿತ್ವದ ನಾಲ್ಕನೇ ವರ್ಷಾಚರಣೆ ಪ್ರಯುಕ್ತ ಭರ್ಜರಿ ಆಫರ್‌ಗಳನ್ನು ಪ್ರಕಟಿಸಿದೆ.   

ಒನ್ ಪ್ಲಸ್ ಹಾಗೂ ಇ-ಕಾಮರ್ಸ್ ದೈತ್ಯ ಅಮೆಜಾನ್ ತಮ್ಮ ಸಹಬಾಗಿತ್ವದ ನಾಲ್ಕನೆ  ವಾರ್ಷಿಕೋತ್ಸವನ್ನು ಆಚರಿಸುತ್ತಿವೆ. ಈ ಸಂದರ್ಭದಲ್ಲಿ  ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ಪ್ರಕಟಿಸಿದೆ.

ಈ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಯಾದ OnePlus 6T ಖರೀದಿಸುವವರಿಗೆ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ಸಂಸ್ಥೆಯು ನೀಡುತ್ತಿದೆ. ನ.30 ರಿಂದ ಈ ಆಫರ್ ಶುರುವಾಗಲಿದ್ದು,  ಸಿಟಿಬ್ಯಾಂಕ್ ಡೆಬಿಟ್ ಅಥವಾ  ಕ್ರೆಡಿಟ್ ಕಾರ್ಡ್ ಮೂಲಕ OnePlus 6T ಖರೀದಿಸಿದರೆ ₹1500 ಕ್ಯಾಷ್ ಬ್ಯಾಕ್ ಸಿಗಲಿದೆ. 

ಇದನ್ನೂ ಓದಿ: WhatsAppನಿಂದ ಮತ್ತೊಂದು ಬಂಪರ್ ಫೀಚರ್! ಬೇಕಂತಿಲ್ಲ ‘ಲಾಸ್ಟ್ ಸೀನ್‘ ಟೆನ್ಷನ್

ಹಳೆಯ OnePlus ಫೋನ್  ವಿನಿಮಯ ಮಾಡಿ OnePlus 6T ಖರೀದಿಸುವುದಾದರೆ ₹3000 ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಆಫರ್ ಗಳು ಕ್ರೋಮಾ, ರಿಲಯನ್ಸ್ ಡಿಜಿಟಲ್, ಒನ್ ಪ್ಲಸ್ ಸ್ಟೋರ್ಸ್ ಹಾಗೂ oneplus.in ನಲ್ಲೂ ಲಭ್ಯವಿದೆ.

6GB RAM + 128 GB ಸ್ಟೋರೆಜ್ ಸಾಮರ್ಥ್ಯದ OnePlus 6T ಫೋನ್ ಬೆಲೆ ₹37,999 ಆಗಿದೆ. ಭಾರತದಲ್ಲಿ Google Pixel 3 ಬಳಿಕ Android 9 Pie ತಂತ್ರಾಶವನ್ನು ಬಳಸಿದ ಹೆಗ್ಗಳಿಕೆ OnePlus 6Tದ್ದಾಗಿದೆ.  3,700 mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ  OnePlus 6T, ಹಳೆಯ OnePlusಗೆ ಹೋಲಿಸಿದರೆ 20% ಹೆಚ್ಚು ಸಾಮರ್ಥ್ಯ ಹೊಂದಿದೆ.

OnePlus 6Tಯ ಕ್ಯಾಮೆರಾದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನೇ ಬಳಸಲಾಗಿದೆ.  ಮಂದ ಬೆಳಕು ಹಾಗೂ ಹೆಚ್ಚು ಸದ್ದಿರುವಲ್ಲೂ ಉತ್ಕರ್ಷ ಗುಣಮಟ್ಟದ ಫೋಟೋ ಹಾಗೂ ವಿಡಿಯೋ ತೆಗೆಯಲು ಸಹಕಾರಿಯಾಗುವಂತೆ ಕ್ಯಾಮೆರಾವನ್ನು ವಿನ್ಯಾಸಗೊಳಿಸಲಾಗಿದೆ. 

OnePlus 6T ಹೇಗಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ
'AI ನಿಮ್ಮ ಉದ್ಯೋಗ ಕಸಿದುಕೊಳ್ಳಲ್ಲ, ಆದರೆ..'; OPPO ತಜ್ಞರ ಆಘಾತಕಾರಿ ಹೇಳಿಕೆ ವೈರಲ್